ಜ್ಯುವೆಲ್ಲರಿಗಳಲ್ಲಿ ಸಾಕಷ್ಟು ವೆರೈಟಿಗಳು ಆನ್‌ಲೈನ್‌ನಲ್ಲಿ ಸಿಗಬಹುದು, ಆದರೆ ಹೊಸಬಗೆಯ ಆಭರಣಗಳ ಜಾಲತಾಣವೊಂದಿದೆ. ಇದು ಒನ್ ಗ್ರಾಂ ಗೋಲ್ಡ್‌ನ ಆಭರಣಗಳಿಗೆ ಫೇಮಸ್, ಜೊತೆಗೆ ಲೇಟೆಸ್ಟ್ ಡಿಸೈನ್‌ನ ಅಪ್‌ಡೇಟ್‌ಗಳು ಇಲ್ಲಿ ಸಿಗುತ್ತವೆ. ಇಷ್ಟವಾದ್ರೆ ಖರೀದಿಸಲೂ ಬಹುದು. ಕುಷಿ ಡಿಸೈನರ್ ಜ್ಯುವೆಲ್ಲರಿ ಅನ್ನೋದು ಈ ಆನ್‌ಲೈನ್ ಶಾಪ್‌ನ ಹೆಸರು.
ನಮ್ಮ ಹಳೆಯ ಆಭರಣಗಳ ಸೊಗಡು, ಫಿನಿಶಿಂಗ್, ಡಿಸೈನ್‌ಗಳ ಚೆಂದ ಹೊಸಬಗೆಯ ಆಭರಣಗಳಲ್ಲಿ ನಿರೀಕ್ಷಿಸುವುದು ಕಷ್ಟ. ಆದರೆ ಡಿಸೈನರ್ ಜ್ಯುವೆಲ್ಲರಿಗಳಲ್ಲಿ ನಿಮಗೆ ಹೊಸ ಹಳೆಯ ಆಭರಣಗಳ ದೊಡ್ಡ ಕಲೆಕ್ಷನ್ ಸಿಗುತ್ತೆ. ಬ್ರೈಡಲ್ ಆಭರಣಗಳೂ ರೀಸನೆಬಲ್ ರೇಟ್‌ಗೆ ಸಿಗುತ್ತವೆ. ಅಚ್ಚಬಂಗಾರವನ್ನು ಹೋಲುವ ಒನ್‌ಗಾÅಂ ಗೋಲ್ಡ್ ಆಭರಣಗಳ ಸೊಬಗು ಯಾವ ರೀತಿಯಿಂದಲೂ ಬಂಗಾರಕ್ಕಿಂತ ಕಡಿಮೆಯದು ಅನಿಸಲ್ಲ. ಕೆಲವೊಮ್ಮೆ ಚಿನ್ನಕ್ಕಿಂತಲೂ ಚೆಂದ ಅನಿಸುತ್ತೆ.
ಎಥಿ°ಕ್ ಜ್ಯುವೆಲ್ಲರಿಗಳಲ್ಲಿ ಹಂಸದ ಡಿಸೈನ್, ನವಿಲಿನ ಡಿಸೈನ್ ಇರುವ ಆಭರಣಗಳೇ ಹೆಚ್ಚು. ಕುಶಿ ಆನ್‌ಲೈನ್ ಶಾಪ್‌ನಲ್ಲಿ ನಿಮಗೆ ಈ ಅಪರೂಪದ ಹಳೆಯ ವಿನ್ಯಾಸ ಆಭರಣಗಳು ಸಿಗುತ್ತವೆ. ವಿವಾಹಿತ ಹೆಣ್ಮಕ್ಕಳು ಧರಿಸುವ ಕರಿಮಣಿಯಲ್ಲಿ ಡಿಸೈನ್‌ಗಳು ಹೆಚ್ಚು ಸಿಗಲ್ಲ. ಆದರೆ ಇಲ್ಲಿ ದೊಡ್ಡ ಹರಳುಗಳನ್ನು ಬಳಸಿ, ಅರ್ಧಚಂದ್ರಾಕಾರದ ಪೆಂಡೆಂಟ್ ಹಾಕಿ ಕರಿಮಣಿಯನ್ನು ಚೆಂದಕ್ಕೆ ಡಿಸೈನ್ ಮಾಡಿದ್ದಾರೆ.
ನೆಕ್‌ನೆಟ್‌ಗಳ ಅದ್ಭುತ ಸಂಗ್ರಹ ಇಲ್ಲಿದೆ. ಕತ್ತಿಗಂಟಿನಿಲ್ಲುವ ಚೋಕರ್ ಸೆಟ್‌ಗಳಿವೆ. ಹರಳು, ಡಿಸೈನ್‌ಗಳಲ್ಲಿ ಹೊಸತನ ಎದ್ದುಕಾಣುವಂತಿದೆ. ಬೆಳ್ಳನೆಯ ಪುಟ್ಟಹರಳುಗಳು, ದೊಡ್ಡ ಕುಂದನ್‌ಗಳನ್ನು ಸೇರಿಸಿ ನವಿಲಿನ ವಿನ್ಯಾಸದ ಚೆಂದದ ಚೋಕರ್ ರೀಸನೆಬಲ್ ಬೆಲೆಯಲ್ಲಿ ಇಲ್ಲಿ ಸಿಗುತ್ತೆ. ಮುತ್ತಿನ ಆಭರಣಗಳು, ಮೊಗ್ಗು, ಹೂ ವಿನ್ಯಾಸದ ಡಿಸೈನರ್ ನೆಕ್‌ಸೆಟ್‌ಗಳು ವಿನೂತನ ವಿನ್ಯಾಸದಲ್ಲಿ ಗಮನಸೆಳೆಯುವಂತಿವೆ.
ಕುಂದನ್‌ನ್ನು ಅಲ್ಲಲ್ಲಿ ಜೋಡಿಸಿರುವ ಚೆಂದದ ವಾಚ್‌ಗಳಿವೆ, ಈ ಲೇಡೀಸ್ ವಾಚ್‌ಗಳಲ್ಲಿ ವಿವಿಧ ಬಣ್ಣಗಳ ಕುಂದನ್‌ನ್ನು ಜೋಡಿಸಲಾಗಿದೆ. ಇಲ್ಲದೇ ಎಥಿ°ಕ್ ಮಾದರಿ ಲಕ್ಷ್ಮಿ ಸರಗಳು, ಅವಲಕ್ಕಿ ಸರಗಳ ಡಿಸೈನ್ ಗಮನಸೆಳೆಯೋ ಹಾಗಿದೆ. ಅಶ್ವಥ ಎಲೆ ಡಿಸೈನ್‌ನ ಸಾಂಪ್ರದಾಯಿಕ ಶೈಲಿಯ ಬಳೆಗಳು ಇಲ್ ಸಿಗುತ್ತವೆ.
ವಿವರಗಳಿಗೆ: https://www.facebook.com/kushijewellers/photos/a.993578384050989.1073741828.993332707408890/1320430504699107/?type=3&theater
ಸಂಪರ್ಕ: 9488433210