Advertisement

1000 ರೂ. ಭಿಕ್ಷೆ ಪಡೆದು ಮಹಿಳೆಯರು ಡಿಎಂಕೆಗೆ ವೋಟ್‌ ಹಾಕ್ತಾರ?: ಖುಷ್ಬೂ

10:06 PM Mar 12, 2024 | Team Udayavani |

ಚೆನ್ನೈ: ತಮಿಳುನಾಡು ಬಿಜೆಪಿ ನಾಯಕಿಯೂ ಆಗಿರುವ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ, ನಟಿ ಖುಷ್ಬೂ, ತಮಿಳುನಾಡು ಸರ್ಕಾರದಿಂದ ಮಹಿಳೆಯರಿಗೆ ಪ್ರತಿ ತಿಂಗಳು ಹಣ ನೀಡುವ ಯೋಜನೆಯನ್ನು ಟೀಕಿಸಿದ್ದಾರೆ.

Advertisement

“ತಿಂಗಳಿಗೆ 1000 ರೂ. ಭಿಕ್ಷೆ ನೀಡಿದರೆ ಮಹಿಳೆಯರು ಡಿಎಂಕೆಗೆ ವೋಟ್‌ ಹಾಕ್ತಾರಾ? ಒಂದು ವೇಳೆ ಡಿಎಂಕೆ ಮಾದಕ ವಸ್ತುಗಳು ನಿರ್ಮೂಲನೆ ಮತ್ತು ಟಾಸ್ಮಾಕ್‌(ತಮಿಳುನಾಡು ರಾಜ್ಯ ಮಾರ್ಕೆಟಿಂಗ್‌ ನಿಗಮ)ವನ್ನು ಮುಚ್ಚಿದರೆ, ಜನರು ಸಾವಿರ ರೂ. ತಿರುಪೆ ಪಡೆಯುವ ಅಗತ್ಯವೇ ಬೀಳುವುದಿಲ್ಲ’ ಎಂದೂ ಹೇಳಿದ್ದಾರೆ.

ಈ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ. ಮಹಿಳೆಯರಿಗೆ ಅವಮಾನ ಮಾಡಿದ್ದಾರೆಂದು ಅನೇಕರು ಕಿಡಿ ಕಾರಿದ್ದಾರೆ. “ಖುಷ್ಬೂ ಈ ರೀತಿ ಅಪಮಾನ ಮಾಡುತ್ತಿರುವುದು ಇದೇ ಮೊದಲಲ್ಲ. ಆಕೆ ಪ್ರತಿನಿಧಿಸುವ ಪಕ್ಷ ಅದೇ ರೀತಿ ಕೆಲಸ ಮಾಡುತ್ತಿದೆ’ ಎಂದು ಡಿಎಂಕೆ ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next