Advertisement

ನಿರುಪಯುಕ್ತ ಕಟ್ಟಡಕ್ಕೆ ಬೇಕು ರಕ್ಷೆ

03:04 PM Feb 12, 2020 | Naveen |

ಕುರುಗೋಡು: ಸಮೀಪದ ಎಮ್ಮಿಗನೂರು ಗ್ರಾಮದ ಸರಕಾರಿ ಶತಮಾನೋತ್ಸವ ಶಾಲೆ ಅವರಣದಲ್ಲಿರುವ ಶಿಕ್ಷಕರ ಸಂಪನ್ಮೂಲ ಕೇಂದ್ರವು ನಿರ್ವಹಣೆ ಇಲ್ಲದೆ ನಿರುಪಯುಕ್ತವಾಗಿ ಮದ್ಯಪ್ರಿಯರ ತಾಣವಾಗಿ ಮಾರ್ಪಟ್ಟಿದೆ.

Advertisement

ಸದ್ಯ ನಿರ್ವಹಣೆ ಕೊರೆತೆಯಿಂದ ಪಾಳು ಬಿದ್ದು ಹೋಗಿ ಕಟ್ಟಡದ ಮೇಲ್ಛಾವಣಿ ಪದರು ಉದುರುತ್ತಿದೆ. ಬಾಗಿಲು ಹಾಗೂ ಕಿಟಕಿಗಳು ಕಿತ್ತಿ ಹೋಗಿವೆ. ಒಳ ಭಾಗದ ನೆಲ ದುರಸ್ತಿಗೊಳಿಸದೆ ಹಾಗೆ ಬಿಡಲಾಗಿದೆ.

2001-02 ನೇ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಶಾಲೆ ಆವರಣದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಪ್ರಾರಂಭಗೊಂಡ ಬಳಿಕ ಸ್ವಲ್ಪ ವರ್ಷ ಆಸರೆಗೊಂಡ ಕಟ್ಟಡವು ನಂತರ ನಿರುಪಯುಕ್ತವಾಗಿ ಉಳಿದಿದೆ. ಗ್ರಾಮದ ಮಧ್ಯೆ ಇರುವ ಶತಮಾನೋತ್ಸವ ಶಾಲೆಯ ಅವರಣದಲ್ಲಿ ನಿರ್ಮಾಣಗೊಂಡು ನಿರುಪಯುಕ್ತಗೊಂಡಿರುವ ಶಿಕ್ಷಕರ ಸಂಪನ್ಮೂಲ ಕಟ್ಟಡವು ಕತ್ತಲಾದರೇ ಸಾಕು ಎಂಬ ಸಮಯದಲ್ಲಿ ಕಾಯುತ್ತಿರುತ್ತಾರೆ ಮದ್ಯ ಪ್ರಿಯರು. ಇನ್ನೂ ಕುಡಿದ ಅಮಲಿನಲ್ಲಿ ಕೇಂದ್ರದ ಒಳಗೆ ಮತ್ತು ಹೊರಗೆ ಎಲ್ಲಂದರಲ್ಲಿ ಬಾಟಲ್‌ಗ‌ಳು ಬಿಸಾಡಿ ಹೋಗುವುದು ಸಹಜವಾಗಿದೆ. ಅಲ್ಲದೆ ಪಕ್ಕದಲ್ಲಿ ಶಾಲಾ ತಡೆಗೋಡೆ ಇದ್ದು, ಅದರ ಮೇಲೆ ಕೂಡ ಮದ್ಯದ ಬಾಟಲ್‌ಗ‌ಳು ಬಿದ್ದಿರುವುದರಿಂದ ಇದು ಅನೈತಿಕ ಚಟುವಟಿಕೆಯ ತಾಣವಾಗಿದೆ ಎಂಬುದು ಸ್ಥಳೀಯರ ಮತ್ತು ಸಂಘ ಸಂಸ್ಥೆಯವರ ಆರೋಪವಾಗಿದೆ.

ಶಿಕ್ಷಕರ ಸಂಪನ್ಮೂಲ ಕಟ್ಟಡ ದುರಸ್ತಿಯಗದೆ ಹಾಗೇ ಉಳಿದುಕೊಂಡಿರುವುದರಿಂದ ಇಲಾಖೆಯ ಪಠ್ಯ-ಪುಸ್ತಕ, ಸಮವಸ್ತ್ರ, ಶೈಕ್ಷಣಿಕ ಸಾಮಾಗ್ರಿ ಸೇರಿದಂತೆ ಇತರೆ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಶಿಕ್ಷರ ಸಮಲೋಚನೆ ಹಾಗೂ ತರಬೇತಿಗೆ ಸಂಬಂಧಿಸಿದ ಮಾಹಿತಿ ಕೇಂದ್ರವಾಗಿದ್ದು, ಸರಕಾರಿ ಶತಮಾನೋತ್ಸವ ಶಾಲೆಯ ಮಾಸಿಕ ಸಭೆ ನೆಡಸಲು ಬೇರೆ ಬೇರೆ ಶಾಲೆಯ ಕೊಠಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ ಎಮ್ಮಿಗನೂರು ಕ್ಲಸ್ಟರ್‌ ಮಟ್ಟದ ಪ್ರತಿಯೊಂದು ಅನುದಾನಿತ ಮತ್ತು ಅನುದಾನ ರಹಿತ ಶಾಲೆಯ ಕಾರ್ಯಕ್ರಮಗಳಿಗೆ ಅನುಕೂಲಕರವಾಗಿದ್ದ ಕಟ್ಟಡ ಸದ್ಯ ನಿರುಪಯುಕ್ತವಾಗಿರುವುದರಿಂದ ಪ್ರತಿಯೊಂದಕ್ಕೂ ಕಷ್ಟಕರವಾಗಿದೆ.

ಮದ್ಯ ಸೇವಿಸಿ ಎಲ್ಲೆಂದರಲ್ಲಿ ಬಾಟಲ್‌ ಗಳು ಬಿಸಾಡಿ ಹೋಗುವುದರಿಂದ ಪಕ್ಕದ ಶಾಲೆ ಮಕ್ಕಳಿಗೆ ಮತ್ತು ಅಂಗನವಾಡಿ ಕೇಂದ್ರದ ಮಕ್ಕಳಿಗೆ ನಿತ್ಯ ಸಮಸ್ಯೆಯಾಗುತ್ತಿದೆ. ಆದ್ದರಿಂದ ಕಟ್ಟಡ ದುರಸ್ತಿಗೆ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಿದ್ದಾರೆ ಗ್ರಾಮದ ಮುಖಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next