Advertisement
ಸಮೀಪದ ಮಣ್ಣೂರು ಗ್ರಾಮಕ್ಕೆ ಭೇಟಿ ಕೊಟ್ಟು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಇವತ್ತಿನ ದಿನಗಳಲ್ಲಿ ಗ್ಯಾಸ್, ಎಣ್ಣೆ, ಬಸ್, ಅಕ್ಕಿ, ಬೇಳೆ ಸೇರಿದಂತೆ ಇತರೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿ ಸಾರ್ವಜನಿಕರ ಬದುಕು ಅತಂತ್ರವಾಗಿ ಬಿಟ್ಟಿದೆ. ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಿದ್ದಾರೆ. ಆದ್ರೆ ಜನಪರ ಕೆಲಸ ಮಾಡುತ್ತಿಲ್ಲ. ಅದರ ಬದಲಾಗಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಎಲ್ಲಿ ನೋಡಿದರೂ 40% ಕಮಿಷನ್ ಗುತ್ತಿಗೆದಾರರ ಬಳಿ ಹೋಗಿ ಕೇಳಿ ಶಾಸಕರ ಮತ್ತು ಸರ್ಕಾರದ ಬಗ್ಗೆ ನಿಮಗೆ ಸಂಪೂರ್ಣ ಗೊತ್ತಾಗುತ್ತದೆ ಎಂದರು.
Related Articles
Advertisement
ಬಹಳ ದಿನಗಳಿಂದ ಮೋದಿ ದೇಶದ ಜನರಿಗೆ ಅಚ್ಚೇದಿನ್ ಆಯೆಗಾ ಎಂದು ಹೇಳುತ್ತಾ, ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಮತ್ತೆ ಅಚ್ಚೇದಿನ್ ಆಯಾಗ ಎಂದು ಹೇಳುತ್ತಿದ್ದಾರೆ. ಅದಕ್ಕಾಗಿ ಸಿರುಗುಪ್ಪ ಕ್ಷೇತ್ರದಲ್ಲಿ ಅಚ್ಚೇದಿನ್ ಬರಬೇಕು ಎಂದರೆ ಕೆಆರ್ ಪಿಪಿ ಪಕ್ಷಕ್ಕೆ ಬೆಂಬಲ ನೀಡಿ ಎಂದು ತಿಳಿಸಿದರು.
ಜನಾರ್ದನ ರೆಡ್ಡಿ ಶೀಘ್ರದಲ್ಲಿ ರೈತರ ಪರವಾಗಿ ಹೊಸ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಒಂದು-ಎರಡು ಎಕರೆ ಹೊಂದಿರುವ ಪ್ರತಿಯೊಬ್ಬ ರೈತನ ಕುಟುಂಬಕ್ಕೆ 15 ಸಾವಿರ ಸಿಗಲಿದೆ. ರೈತರಿಗೆ 7 ತಾಸು ವಿದ್ಯುತ್ ಸೌಲಭ್ಯವಿದ್ದು, ಅದು ಕೂಡ ಸರಿಯಾಗಿ ಕೊಡುತ್ತಿಲ್ಲ ಎಂದ ಅವರು, ಭತ್ತ ನಾಟಿ, ಕಾಳು ಕಟ್ಟುವ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆಯಾಗುತ್ತಿದ್ದು, ಆದ್ದರಿಂದ 9 ತಾಸು ವಿದ್ಯುತ್ ನೀಡಲಿದ್ದಾರೆ ಎಂದು ತಿಳಿಸಿದರು.
ಗ್ರಾಮದ ವಾಲ್ಮೀಕಿ ವೃತ್ತದಿಂದ ಪ್ರಾರಂಭಗೊಂಡ ಮೆರವಣಿಗೆ ಆಂಜನೇಯ ದೇವಸ್ಥಾನಕ್ಕೆ ಕೊನೆಗೊಂಡಿತು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಸಿದ್ದಯ್ಯ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಂಡ್ರಳು ಮಲ್ಲಿಕಾರ್ಜುನ, ಮುಖಂಡ
ಚಿಕ್ಕಬಳ್ಳಾರಿ ನಾಗಪ್ಪ, ಬಾಗೇವಾಡಿ ಗ್ರಾ.ಪಂ. ಉಪದ್ಯಕ್ಷ ನಾಗರಾಜ್, ಸತ್ಯನಾರಾಯಣ, ಪಂಪಾಪತಿ, ಸೇರಿದಂತೆ ಕೆಆರ್ ಪಿಪಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು, ಅಭಿಮಾನಿಗಳು ಇತರರು ಇದ್ದರು.