ಕುರುಗೋಡು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಯ ಒಂದು ಶಕ್ತಿ. ಅವರ ಬಗ್ಗೆ ಯಾರೋ ಸಣ್ಣ-ಪುಟ್ಟ ವ್ಯಕ್ತಿಗಳು ಮಾತನಾಡುತ್ತಾರೆ ಅಂದ್ರೆ ಆದರ ಬಗ್ಗೆ ನಾನು ಮಾತನಾಡೋಕೆ ಹೋಗಲ್ಲ ಅವರ ಬಗ್ಗೆ ಸಂಪೂರ್ಣವಾಗಿ ಜನರಿಗೆ ಗೊತ್ತಿದೆ. ಕೇವಲ ಬ್ಯಾನರ್ ನಲ್ಲಿ ಭಾವಚಿತ್ರ ಹಾಕಿಕೊಂಡರೆ ಮಾತ್ರ ವಿಸ್ವಾಸ ಇದೆ ಎಂದಲ್ಲ. ಅವರು ಯಾವಾಗಲು ಮನಸ್ಸಿನಲ್ಲಿರುತ್ತಾರೆ ಎಂದು ಶಾಸಕ ಜೆ. ಎನ್.ಗಣೇಶ್ ಹೇಳಿದರು.
ಸಮೀಪದ ಒರ್ವಾಯಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯದ ಜನತೆಯ ಶಕ್ತಿ ಮಾತ್ರವಲ್ಲ. ನಮ್ಮ ಶಕ್ತಿ ಕೂಡ. ಅವರ ಬಗ್ಗೆ ನಮ್ಮ ಮನಸ್ಸಿನಲ್ಲಿದ್ದರೆ ಸಾಕು, ಬ್ಯಾನರ್ ನಲ್ಲಿ ತೋರಿಸುವ ಅಗತ್ಯವಿಲ್ಲ. ಯಾರು ಏನೇ ಅಂದುಕೊಂಡರು ಅದರ ಬಗ್ಗೆ ತೆಲೆಕೆಡಿಸಿಕೊಳ್ಳೋಕೆ ಹೋಗಲ್ಲ ಎಂದು ತಿಳಿಸಿದರು.
ಇನ್ನೂ ಭದ್ರಾ ಜಲಾಶಯದಿಂದ ವಿಜಯನಗರ ತುಂಗಭದ್ರಾ ಜಲಾಶಯಕ್ಕೆ ಬೇಸಿಗೆ ಹಂಗಾಮಿಗೆ 7 ಟಿಎಂಸಿ ಅಡಿ ನೀರು ಹರಿಸಬೇಕು ಎಂದು ಎಐಸಿಸಿ ಸಭೆಯಲ್ಲಿ ಸಚಿವರಾದ ಆನಂದ್ ಸಿಂಗ್, ಶ್ರೀರಾಮುಲು ಸೇರಿದಂತೆ ಬಹುತೇಕ ಶಾಸಕರುಗಳು ಕರ್ನಾಟಕ ನೀರಾವರಿ ನಿಗಮದ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ (ಕಾಡಾ) ಪ್ರಸ್ತಾವನೆ ಸಲ್ಲಿಸಲಾಯಿತ್ತು ಎಂದರು.
ಇದರ ಬಗ್ಗೆ ಯಾವ ರೀತಿಯಲ್ಲಿ ವರದಿ ಬಂದಿದೆ ನೋಡಿಕೊಂಡು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿ ಕೊಡಲಾಗುವುದು ಎಂದು ಹೇಳಿದರು.
ಹೊಸಪೇಟೆಯ ತುಂಗಭದ್ರಾ ಜಲಾಶಯದಿಂದ ಬರುವ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಬಲದಂಡೆ ಎಲ್ ಎಲ್ ಸಿ ಕಾಲುವೆಗೆ ಹರಿಸುವ ನೀರು ಏ.10 ಕ್ಕೆ ಸ್ಥಗಿತಗೊಂಡರೆ, ರೈತರು ಬೆಳೆದ ಬೆಳೆಗಳಿಗೆ ಸಮರ್ಪಕವಾಗಿ ನೀರು ಸಿಗದೆ ಕೊನೆ ಯದಲ್ಲಿ ಬೆಳೆ ಒಣಗಿ ಇಳುವರಿ ಕುಂಟಿತಗೊಳ್ಳುತ್ತದೆ. ಇದರಿಂದ ರೈತರು ನಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು. ಆದ್ದರಿಂದ ಏಪ್ರಿಲ್ ಕೊನೆಯವರೆಗೂ ನೀರು ಹರಿಸುವುದಾಗಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ತಿಳಿಸಲಾಗುವುದು ಎಂದರು.
2022 ರಲ್ಲಿ ಜರುಗಿದ ಕುರುಗೋಡು ಶ್ರೀ ದೊಡ್ಡಬಸವೇಶ್ವರ ಜಾತ್ರೆ ಪ್ರಯುಕ್ತ ಕಂಪ್ಲಿ ಕ್ಷೇತ್ರದ ರೈತರ ಅನುಕೂಲಕ್ಕಾಗಿ ಪಾದಯಾತ್ರೆ ಮಾಡಿದ್ದೆ. ಇವತ್ತು ಕ್ಷೇತ್ರದ ರೈತರು ಬೆಳೆದ ಮೆಣಿಸಿನಕಾಯಿ, ಭತ್ತ, ಜೋಳ, ಸೇರಿದಂತೆ ಅನೇಕ ಬೆಳೆಗಳಿಗೆ ಉತ್ತಮ ಬೆಲೆ ಸಿಕ್ಕಿ, ಇಳುವರಿ ಕಂಡು ಸಮೃದ್ಧಿಯ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಮತ್ತೊಮ್ಮೆ ಎರಡನೇ ಪಾದಯಾತ್ರೆ ಮಾರ್ಚ್ ನಲ್ಲಿ ಕ್ಷೇತ್ರದ ರೈತರ ಅನುಕೂಲಕ್ಕೆ ಹಮ್ಮಿಕೊಂಡಿದ್ದು, ಎಲ್ಲ ರೈತರು ಕೂಡ ಇದಕ್ಕೆ ಬೆಂಬಲ ನೀಡಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.