ಕುರುಗೋಡು: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಇಂದು ಬಳ್ಳಾರಿ ಲೋಕಾಯುಕ್ತರಿಂದ ಸಾರ್ವಜನಿಕರ ಕುಂದು-ಕೊರತೆ ಸಭೆ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಸಿಪಿಐ ಸಂಗಮೇಶ ಪಟ್ಟಣ್ಣದ ಜನರ ವಿವಿಧ ಕುಂದು-ಕೊರತೆಗಳನ್ನು ವಿಚಾರಣೆ ಮಾಡುತಿದ್ದರು. ಇದೆ ವೇಳೆ ಮಾಜಿ ಪುರಸಭೆ ಸದಸ್ಯ ಜೆ. ಮಹೇಶ್ ಲೇಔಟ್ ಸಮಸ್ಯೆಯ ವಿಚಾರಣೆಯ ಸಂದರ್ಭದಲ್ಲಿ ಬಿಇಒ ವೆಂಕಟೇಶ್ ರಾಮಚಂದ್ರಪ್ಪ ಶಾಲೆಯ ಸಿಬ್ಬಂದಿ ಜೊತೆಗೆ ಗಟ್ಟಿ ದ್ವನಿಯಲ್ಲಿ ಮಾತನಾಡುತ್ತಾ ಪತ್ರ ಬರೆಯುತ್ತಿದ್ದರು.
ಇದರಿಂದ ಸಭೆಯಲಿದ್ದ ಜನರಿಗೆ ಸಮಸ್ಯೆ ಉಂಟು ಮಾಡುವುದು ಕಂಡು ಬಂದು ಸಮಸ್ಯೆಗಳು ಅಸ್ಪಷ್ಟವಾಗಿ ಕೇಳಿಸುತ್ತಿದ್ದ ಹಿನ್ನಲೆ ಲೋಕಾಯುಕ್ತ ಸಿಪಿಐ ಅವರು ಬಿಇಒ ಅವರನ್ನು ಸಭೆಯ ಮುಂದೆ ಕರೆದು ಬಿಇಒ ಅವರೇ ಇದು ನನ್ನ ಕಾರ್ಯಕ್ರಮ. ಇದರಲ್ಲಿ ಯಾರ್ಯಾರನ್ನೋ ಕರೆದುಕೊಂಡು ಏನು ಅದು ಗಲಾಟೆ, ಕಾರ್ಯಕ್ರಮ ನಡೆಯುವ ವೇಳೆ ಇದು ಶೋಭೆಯಲ್ಲ ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.
ಕೊನೆಯದಾಗಿ, ನಾನು ಏನು ಮಾಡಬೇಕು ಅಂತ ಗೊತ್ತಿದೆ ಎಂದು ಖಡಕ್ ಆಗಿ ಎಚ್ಚರಿಸಿದರು.
ಅದಕ್ಕುತ್ತರವಾಗಿ ಬಿಇಓ, ನಿಮಗೆ ಮನವಿ ಕೊಡುವುದಕ್ಕೆ ಪತ್ರ ಬರೆದು ತಯಾರಿ ಮಾಡುತ್ತಿದ್ದೇವೆ ಸರ್ ಅಷ್ಟೇ ಅಂತ ಹೇಳಿ ಸಮಸ್ಯೆಯಿಂದ ಜಾರಿಕೊಂಡರು.