Advertisement

ರಾಜ್ಯಕ್ಕೆ 25ಸಂಸದರ ಕೊಡುಗೆ ಏನೆಂದು ಹೇಳಲಿ ನಂತರ ಸಿದ್ದರಾಮಯ್ಯ ಬಗ್ಗೆ ಮಾತಾಡಲಿ:ಶಾಸಕ ಗಣೇಶ್

03:36 PM Feb 17, 2023 | Team Udayavani |

ಕುರುಗೋಡು: ರಾಜ್ಯಕ್ಕೆ 25 ಸಂಸದರ ಕೊಡುಗೆ ಏನು ಎಂದು ಶಿಕ್ಷಣ, ಐಟಿ ಮತ್ತು ಬಿಟಿ ಸಚಿವ ಡಾ.ಅಶ್ವತ್ಥನಾರಾಯಣ ಹೇಳಲಿ ಆ ಮೇಲೆ ಸಿದ್ದರಾಮಯ್ಯ ಬಗ್ಗೆ ಮಾತಾಡಲಿ ಎಂದು ಶಾಸಕ ಜೆ. ಎನ್. ಗಣೇಶ್ ಹೇಳಿದರು.

Advertisement

ಪಟ್ಟಣದ ಶ್ರೀನಿವಾಸ್ ಕ್ಯಾಂಪ್ ನಲ್ಲಿ ಕೆಕೆಆರ್ ಡಿ ಬಿ ಯೋಜನೆ ಅಡಿಯಲ್ಲಿ 40 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು ಸಚಿವ ಡಾ.ಅಶ್ವತ್ಥನಾರಾಯಣ ಅವರು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕುರಿತು ಆಡಿರುವ ಮಾತುಗಳು ಖಂಡನಾರ್ಹವಾಗಿದೆ ಎಂದು ತಿಳಿಸಿದರು.

ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ಮೆಚ್ಚಿಸುವ ಮಾತುಗಳನ್ನು ಆಡುವುದು ಸಹಜ. ಆದರೆ ಕೊಲ್ಲಲು, ಹೊಡೆದು ಹಾಕಲು ಕರೆ ನೀಡುವಂತಹ ಪ್ರಚೋದನಕಾರಿ ಹೇಳಿಕೆ ಸರಿಯಲ್ಲ. ಜನಪ್ರತಿನಿಧಿಗಳ ಮಾತುಗಳು, ಸ್ಪರ್ಧೆ ಆರೋಗ್ಯಕರವಾಗಿರಬೇಕು ಎಂದರು.

ಸದ್ಯ ಸದನ ನಡೆಯುತ್ತಿದ್ದು, ಸದನವನ್ನು ನಿಷ್ಪಕ್ಷಪಾತವಾಗಿ ನಡೆಸುವ ಜವಾಬ್ದಾರಿಯುತ ಸ್ಥಾನದಲ್ಲಿ ಸ್ಪೀಕರ್ ಇರುತ್ತಾರೆ.

ನ್ಯಾಯಸ್ಥಾನದಲ್ಲಿ ಕೂತು ಆಡಳಿತ ಮತ್ತು ವಿಪಕ್ಷ ಸದಸ್ಯರಿಗೆ ಸಮಾನ ಅವಕಾಶ ನೀಡಬೇಕು. ಸಮಾನವಾಗಿ ಪರಿಗಣಿಸಬೇಕು.ಡಾ. ಅಶ್ವತ್ ನಾರಾಯಣ ಅವರು ಒಳ್ಳೆ ಬುದ್ದಿವಂತರು ಜೊತೆಗೆ ಶಿಕ್ಷಣ ಸಚಿವರು ಅವರು ಇತರ ಪ್ರಚೋದನಕಾರಿ ಹೇಳಿಕೆ ನೀಡುವುದು ಶೋಭೆಯಲ್ಲ ಎಂದು ಕಿಡಿಕಾರಿದರು.

Advertisement

ಬಿಜೆಪಿ ನಾಯಕರು ಇವತ್ತು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದವನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಇವತ್ತು ಅವರು ಹೇಳಿಕೆ ಕೊಡುವುದನ್ನು ದೇಶದ ಜನರು ಗಮನಹರಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಬಿಜೆಪಿ ಸರಕಾರ ಇವತ್ತು ರಾಜ್ಯದ ರೈತರಿಗೆ ಯಾವುದೇ ಸಾಲ ಮನ್ನಾ ವಾಗಲಿ ಅಥವಾ ಜನಪರ ಯೋಜನೆಗಳಾಗಲಿ ತರುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದನ್ನು ನೋಡಿ ಜನರು ಬೇಸತ್ತು ಹೋಗಿದ್ದಾರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರು ಬೆಂಬಲ ನೀಡುವುದರ ಜೊತೆಗೆ ಅಧಿಕಾರಕ್ಕೆ ತರುವುದು ಕೂಡ ಖಚಿತ ಎಂದು ವಿಸ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಜಾತಿ ಜಾತಿಗಳ ಮಧ್ಯ ಸಂಘರ್ಷಣೆ ಉಂಟು ಮಾಡಿ ಯುವಕರನ್ನು ಕೋಮು ಗಲಭೆ ಹಾದಿಯಲ್ಲಿ ಕೊಂಡುಯುತ್ತಿದ್ದಾರೆ ಇಂತಹ ಅಧಿಕಾರ ಶಾಶ್ವತ ವಾಗಿ ಉಳಿಯುವುದಿಲ್ಲ ಎಂದರು.

ಕುರುಗೋಡು ಭಾಗದಲ್ಲಿ ಮಾರುತಿ ಕ್ಯಾಂಪ್, ಶ್ರೀನಿವಾಸ್ ನಗರ, ಒರ್ವಾಯಿ ಗ್ರಾಮಗಳು ಕಂದಾಯ ಗ್ರಾಮವಾಗಿದ್ದು, ಕೂಡಲೇ ರೈತರಿಗೆ ಪಟ್ಟ ವಿತರಿಸಲಾಗುವುದು ಎಂದರು

 

Advertisement

Udayavani is now on Telegram. Click here to join our channel and stay updated with the latest news.

Next