Advertisement

ಕುರುಗೋಡು: ಭೂ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸಿ ನಂತರ ಸಾರ್ವಜನಿಕ ಸಭೆ ನಡೆಸಿ!

10:44 PM Jun 28, 2023 | Team Udayavani |

ಕುರುಗೋಡು: ಸಮೀಪದ ಕುಡತಿನಿ ಪಟ್ಟಣದ ಸಿದ್ದಮ್ಮನಹಳ್ಳಿ ರಸ್ತೆಯ ಎಸಿಸಿ ಕಾರ್ಖಾನೆ ಬಳಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕರೆಯಲಾಗಿದ್ದ ಸಾರ್ವಜನಿಕ ಸಭೆಯನ್ನು ರದ್ದುಪಡಿಸಿ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಭೂ ಸಂತ್ರಸ್ತರ ಹೋರಾಟ ಸಮಿತಿ ಮತ್ತು ಸಿಐಟಿಯು ಸೇರಿದಂತೆ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಭೂ ಸಂತ್ರಸ್ತರು ಮಾತನಾಡಿ,ಪಟ್ಟಣದ ಕುಡತಿನಿ,ವೇಣಿ ವೀರಾಪುರ,ಏರಂಗಳ್ಳಿ,ಕೊಳಗಲ್ಲು ಗ್ರಾಮಗಳಿಗೆ ಸೇರಿದ ಬ್ರಾಹ್ಮಣಿ ಸ್ಟಿಲ್ ಕಂಪನಿಗೆಂದು ಕೆಐಎಡಿಬಿ ಬಲವಂತವಾಗಿ ಹಾಗೂ ಮೋಸದ ಬೆಲೆಯ ಮೂಲಕ ಸ್ವಾದಿನ ಪಡಿಸಿಕೊಂಡಿದೆ.ಆದ್ದರಿಂದ ಪರಿಸರ ಸಾರ್ವಜನಿಕ ಸಭೆಯನ್ನು ಈ ಕೂಡಲೇ ರದ್ದು ಪಡಿಸಬೇಕು ಎಂದು ಸಭೆಯಲ್ಲಿ ಒತ್ತಾಯ ಮಾಡಿದರು.

ಅಲ್ಲದೆ ಜಮೀನು ಗಳನ್ನು ಭೂ ಬೆಲೆ ನಿಗದಿಸುವಾಗ ಪ್ರಚಲಿತ ನಿಯಮವಳಿಗಳನ್ನು ಮೀರಿ, ನಮ್ಮನ್ನು ವಂಚಿಸುವ ದುರುದ್ದೇಶದಿಂದ ಮತ್ತು ಕಂಪನಿ ಮಾಲೀಕರ ಶಮಿಲು ದಿಂದ ಮೋಸದ ಬೆಲೆ ಯನ್ನು ನಿಗದಿಸಿ ದೌರ್ಜನ್ಯ ದಿಂದ ಸರಕಾರ ಮತ್ತು ಕೆಐಎಡಿಬಿ ಸ್ಟಿಲ್ ಕಂಪನಿಗೆಂದು 2010 ರಲ್ಲಿ ಸ್ವಾದಿನ ಪಡಿಸಿಕೊಂಡಿದೆ ಆದ್ದರಿಂದ ಮೋಸದ ಭೂ ಬೆಲೆ ರದ್ದು ಪಡಿಸಿ ಹೊಸ ಭೂ ಬೆಲೆ ನಿಗದಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸುಮಾರು ವರ್ಷಗಳಿಂದ ಜಮೀನು ಗಳನ್ನು ವಸಪಡಿಸಿಕೊಂಡಿರುವ ಅಕ್ರಮ ತನಿಖೆ ಯನ್ನು ನಡೆಸುವಂತೆ ಹೋರಾಟ ಮಾಡಿಕೊಂಡು ಬಂದರೂ ಸರಕಾರಗಳು ಹಾಗೂ ಕೆಐಎಡಿಬಿ, ಜಿಲ್ಲಾಡಳಿತ ಕಂಪನಿ ಮಾಲೀಕರ ಪರ ನಿಂತಿದೆ ಹೊರತು ರೈತರ ಸಮಸ್ಯೆಗಳ ಇತ್ಯರ್ಥ ಪಡಿಸಲು ಮುಂದಾಗದಿರುವುದು ದುರದೃಷ್ಟ ವಾಗಿದೆ ಎಂದರು.

ಬಲವಂತವಾಗಿ ಜಮೀನು ಗಳನ್ನು ಪಡೆದುಕೊಂಡು 13 ವರ್ಷ ಪೂರೈಸಿದರು ಒಪ್ಪಂದದಂತೆ ಕೈಗಾರಿಕೆ ಯನ್ನು ಸ್ಥಾಪಿಸಿಲ್ಲ,ಕುಟುಂಬ ಗಳಿಗೆ ಉದ್ಯೋಗ ನೀಡಿಲ್ಲ,ಇದರಿಂದ 10 ವರ್ಷ ಗಳಲ್ಲಿ ಒಂದೊಂದು ಕುಟುಂಬ ವು ಕನಿಷ್ಠವೆಂದರೂ ಸುಮಾರು 35 ಲಕ್ಷ ನಷ್ಟ ಹೊಂದಿದ್ದಾರೆ ಇದನ್ನು ಕೂಡಲೇ ನಷ್ಟ ಭರ್ತಿ ಮಾಡಿಕೊಡಬೇಕು ಅಗ್ರಹಿಸಿದರು.

Advertisement

ಈ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಜಮೀನು ಗಳಲ್ಲಿ ಕೈಗಾರಿಕೆ ಯನ್ನು ಸ್ಥಾಪಿಸುವುದಕ್ಕೆ ಅನುಮತಿ ಕೊಡುವುದಿಲ್ಲ ಎಂದರು.

ಬ್ರಹ್ಮಣಿ ಸ್ಟಿಲ್ ಕಂಪನಿ ಬಲವಂತವಾಗಿ ಜಮೀನು ಗಳನ್ನು ಸ್ವಾದಿನ ಪಡಿಸಿಕೊಂಡಿತ್ತು ಈ ನಿಟ್ಟಿನಲ್ಲಿ ರೈತರಿಂದ ತಕರಾರು ಕೂಡ ಇತ್ತು ಈಗಿರುವಾಗಲೇ ಕೈಗಾರಿಕೆ ಸ್ಥಾಪನೆ ಮಾಡದೆ, ನಮ್ಮಜೊತೆ ಚರ್ಚಿಸದೆ ಅಥವಾ ಜಮೀನು ಗಳನ್ನು ನಮಗೆ ವಾಪಸ್ಸು ಕೊಡದೆ ಬೇರೆ ಕಂಪನಿಗೆ ನಮ್ಮ ಜಮೀನು ಗಳನ್ನು ಕೈಗಾರಿಕೆ ಸ್ಥಾಪಿಸಲು ಕರೆ ಕೊಟ್ಟಿರುವುದು ಇದು ಸಮಂಜಸವಲ್ಲ ಎಂದರು.

ಕೆಐಎಡಿಬಿ ಅಧಿಕಾರಿಗಳು ಜಮೀನು ಗಳನ್ನು ಭ್ರಷ್ಟಾಚಾರ ಮಾಡಿ ಮಾರಾಟ ಮಾಡಿರುವ ಸಂಭವಗಳಿವೆ ಎಷ್ಟರ ಬೆಲೆಗೆ ಮಾರಾಟ ಮಾಡಲಾಗಿದೆ ಎಂಬುವುದನ್ನು ಬಹಿರಂಗ ಪಡಿಸಿ ತನಿಖೆ ನಡೆಸಬೇಕು ಎಂದರು.

ಈಗಾಗಲೇ ಪಟ್ಟಣದಲ್ಲಿ ಸಣ್ಣ ಮತ್ತು ಅನೇಕ ಮಧ್ಯಮ ಕೈಗಾರಿಕೆಗಳು ಮಾಡುತ್ತಿರುವುದರಿಂದ ಪರಿಸರ ಮಾಲಿನ್ಯ ದಿಂದ ಜನ ಜೀವನ ವನ್ನು ಅಸ್ತವ್ಯಸ್ತ ಗೊಳ್ಳಿಸಿದೆ.ಹೆದ್ದಾರಿ ನಿರ್ಮಾಣ ವಾಗದೆ ಸಂಚಾರಿಸುವ ವಾಹನಗಳಿಂದ ಏಳು, ಧೂಳಿನಿಂದ ಅಸಹನೀಯವಾಗಿದೆ ಇಷ್ಟೆಲ್ಲಾ ಸಮಸ್ಯೆ ಗಳು ಇದ್ದರು ಸಭೆ ನಡೆಸುತ್ತಿರುವುದು ಸರಿಯಲ್ಲ ಆದ್ದರಿಂದ ಸಭೆಯನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಯು. ಬಸವರಾಜ್,ಪ್ರಧಾನ ಕಾರ್ಯದರ್ಶಿ ಚನ್ನಬಸಯ್ಯ,ಗಾಳಿ ಬಸವರಾಜ್,ಜೆ. ಸತ್ಯ ಬಾಬು,ಎ. ಸ್ವಾಮಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next