ಕುರುಗೋಡು: ಪಟ್ಟಣದ ಯಲ್ಲಾಪುರ ಕ್ರಾಸ್ ಬಳಿ ಇರುವ ಖಾದರ ತಾತ ಮಸೀದಿ ಹಾಗೂ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನ ಕ್ಕೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.
ನಂತರ ಮಾತನಾಡಿದ ಅವರು, ಕುರುಗೋಡುಗೆ ವಿಶೇಷ ವಾಗಿ ಭೇಟಿ ನೀಡಿರುವ ಕಾರಣ ಸುಮಾರು ಒಂದುವರೆ ವರ್ಷ ದಿಂದ ಜಿಲ್ಲಾದ್ಯಂತ ಎಲ್ಲ ದೇವಸ್ಥಾನ ಗಳಿಗೆ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದೇನೆ ಅದರಂತೆ ಕುರುಗೋಡಲ್ಲಿರುವ ಖಾದರ ತಾತ ನವರು ನಾನು 20 ವರ್ಷ ಇದ್ದಾಗಿಂದ ತುಂಬಾ ಪರಿಚಯ ಆದ್ದರಿಂದ ಅವರ ಮತ್ತು ಶ್ರೀ ದೊಡ್ಡಬಸವೇಶ್ವರ ದರ್ಶನ ಪಡೆಯಲು ಬಂದಿದ್ದೇನೆ ಇನ್ನು ಮುಂದೆ ಕೂಡ ದೇವರ ಅಶೀರ್ವಾದದಿಂದ ಜನರ ಮದ್ಯೆ ಇದ್ದು ಸೇವೆ ಮಾಡಲು ಬಯಸುತ್ತೇನೆ ಎಂದರು.
ಇನ್ನೂ ಜೀವನದಲ್ಲಿ ಹೋಟೆಲ್ ಸೇರಿದಂತೆ ಇತರೆ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಮಾಡಿದರೆ ಸಾಕು ಎಂಬ ಫೀಲಿಂಗ್ ಜನರಲ್ಲಿ ಮೂಡಿದೆ. ಅಲ್ಲದೆ ನವಂಬರ್ 6 ರಂದು ಜಿಲ್ಲೆಯಿಂದ ಹೊರಗಡೆ ಹೋಗುವ ಆದೇಶ ಬಂದಿರುವುದರಿಂದ ಹೋಗಬೇಕಾಗಿದೆ ಇನ್ನೂ 4 ತಿಂಗಳ ನಂತರ ಮತ್ತೆ ಬಂದು ಕಾರ್ಯಕರ್ತರ ಮನೆ ಮನೆಗೆ ಭೇಟಿ ನೀಡಿ ಮಾತನಾಡಿಸೋ ಪ್ರಯತ್ನ ಮಾಡುತ್ತೇನೆ. ಅಲ್ಲದೆ ಕುರುಗೋಡು ಪಟ್ಟಣದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನ ಹಾಗೂ ಸಿರುಗುಪ್ಪದ ಕೆಂಚನಗುಡ್ಡ ದಲ್ಲಿ ದೇವಸ್ಥಾನ ಕೂಡ ಪ್ರವಾಸಿ ತಾಣ ವಾಗಬೇಕು ಆದ್ದರಿಂದ ಸರಕಾರಿಂದ ವಿಶೇಷ ವಾಗಿ ಕೆಎಂಎಫ್ ಯೋಜನೆ ಅಡಿಯಲ್ಲಿ 15 ಸಾವಿರ ಕೋಟಿ ಮಂಜೂರು ಆಗಿದ್ದು ಅದರಲ್ಲಿ ಕುರುಗೋಡು ದೊಡ್ಡಬಸವೇಶ್ವರ ದೇವಸ್ಥಾನ ಪ್ರವಾಸಿ ತಾಣವನ್ನಗಿಸುವಂತೆ ಸಚಿವ ಶ್ರೀರಾಮುಲು ಅವರಿಗೆ ತಿಳಿಸುವೆ ಎಂದು ಹೇಳಿದರು.
ನಾನು ಸಚಿವ ಇದ್ದಾಗ ಜಿಲ್ಲೆಯ ಎಲ್ಲ ಗಣಿ ಮಾಲೀಕರಿಗೆ ದೇವಸ್ಥಾನ ನಿರ್ವಹಣೆಗೆ 6 ರಷ್ಟು ಅನುದಾನ ಮಿಸಲಿಡುವಂತೆ ತಿಳಿಸಿದ್ದರಿಂದ ಮಾಧ್ಯಮದವರ ಮುಂದೆ ರೆಡ್ಡಿ ಇಸ್ ಪಬ್ಲಿಕ್ ಎಂದು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದರು ಎಂದು ಮರ್ಮಿಕವಾಗಿ ನುಡಿದರು.
ಮುಂದಿನ ಚುನಾವಣೆ ಬಗ್ಗೆ ನಾನು ಮಾತಾಡಲ್ಲ ಆದರೆ ಗಂಗಾವತಿ, ಸಿಂಧನೂರು, ಕೊಪ್ಪಳ ಈ ಮೂರು ಕಡೆಯಲ್ಲಿ ಎಲ್ಲಾದರೂ ಒಂದು ಕಡೆ ಇದ್ದು ಬಳ್ಳಾರಿ ಜಿಲ್ಲೆಯ ಜನರ ಸಮಸ್ಯೆ ಬಗ್ಗೆ ಗಮನಿಸಿ ಆಶ್ರಯವಾಗಿರುವೆ ಎಂದರು.
ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಅನ್ಯಾಯದ ವಿರುದ್ಧ ಸಿಡಿದೆದ್ದು ರೆಡ್ಡಿ ಸಮುದಾಯಕ್ಕೆ ಪೂರಕವಾಗಿರುವ ಎಮರೆಡ್ಡಿ ಮಲ್ಲಮ್ಮ ಎಲ್ಲ ಸಮುದಾಯಕ್ಕೂ ಸ್ಫೂರ್ತಿಯಾಗಿದ್ದಾರೆ ಅದರಂತೆ ಜೀವನದ ಕೊನೆಯವರೆಗೂ ನಾನು ದೇವರ ಅಶೀರ್ವಾದದಿಂದ ಪ್ರತಿಯೊಬ್ಬ ಜನರ ಸಮಸ್ಯೆ ಗೆ ಸ್ಪಂದಿಸುವ ಕಾರ್ಯ ಮಾಡುವೆ ಎಂದರು.