Advertisement

ಮಂಗಳಮುಖೀಯಾಗಿಸುವ ಯತ್ನಕ್ಕೆ ಅಧಿಕಾರಿಗಳ ಬ್ರೇಕ್‌

12:58 PM Jun 12, 2020 | Naveen |

ಕುರುಗೋಡು: ಪಟ್ಟಣ ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ ಗುರುವಾರ ಬಾಲಕನನ್ನು ಮಂಗಳಮುಖೀಯನ್ನಾಗಿಸುವ ವೇಳೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳು, ಪಾಲಕರಿಗೆ ತಿಳಿಹೇಳಿ ಮುಚ್ಚಳಿಕಗೆ ಪತ್ರ ಬರೆಸಿಕೊಂಡಿದ್ದಾರೆ.

Advertisement

ಗ್ರಾಮದ 7ನೇ ವಾರ್ಡಿನ ಇಂದಿರ ನಗರದಲ್ಲಿ 17 ವರ್ಷದ ಬಾಲಕನನ್ನು ಪೋಷಕರು ಮಂಗಳಮುಖೀ ಪ್ರಯತ್ನದಲ್ಲಿ ತೊಡಗಿಸಲು ಎರಡ್ಮೂರು ದಿನಗಳಿಂದ ಸಕಲ ಸಿದ್ಧತೆ ನೆಡಸಿದ್ದರು. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬಾಲಕನ ಕುಟುಂಬದ ಮನೆಗೆ ತೆರಳಿದ ಅಧಿಕಾರಿಗಳ ತಂಡ ಇದನ್ನು ತಡೆಹಿಡಿದ್ದಾರೆ.

ಗ್ರಾಮದ ಮಂಗಳಮುಖೀಯಾಗಲು ಸ್ವಯಂ ಇಚ್ಚೆಪಟ್ಟ ಬಾಲಕನಿಗೆ 3ನೇ ತರಗತಿಯಿಂದ ಹುಲಿಗೆಮ್ಮದೇವಿಯ ಶಕೆ ಆಸಕ್ತಿ ಹಿನ್ನೆಲೆ ಸ್ವಂತ ತಾನೇ (ಮುತ್ತು) ಕಟ್ಟಿಕೊಳ್ಳಲು ಮುಂದಾಗಿರುವುದರಿಂದ ಕುಟುಂಬ ಪೋಷಕರು ಬಾಲಕನನ್ನು ಮಂಗಳಮುಖೀಗೆ ಒಳಪಡಿಸಲು ಎಲ್ಲಾ ರೀತಿಯ ಕಾರ್ಯ ಚಟುವಟಿಕೆಯಲ್ಲಿ ತೊಡಗಿದ್ದರು.

ಅಧಿಕಾರಿಗಳಾದ ಜಿಲ್ಲಾ ಮಕ್ಕಳ ಸಂಯೋಜಕ ಚಿದಾನಂದ, ನೇತ್ರಾ, ಜಡೇಪ್ಪ, ಗ್ರಾಮ ಲೆಕ್ಕಾಧಿಕಾರಿ ಹೊನ್ನಪ್ಪ, ಮಂಜುನಾಥ, ಗ್ರಾಪಂ ಪಿಡಿಒ ತಾರುನಾಯಕ, ಗ್ರಾಪಂ ಸದಸ್ಯ ಜಡೆಪ್ಪ, ಪೊಲೀಸ್‌ ಪೇದೆ ಮಹಾಂತೇಶ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಪೋಷಕರಿಂದ ಮುಚ್ಚಳಿಕೆ ಪ್ರಮಾಣ ಪತ್ರ ಬರೆಸಿಕೊಂಡು ಕಾನೂನು ತಿಳಿಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next