Advertisement
ಸೋಮಲಾಪುರ ಗ್ರಾಮದ ಪರಿಶಿಷ್ಟ ಸಮುದಾಯದ ಕಾಲೋನಿಯ ಮುಖ್ಯ ರಸ್ತೆ ಬಳಿಯಲ್ಲಿ 2 ರಿಂದ 3 ಅಡಿಯಷ್ಟು ಖಾಲಿ ನಿವೇಶನ ಇದ್ದು, ಅದರಲ್ಲಿ ಮಾದಲಿನಿಂದ ಎಸ್ಸಿ ಸಮುದಾಯದ ಜನರು ಕಲ್ಲು ಬಂಡೆಗಳು, ಕ್ವಾಡುಗಳು ಮತ್ತು ಜಾನುವಾರುಗಳು, ಬಂಡಿ ಇತರೆ ಸಮಾಗ್ರಿಗಳನ್ನು ಹಾಕಿಕೊಂಡು ಬರುತಿದ್ದು, ಅಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಯುವಕರು ಹಾಗೂ ಮುಖಂಡರು ಎರಡು ಸಮುದಾಯದ ಜನರು ಕುಳಿತುಕೊಳ್ಳುತ್ತಿದ್ದರು ಆದರೆ ಕೆಲ ಯುವಕರು ಇದ್ದಕ್ಕೆ ಇದ್ದಂತೆ ನಿವೇಶನದ ಸಲುವಾಗಿ ವಿವಾದಕ್ಕೆ ಗುರಿಯಾಗಿ ಸಣ್ಣ ಪುಟ್ಟ ಗಾಯಗಳನ್ನು ಮಾಡಿಕೊಂಡಿದ್ದಾರೆ. ನಂತರ ಸ್ಥಳಕ್ಕೆ ಎರಡು ಸಮುದಾಯದ ಮುಖಂಡರು ಬಂದು ಯುವಕರನ್ನು ಸಮಾಧಾನ ಪಡಿಸಿದ್ದಾರೆ. ಆದರೂ ಇದಕ್ಕೆ ಸುಮ್ಮನೆ ಇರದೆ ವಿಷಯ ತಾರಕ್ಕೇರಿ ಠಾಣೆ ಮೆಟ್ಟಿಲೀರಿ ವಿವಾದಕ್ಕೆ ಕಾರಣವಾಗಿದೆ.
Related Articles
Advertisement
ಗ್ರಾಮದ ಮುಖಂಡರು ತಮ್ಮ ತಮ್ಮ ಮಕ್ಕಳಿಗೆ ಒಳ್ಳೆಯ ಜೀವನ ನಡೆಸಿಕೊಂಡು ಹೋಗಲು ಹೇಳಬೇಕು. ಇನ್ನೂ ಸಣ್ಣ ವಯಸ್ಸಿನಲ್ಲಿ ಇತರ ಗಲಾಟೆ ಗಳು ಮಾಡಿಕೊಂಡರೆ ಜೀವನ ದಲ್ಲಿ ಬೆಳೆಯಲು ಕಷ್ಟ ವಾಗುತ್ತದೆ ಎಂದು ಸಲಹೆ ಸೂಚಿಸಿ, ಎರಡು ಸಮುದಾಯವನ್ನು ಒಗ್ಗೂಡಿಸಿ ಸಂಧಾನ ಮಾಡಿಸಿದರು.
ಇದೆ ವೇಳೆ ಎಸ್ಸಿ ಸಮುದಾಯದ ಮುಖಂಡರು ಹಾಗೂ ದಲಿತ ಸಂಘರ್ಷ ಸಮಿತಿ ಸಂಘಟನೆಯ ಜಿಲ್ಲಾ ಸಂಚಾಲಕ ಲಿಂಗಪ್ಪ ಸೇರಿ ಖಾಲಿ ನಿವೇಶನ ದಲ್ಲಿ ಅಂಬೇಡ್ಕರ್ ಅವರ ನಾಮಫಲಕ ಅನಾವರಣ ಮಾಡುವುದಾಗಿ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು. ಗ್ರಾಮದ ಮುಖಂಡರ ಜೊತೆ ಮಾತನಾಡಿ ಹಾಗೂ ಸ್ಥಳೀಯ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದು ಮಾಡಿಕೊಳ್ಳಿ ಎಂದು ತಿಳಿಸಿದರು.
ಗ್ರಾಮದಲ್ಲಿ ಒಂದು ದಿನ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದ್ದು, ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.