ಕುರುಗೋಡು: ಸಮೀಪದ ಮುದ್ದಟನೂರು ನವ ಗ್ರಾಮದ ಸ. ಹಿ. ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದ 14 ಮಕ್ಕಳು ಶಾಲೆ ತೊರೆದು ಕೂಲಿ ಕೆಲಸಕ್ಕೆ ತೆರಳಿದ್ದಾರೆ. ನವ ಗ್ರಾಮದಲ್ಲಿ ಅತೀ ಹೆಚ್ಚು ಮಕ್ಕಳು ಶಾಲೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದಾರೆ ಎಂದು ಮೇಲಾಧಿಕಾರಿಗಳಿಗೆ ಕೆಲ ಸ್ಥಳೀಯರು ದೂರು ನೀಡಿದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಘಟಕ, ಮಕ್ಕಳ ಸಹಾಯವಾಣಿ ಮತ್ತು ತಾಲೂಕು ಶಿಕ್ಷಣ ಇಲಾಖೆ ತಂಡದವರು ನವ ಗ್ರಾಮದ ಪಕ್ಕದಲ್ಲಿ ಇರುವ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡಿಸಿದ್ದಾರೆ. ಸ್ಥಳದಲ್ಲಿ 12 ಗಂಡು ಮಕ್ಕಳು, ಇಬ್ಬರು ಮಹಿಳೆಯರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ಕಂಡುಬಂದಿದ್ದು ಬಳಿಕ ಮಕ್ಕಳನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಬಳ್ಳಾರಿಯ ಮಕ್ಕಳ ಘಟಕದ ಶಾಂತಿ ಧಾಮಕ್ಕೆ ಕಳುಹಿಸಿ, ಶಾಲೆ ಬಿಟ್ಟ ಮಕ್ಕಳನ್ನೂ ಕೂಲಿ ಕೆಲಸದಿಂದ ಮುಕ್ತಗೊಳಿಸಿದ್ದಾರೆ.
ಜಮೀನು ಮಾಲೀಕರಿಗೆ ಶಾಲೆ ಮಕ್ಕಳನ್ನು ಕೂಲಿ ಕೆಲಸದಲಿ ತೊಡಗಿಸಿಕೊಂಡರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು. ಇನ್ನೊಮ್ಮೆ ಇಂತಹ ಘಟನೆ ಮರುಕಳಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿ ನೋಟಿಸ್ ಜಾರಿ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಮಕ್ಕಳೊಂದಿಗೆ ಮಾತನಾಡಿ, ವಿದ್ಯಾರ್ಥಿಗಳನ್ನು ಶಾಲೆ ಹೋಗುವಂತೆ ಮನವೋಲಿಸಿದ್ದಾರೆ. ಸರಕಾರದಿಂದ ಮಕ್ಕಳಿಗೆ ಅನೇಕ ಸೌಲಭ್ಯಗಳು ಸಿಗುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣವಂತರಾಗಿ ಎಂದು ತಿಳಿಸಿದರು.
ಇದೆ ವೇಳೆ ಬಳ್ಳಾರಿ ಜಿಲ್ಲಾ ಪೊಲೀಸ್ ವಿಶೇಷ ಘಟಕದ ಅಧಿಕಾರಿ ಲಲಿತಮ್ಮ, ಮಕ್ಕಳ ಸಹಾಯವಾಣಿ ಸದಸ್ಯರಾದ ಕಾರ್ತಿಕ್,ಸಿರಿಗೆರಿ ಪೊಲೀಸ್ ಠಾಣೆಯ ಎಎಸ್ ಐ ಗಂಗಣ್ಣ, ಸಿಆರ್ ಪಿ, ಅರುಣ್ ಕುಮಾರ್ ಪಾಲಕರನ್ನು ಮನವೊಲಿಸಿ ಮಕ್ಕಳನ್ನು ಕೆಲಸದಿಂದ ಬಿಡಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಕರೆದೋಯ್ಯುದರು.
ಇದನ್ನೂ ಓದಿ: ಗೋವಾದ ಮೋಲೆಮ್ ನಲ್ಲಿ ಇನ್ನೋವಾ ಕಾರು, ಬಸ್ಸು ಮುಖಾಮುಖಿ: ಆರು ಮಂದಿಗೆ ಗಾಯ