Advertisement

ಕುರುಬೂರು ನೀರು ಬಳಕೆದಾರರ ಸಂಘಕ್ಕೆ ಆಯ್ಕೆ

07:10 AM Feb 05, 2019 | Team Udayavani |

ತಿ.ನರಸೀಪುರ: ತಾಲೂಕಿನ ಕುರುಬೂರು ನೀರು ಬಳಕೆ ದಾರರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಜಿ.ವೀರಣ್ಣ, ಉಪಾ ಧ್ಯಕ್ಷರಾಗಿ ಕೆ.ಜಿ.ನಿಜಲಿಂಗಸ್ವಾಮಿ ಅವಿರೋಧವಾಗಿ ಆಯ್ಕೆ ಗೊಂಡರು. ಗ್ರಾಮದ ಸಂಘದ ಕಚೇರಿಯಲ್ಲಿ ಇವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾದರು.

Advertisement

ನೂತನ ಅಧ್ಯಕ್ಷ ಕೆ.ಜಿ.ವೀರಣ್ಣ ಮಾತನಾಡಿ, ಸಂಘ ಅಸ್ತಿತ್ವಕ್ಕೆ ಬಂದು 10 ವರ್ಷ ಕಳೆದರೂ ಸ್ವಂತ ಕಟ್ಟಡವಿಲ್ಲ. ಪ್ರಸಕ್ತ ಸಂಘವು ಲಾಭದಲ್ಲಿ ನಡೆಯುತ್ತಿದ್ದು, ಸ್ವಂತ ಕಟ್ಟಡ ನಿರ್ಮಿ ಸಲು 12 ಲಕ್ಷ ರೂ. ಮಂಜೂರಾಗಿದೆ. ನಿವೇಶನ ದೊರಕಿದ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಈ ಭಾಗದ ರೈತರ ಜಮೀನುಗಳಿಗೆ ಸಮರ್ಪಕ ವಾಗಿ ನೀರು ಒದಗಿಸುವುದು ಸಂಘದ ಮೂಲ ಉದ್ದೇಶವಾಗಿದ್ದು, ರೈತರಿಂದ ನೀರಿನ ಕಂದಾಯ ಸಂಗ್ರಸಿ ಇಲಾಖೆಗೆ ಪಾವತಿಸಲಾಗುವುದು. ರೈತರಿಗೆ ಉಚಿತವಾಗಿ ಬಿತ್ತನೆ ಬೀಜ, ವ್ಯವಸಾಯಕ್ಕೆ ಬೇಕಾಗುವ ಉಪಕರಣ ನೀಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಸಹಕಾರ ಸಂಘದ ನಿರ್ದೇಶಕ ರಾದ ಕೆ.ಬಿ.ಬಸವರಾಜು, ಕೆ.ಸಿ.ವೀರೇಶ್‌, ಕೆ.ಎಂ.ಶಾಂತ ರಾಜು, ನಿಜಗುಣಸ್ವಾಮಿ, ಕೆ.ಬಿ.ಬೋರಪ್ಪ, ನೀಲಮ್ಮ, ಭಾಗ್ಯ, ಮಹದೇವಸ್ವಾಮಿ, ಕೆ.ಎಂ.ಬಸವರಾಜು, ಮುಖಂಡರಾದ ಕು.ಶಿ.ಭೃಂಗೀಶ್‌, ಕೆ.ಜಿ.ನಾಗರಾಜು, ಕೆ.ಬಿ.ರಾಜಶೇಖರಪ್ಪ, ಜಗಪತಿ, ಮಾಜಿ ಉಪಾಧ್ಯಕ್ಷ ಶಿವಕುಮಾರ್‌ ಇತರ‌ರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next