Advertisement

ಕುರುಬ ಸಂಘ ಯುವ ಘಟಕ ಪ್ರತಿಭಟನೆ

10:02 AM Mar 01, 2022 | Team Udayavani |

ಜೇವರ್ಗಿ: ಕುರಿಗಾಹಿ ಮಹಿಳೆ ಮೇಲೆ ನಡೆದ ಹತ್ಯಾಚಾರ ನಡೆಸಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರದೇಶ ಕುರುಬ ಸಂಘ ಯುವ ಘಟಕದ ವತಿಯಿಂದ ಸೋಮವಾರ ಪಟ್ಟಣದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಕರ್ನಾಟಕ ಪ್ರದೇಶ ಕುರುಬ ಸಂಘ ಯುವ ಘಟಕದ ಅದ್ಯಕ್ಷ ನಿಂಗಣ್ಣ ರದ್ದೇವಾಡಗಿ ಮಾತನಾಡಿ, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಹೊನ್ನೂರ ಗ್ರಾಮದ 27 ವರ್ಷದ ಲಕ್ಷ್ಮೀ ವಿಠಲ ಕಳ್ಳಿಮನಿ ಎಂಬ ವಲಸೆ ಕುರಿಗಾಹಿ ಕಳೆದ ಫೆ.18 ರಂದು ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಕುರಿಹಟ್ಟಿಯಿಂದ ಕಟ್ಟಿಗೆ ತರಲು ಹೋದಾಗ ಮಹ್ಮದ್‌ ಕೋಲಕಾರ ಎಂಬ ವ್ಯಕ್ತಿ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದಾನೆ. ಆದರೆ ಈ ಘಟನೆಯಲ್ಲಿ ಇನ್ನೂ ಕೆಲವರು ಪಾಲ್ಗೊಂಡಿದ್ದು, ಸೂಕ್ತ ತನಿಖೆ ನಡೆಸಿ ಎಲ್ಲ ಆರೋಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆ ನೀಡಬೇಕು. ಸದರಿ ಕುಟುಂಬಕ್ಕೆ 10 ಲಕ್ಷ ಪರಿಹಾರ ಧನ ನೀಡಬೇಕು. ರಾಜ್ಯದ ಎಲ್ಲ ವಲಸೆ ಕುರಿಗಾಹಿಗಳಿಗೆ ಸೂಕ್ತ ಭದ್ರತೆ ನೀಡಬೇಕು. ಮೃತ ಲಕ್ಷ್ಮೀ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಶಿರಸ್ತೇದಾರ ಟಿಪ್ಪು ಸುಲ್ತಾನ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕುರುಬ ಸಮಾಜದ ತಾಲೂಕು ಅಧ್ಯಕ್ಷ ನಾಗಣ್ಣ ಗಡ್ಡದ್‌, ಸಂಗೋಳ್ಳಿ ರಾಯಣ್ಣ ಯುವ ಸಂಘದ ಅಧ್ಯಕ್ಷ ಚಂದ್ರಶೇಖರ ನೇರಡಗಿ, ಸಾಯಬಣ್ಣ ದೊಡ್ಡಮನಿ, ನಿಂಗಣ್ಣ ಭಂಡಾರಿ, ರಾಜಶೇಖರ ಮುತ್ತಕೋಡ, ಭೂತಾಳಿ ಭಾಸಗಿ ನೆಲೋಗಿ, ಬೀರಲಿಂಗ ಕಟ್ಟಿಸಂಗಾವಿ, ಭೀಮಾಶಂಕರ ಕನ್ನೋಳ್ಳಿ, ಭೀಮಾಶಂಕರ ಜನಿವಾರ, ಮಾಳಿಂಗರಾಯ ಹಿಪ್ಪರಗಿ, ಭಗವಂತ್ರಾಯ ಬೆಣ್ಣೂರ, ರವಿಕುಮಾರ ಜನಿವಾರ ಸೇರಿದಂತೆ ಹಲವಾರು ಜನ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next