Advertisement

ಕುರುಬರ ಸಮಾಜಕ್ಕೆ ಮೀಸಲಾತಿ ದೊರಕುವವರೆಗೆ ಹೋರಾಟ! ಪಕ್ಷಾತೀತವಾಗಿ ಪಾಲ್ಗೊಳ್ಳುವಂತೆ ಕರೆ

02:41 PM Nov 13, 2020 | sudhir |

ಗೋಕಾಕ: ಸ್ವಾತಂತ್ರ್ಯ ದೊರೆತು ದಶಕಗಳು ಗತಿಸಿದರೂ ಕುರುಬರ ಸಮಾಜಕ್ಕೆ ಸೂಕ್ತ ಸ್ಥಾನಮಾನ ಸಿಗದೇ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಕುರುಬರ ಎಸ್‌.ಟಿ.ಹೋರಾಟ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಹೇಳಿದರು.

Advertisement

ಗುರುವಾರದಂದು ನಗರದ ಬೀರೇಶ್ವರ ಸಮುದಾಯ ಭವನದಲ್ಲಿ ಕುರುಬರ ಎಸ್‌.ಟಿ ಹೋರಾಟ ಸಮಿತಿ, ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ, ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಕುರುಬರ ಸಮಾಜದ ಎಲ್ಲ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಎಸ್‌.ಟಿ.ಮೀಸಲಾತಿಗಾಗಿ ಬೆಳಗಾವಿ ವಿಭಾಗ ಮಟ್ಟದ ಸಮಾವೇಶದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಬೆಳಗಾವಿ ಜಿಲ್ಲೆಯ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಹಲವಾರು ವರ್ಷಗಳಿಂದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರೂ ಕುರುಬರ ಸಮಾಜದ ಯಾವುದೇ ಬೇಡಿಕೆಗಳು ಈಡೇರಿಲ್ಲ. ಇದರಿಂದ ಸಮಾಜದ ಅಭಿವೃದ್ಧಿ ಕುಂಠಿತವಾಗಿದೆ. ಸಮಾಜದ ಅಭಿವೃದ್ಧಿ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕುರುಬ ಸಮಾಜಕ್ಕೆ ಎಸ್‌.ಟಿ ಮೀಸಲಾತಿ ನೀಡುವಂತೆ ಬೃಹತ್‌ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಇದನ್ನೂ ಓದಿ:ಮಾದಪ್ಪನ ಹುಂಡಿಯಲ್ಲಿ 54 ದಿನಕ್ಕೆ 2.21ಕೋಟಿ ನಗದು ಸಂಗ್ರಹಣೆ, ಚೇತರಿಕೆಯತ್ತ ಆದಾಯ

ಹೋರಾಟ ಸಮಿತಿಯ ಖಜಾಂಚಿ, ಸಚಿವ ಈಶ್ವರಪ್ಪ ಅವರ ಪುತ್ರ ಕೆ.ಎಸ್‌. ಕಾಂತೇಶ ಮಾತನಾಡಿ, ಸರ್ಕಾರದ ಸೌಲಭ್ಯವನ್ನು ಪಡೆಯಲು ಈ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಪಕ್ಷಾತೀತವಾಗಿ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ| ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಇದೇ 29ರಂದು ಬಾಗಲಕೋಟೆಯಲ್ಲಿ ಆಯೋಜಿಸಿರುವ ವಿಭಾಗಮಟ್ಟದ ಸಮಾವೇಶದಲ್ಲಿ ಸಮಾಜ ಬಾಂಧವರು ಜಿಲ್ಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಸಮಾಜದ ಎಲ್ಲ ಮುಖಂಡರು ಪಕ್ಷಾತೀತವಾಗಿ ಕಾಗಿನೆಲೆ ಸಂಸ್ಥಾನದ ಜಗದ್ಗುರು ಹಾಗೂ ಶಾಖಾ ಮಠದ ಶ್ರೀಗಳ ನೇತೃತ್ವದಲ್ಲಿ ಎಸ್‌.ಟಿ.ಮೀಸಲಾತಿಗಾಗಿ ಹೋರಾಟ ನಡೆಸಲು ನಿರ್ಣಯ ತೆಗೆದುಕೊಳ್ಳಲಾಗಿದೆ.

Advertisement

ಹೋರಾಟದ ರೂಪರೇಷೆ ಸಿದ್ಧಗೊಳಿಸಲಾಗುತ್ತದೆ. ವಿಭಾಗೀಯ ಸಮಾವೇಶಗಳ ನಂತರ ¨ಜ. 15ರಂದು ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮಿಗಳ ನೇತ್ರತ್ವದಲ್ಲಿ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡು ಫೆ. 7ರಂದು ಬೆಂಗಳೂರಿನಲ್ಲಿ 10 ಲಕ್ಷಕ್ಕೂ ಹೆಚ್ಚು ಸಮಾಜದ ಬಾಂಧವರನ್ನು ಸೇರಿಸಿ ಬೃಹತ್‌ ಸಮಾವೇಶ ನಡೆಸಲಾಗುವುದು ಎಂದರು.

ಕೌಲಗುಡ್ಡದ ಅಮರೇಶ್ವರ ಮಹಾರಾಜರು ಮತ್ತು ಜಂಬಗಿಯ ಸುರೇಶ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಪದಾಧಿಕಾರಿಗಳಾದ ಸುಬ್ಬಣ್ಣ ಮೈಸೂರು, ಕೆ.ಬಿ.ಶಾಂತಪ್ಪ, ವೆಂಕಟೇಶಮೂರ್ತಿ, ಟಿ.ಬಿ. ಬೆಳಗಾವಿ, ದೊಡ್ಡಯ್ಯ ಆನೆಕಲ್‌, ಸಿದ್ದಲಿಂಗ ದಳವಾಯಿ, ಮಡ್ಡೆಪ್ಪ ತೋಳಿನವರ, ಲಕ್ಷ್ಮಣ ಮುಸಗುಪ್ಪಿ, ಪ್ರಕಾಶ ಡಂಗ, ಶಿವಪುತ್ರ , ಯಲ್ಲಪ್ಪ ಕುರುಬರ, ಸುರೇಶ ಮಾಯನ್ನವರ, ಎಚ್‌.ಎಸ್‌.ನಸಲಾಪೂರೆ, ಭಗವಂತ ಬಂತೆ, ವಿನಾಯಕ ಕಟ್ಟಿಕಾರ, ಡಿ.ಡಿ.ತೋಪ್ರೊಟಿ, ಮಾರುತಿ ಮರಡಿ,
ಮಹಾದೇವ ಬರಗಾಲೆ, ಎಸ್‌.ಕೆ. ಖಜ್ಜನ್ನವರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next