Advertisement

ರಾಜ್ಯ ಕುರಿಗಾಹಿಗಳ ನಿಯೋಗದಿಂದ ಸಚಿವ ಈಶ್ವರಪ್ಪ ಭೇಟಿ

11:20 AM Feb 18, 2022 | Team Udayavani |

ಬೆಂಗಳೂರು : ರಾಜ್ಯ ಕುರಿಗಾಹಿಗಳ ನಿಯೋಗ ಶುಕ್ರವಾರ ಬೆಳಗ್ಗೆ ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಭೇಟಿಯಾಗಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ.

Advertisement

ಕರ್ನಾಟಕ ರಾಜ್ಯ ಕುರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಶರಣು ತಳ್ಳಿಕೇರಿ, ಮತ್ತು ಮುಖಂಡರಾದ ಆನೇಕಲ್ ದೊಡ್ಡಯ್ಯ, ಶ್ರೀ ಕಾಶೀನಾಥ್ ಹುಡೇದ್, ಅವರೊಂದಿಗೆ ರಾಜ್ಯದ ಉದ್ದಗಲದಿಂದ ಆಗಮಿಸಿದ್ದ ನೂರಾರು ಕುರಿಗಾಹಿಗಳು ತಮ್ಮ ಸಮಸ್ಯೆಗಳ ಕುರಿತು ಸಚಿವ ಈಶ್ವರಪ್ಪರವರೊಂದಿಗೆ ಚರ್ಚಿಸಿ, ಮುಂದಿನ ಬಜೆಟ್ ನಲ್ಲಿ ಕುರಿಗಾಹಿಗಳಿಗೆ ಅನುಕೂಲಕರವಾದ ಯೋಜನೆಗಳನ್ನು ರೂಪಿಸುವಂತೆ ಮನವಿಪತ್ರ ಸಲ್ಲಿಸಿದರು.

ಸಚಿವರು ಮಾತನಾಡಿ, ಈಗಾಗಲೇ ನಿಗಮದ ಅಧ್ಯಕ್ಷರ ಮನವಿ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳೊಡನೆ ಒಂದು ಸುತ್ತಿನ ಮಾತುಕತೆ ಮಾಡಿದ್ದೇವೆ ಇನ್ನೂ ಒಮ್ಮೆ ಅಧ್ಯಕ್ಷರು ಮತ್ತು ಕೆಲವು ಮುಖಂಡರುಗಳನ್ನು ಮುಖ್ಯಮಂತ್ರಿಗಳನ್ನೂ ಭೇಟಿ ಮಾಡಿ ವಿಸ್ತ್ರತವಾಗಿ ಚರ್ಚಿಸಿ. ಅತ್ಯಂತ ಹೆಚ್ಚಿನ ರೀತಿಯಲ್ಲಿ ಸರ್ಕಾರದ ನಮ್ಮ ಕುರಿಗಾಹಿಗಳಿಗೆ ಅನುಕೂಲ ಮಾಡಿಕೊಡಲು ನಾವು ಸದಾ ಸಿದ್ದರಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next