Advertisement

ಹೆಣ್ಮಕ್ಕಳ ಫೇವರೆಟ್‌ ಡ್ರೆಸ್‌ ಯಾವುದು ಗೊತ್ತಾ? ಕುರ್ತಾ ಕಮಾಲ್‌

03:45 AM Feb 15, 2017 | Harsha Rao |

ಕುರ್ತಾವನ್ನು ಹೀಗೆಯೇ ಧರಿಸಬೇಕು ಎಂದೇನಿಲ್ಲ. ಜೀನ್ಸ್‌, ಪಟಿಯಾಲ, ಲಾಂಗ್‌ ಸ್ಕರ್ಟ್‌, ಲೆಗ್ಗಿಂಗ್ಸ್‌ ಹೀಗೆ ಯಾವುದರ ಮೇಲೆ ಬೇಕಾದರೂ ಕುರ್ತಾ ಧರಿಸಬಹುದು. ಆದರೆ ಸರಿಯಾದ ಕಲರ್‌ ಕಾಂಬಿನೇಶನ್‌ ಮಾಡಬೇಕಾದುದು ಅಗತ್ಯ. 

Advertisement

ದಿನನಿತ್ಯ ಕಾಲಕ್ಕೆ ತಕ್ಕ ಹಾಗೆ ಬದಲಾವಣೆಗೊಳ್ಳುವುದರಲ್ಲಿ ಫ್ಯಾಷನ್‌ ಕೂಡಾ ಒಂದು. ದಿನಕ್ಕೊಂದು ಹೊಸ ಫ್ಯಾಷನ್‌ ಕಣ್ಣಿಗೆ ಬೀಳುವುದಂತೂ ಸತ್ಯ. ಇಂದು ಫ್ಯಾಷನ್‌ ಆಗಿ ಕಂಡದ್ದು ನಾಳೆ ಮಾಯ. ಅದರಲ್ಲೂ ಉಡುಗೆಯ ವಿಷಯದಲ್ಲಿ ಹೇಳುವುದೇ ಬೇಡ. ದಿನಕ್ಕೊಂದು ಫ್ಯಾಷನ್‌, ಥರಥರದ ಡ್ರೆಸ್‌ಗಳು.. ಎಷ್ಟೆಂದರೆ ಅದನ್ನು ತೆಗೆದುಕೊಳ್ಳೋದಾ ಅÇÉಾ ಇದನ್ನಾ? ಅದನ್ನು ಹಾಕಿಕೊಳ್ಳೋದಾ ಅÇÉಾ ಇದು ಹಾಕಿಕೊಳ್ಳಲಾ ಎಂದು ಗೊಂದಲ ಹುಟ್ಟಿಸುವಷ್ಟು ಫ್ಯಾಷನ್‌ ಲೋಕದಲ್ಲಿ ಬದಲಾವಣೆ ಆಗಿದೆ ಮತ್ತು ನಿರಂತರವಾಗಿ ಆಗುತ್ತಲೇ ಇದೆ. 

ಹೆಣ್ಮಕ್ಕಳಿಗೆ ಉಡುಗೆ ತೊಡುಗೆಯ ಮೇಲೆ ಒಂದು ರೀತಿಯ ವಿಶೇಷವಾದ ಒಲವು. ಬದಲಾದ ಫ್ಯಾಷನ್‌ಗೆ ಬಲು ಬೇಗ ಹೊಂದಿಕೊಳ್ಳುವ ಅವರು ಅದನ್ನು ಸಂತಸದಿಂದಲೇ ಸ್ವೀಕರಿಸುತ್ತಾರೆ. ಫ್ಯಾಷನ್‌ ನ ಜೊತೆಗೆ ತಾವು ಧರಿಸುವ ಉಡುಪು ತಮಗೆ ಕಂಫ‌ರ್ಟಬಲ… ಆಗಿರಬೇಕು ಎಂದು ಬಯಸುವುದೇ ಹೆಚ್ಚು. ಇಲ್ಲದಿದ್ದರೆ ಅದರಿಂದ ಸಮಾಧಾನದ ಬದಲು ಕಿರಿಕಿರಿ ಉಂಟಾಗುವುದೇ ಹೆಚ್ಚು. ಸದ್ಯ ಹೆಣ್ಮಕ್ಕಳ ನೆಚ್ಚಿನ ಉಡುಗೆ ಎಂದರೆ ಕುರ್ತಾ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವ ಡ್ರೆಸ್‌ ಎಂದರೆ ಕುರ್ತಾ. 

ಕುರ್ತಾ ಧರಿಸುವುದಕ್ಕೆ ವಯಸ್ಸಿನ ಹಂಗಿಲ್ಲ. ಯಾರೂ ಬೇಕಾದರೂ ಧರಿಸಬಹುದು. ನಾನಾ ನಮೂನೆಯ ವಿನ್ಯಾಸಗಳನ್ನು ಹೊಂದಿರುವ ಕುರ್ತಾ ಕಡಿಮೆ ದರದಲ್ಲಿ ದೊರಕುವುದರಿಂದ ಪ್ಯಾಷನ್‌ ಪ್ರಿಯರ ಸಂಖ್ಯೆ ಕಾಲಕ್ರಮೇಣವಾಗಿ ಹೆಚ್ಚಾಗುತ್ತಿದೆ. ಸಾಂಪ್ರದಾಯಿಕ ಉಡುಗೆಯಾಗಿರುವ ಕುರ್ತಾಗಳು ಇದೀಗ ಆಧುನಿಕ ರೀತಿಗೆ ತಕ್ಕಂತೆ ವಿನ್ಯಾಸಗಳಲ್ಲಿ ಮಾರ್ಪಾಡು ಮಾಡಿಕೊಂಡು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ನಾರಿ ಮಣಿಯರ ಪ್ರೀತಿಯ ಉಡುಗೆಯಾದ ಕುರ್ತಾ ವನ್ನು ಯಾವ ಕಾಲದಲ್ಲೂ ಬೇಕಾದರೂ ಧರಿಸಬಹುದು. ಸ್ಲಿàವ್‌ ಕುರ್ತಾ, ಹಾಫ್ ಸ್ಲಿàವ್‌ ಕುರ್ತಾ, ಫ‌ುಲ… ಕೈ, ಎಂಬ್ರಾಯಿಡರಿ ಡಿಸೈನ್‌, ಸಿಲ್ಕ… ಕುರ್ತಾ, ಕಾಟನ್‌ ಕುರ್ತಾ ಹೀಗೆ ನಾನಾ ಥರದ ಕುರ್ತಾಗಳು ಇದೀಗ ಕೈಗೆಟುಕುವ ದರದಲ್ಲಿ ದೊರೆಯುತ್ತವೆ. 

ಸಾಮಾನ್ಯವಾಗಿ ಕುರ್ತಾಗಳಿಗೆ ಮೊದಲ ಆದ್ಯತೆ ನೀಡುವವರು ಕಾಲೇಜಿಗೆ ಹುಡುಗಿಯರು ಮತ್ತು ಉದ್ಯೋಗಕ್ಕೆ ಹೋಗುವ ಮಹಿಳೆಯರು. ಇದು ತೀರಾ ಸರಳ ಉಡುಗೆಯಾದ ಕಾರಣ ಹೆಚ್ಚಿನ ಮಹಿಳೆಯರು ಇಷ್ಟಪಡುವಂತಾಗಿದೆ. ಕುರ್ತಾವನ್ನು ಹೀಗೆಯೇ ಧರಿಸಬೇಕು ಎಂದೇನಿಲ್ಲ. ಜೀನ್ಸ್‌, ಪಟಿಯಾಲ, ಲಾಂಗ್‌ ಸ್ಕರ್ಟ್‌, ಲೆಗ್ಗಿಂಗ್ಸ್‌ ಹೀಗೆ ಯಾವುದರ ಮೇಲೆ ಬೇಕಾದರೂ ಕುರ್ತಾ ಧರಿಸಬಹುದು. ಆದರೆ ಸರಿಯಾದ ಕಲರ್‌ ಕಾಂಬಿನೇಶನ್‌ ಮಾಡಬೇಕಾದುದು ಅಗತ್ಯ. ಜೊತೆಗೆ ನಾವು ಹಾಕುವ ಜೀನ್ಸ್‌, ಲೆಗ್ಗಿಂಗ್ಸ್‌, ಲಾಂಗ್‌ ಸ್ಕರ್ಟ್‌ಗಳಿಗೆ ಕುರ್ತಾ ಹೊಂದಾಣಿಕೆ ಆಗಬೇಕಾದುದು ತುಂಬಾ ಮುಖ್ಯ. ಇಲ್ಲವಾದಲ್ಲಿ ಅದರ ಅಂದವೇ ಹಾಳಾಗಬಹುದು. 

Advertisement

ರೆಡಿಮೇಡ್‌ ಉಡುಗೆಯಾದ ಕುರ್ತಾ ವನ್ನು ಕೊಂಡರೆ ಯಾವುದೇ ಥರದ ತಲೆಬಿಸಿಯಿಲ್ಲ. ಬದಲಿಗೆ ಆರಾಮವಾಗಿರಬಹುದು. ಚೂಡಿದಾರ್‌ ಬಟ್ಟೆ ತೆಗೆದುಕೊಂಡರೆ ಅದನ್ನು ಹೊಲಿಯಲು ಕೊಡಬೇಕು. ಟೈಲರ್‌ ಹೇಳಿದ ಸಮಯದ ತನಕ ಕಾಯಬೇಕು. ಅಲ್ಲದೇ ಮೂರು ನಾಲ್ಕು ಬಾರಿ ಟೈಲರ್‌ ಬಳಿಗೆ ಓಡಾಡಬೇಕು. ಅಲ್ಲಿ ಗಂಟೆಗಟ್ಟಲೇ ಕಾಯಬೇಕು. ಇನ್ನು ಸೀರೆಯ ವಿಚಾರ ಬಂದರೆ ಅದನ್ನು ಉಡಲು ಸ್ವಲ್ಪ$ ಸಮಯ ಬೇಕು. ಬೆಳಗ್ಗೆ ಮನೆಕೆಲಸ ಮುಗಿಸಿ ಗಡಿಬಿಡಿಯಲ್ಲಿ ಮನೆಯಿಂದ ಹೊರಡುವ ಸಮಯದಲ್ಲಿ ಸೀರೆ ಉಡಲು ಸಾಕಷ್ಟು ಸಮಯ ದೊರೆಯುವುದಿಲ್ಲ. ಕುರ್ತಾ ಹಾಗಲ್ಲ. ಹೆಚ್ಚೆಂದರೆ ಫಿಟ್ಟಿಂಗ್‌ ಸರಿಮಾಡಿದರೆ ಆಯಿತು. ಮತ್ತೆ ಯಾವುದೇ ತರದ ಸಮಸ್ಯೆ ಇಲ್ಲ. 

ಹಿಂದಿನ ಕಾಲದಲ್ಲಿ ಕುರ್ತಾ ಗಳು ಕೇವಲ ಪುರುಷರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಹೆಣ್ಮಕ್ಕಳು ಕೂಡಾ ಕುರ್ತಾ ಧರಿಸಿ ಸಂಭ್ರಮ ಪಟ್ಟುಕೊಳ್ಳುವ ಕಾಲ. ಇನ್ಯಾಕೆ ತಡ, ಮನಕ್ಕೆ ಹಿತ ಎನಿಸುವ ಕುರ್ತಾ ಧರಿಸಿ ನೀವು ಕೂಡಾ ಸಂಭ್ರಮ ಪಟ್ಟುಕೊಳ್ಳಿ… 

– ಅನಿತಾ ಬನಾರಿ 

Advertisement

Udayavani is now on Telegram. Click here to join our channel and stay updated with the latest news.

Next