Advertisement
ಕುರ್ತಿಗಳನ್ನು ಇದ್ದದ್ದು ಇದ್ದಂಗೆಯೇ ಧರಿಸುವ ಕಾಲವೆಲ್ಲ ಮುಗೀತು. ಈಗೇನಿದ್ದರೂ ಎಲ್ಲರ ಕಣ್ಣು ಕುಕ್ಕುವಂತೆ ಫ್ಯಾಷನೆಬಲ್ ಆಗಿ ಕಾಣಿಸುವುದೇ ಮುಖ್ಯ ಎನ್ನುತ್ತಿದ್ದಾರೆ ಹೆಣ್ಣುಮಕ್ಕಳು. ಅದಕ್ಕಾಗಿ ಕುರ್ತಿ ಧರಿಸುವುದಕ್ಕೂ ಬಗೆ ಬಗೆಯ ಶೈಲಿಗಳನ್ನು ಕಂಡುಕೊಳ್ಳಲಾಗಿದ್ದು, ಇದು ಈಗಿನ ಹೊಸ ಟ್ರೆಂಡ್ ಆಗಿಯೂ ಕಣ್ಮನ ಸೆಳೆಯುತ್ತಿದೆ. ಹಾಗಿದ್ರೆ, ಈ ಕುರ್ತಿ ಫ್ಯೂಷನ್ ಬಗ್ಗೆ ತಿಳಿದುಕೊಳ್ಳೋಣ.
ನೀವು ಯಾವುದೇ ಕುರ್ತಿ ಧರಿಸಿ. ಅದರ ಮೇಲೊಂದು ಪುಟ್ಟ ಜಾಕೆಟ್ ತೊಟ್ಟುಕೊಂಡರೆ, ಅದರ ಸ್ಟೈಲೇ ಬೇರೆ. ಈಗಂತೂ ಮಾರುಕಟ್ಟೆಗಳಲ್ಲಿ ಜಾಕೆಟ್‌ಗಳಿಗೆ ಬರವಿಲ್ಲ. ಸಾಂಪ್ರದಾಯಿಕ ಕಲೆಗಳುಳ್ಳ ಜೋಧ್‌ಪುರಿ, ಬಂಧಗಾಲಾದಿಂದ ಹಿಡಿದು ಸಿಂಪಲ್ ಆಗಿಯೂ, ಪ್ಲೇನ್ ಆಗಿಯೂ ಇರುವಂಥ ಜಾಕೆಟ್‌ಗಳು ಲಭ್ಯ ಇವೆ. ಕುರ್ತಿ ಪ್ಲೇನ್ ಆಗಿದ್ದರೆ, ವಿನ್ಯಾಸಗಳುಳ್ಳ ಜಾಕೆಟ್ ಅನ್ನೂ, ಕುರ್ತಿಯಲ್ಲಿ ಹೆಚ್ಚು ವರ್ಕ್ ಇದ್ದರೆ ಪ್ಲೇನ್ ಜಾಕೆಟ್ ಅನ್ನೂ ಆಯ್ಕೆ ಮಾಡಿಕೊಳ್ಳಬಹುದು. ಫ್ರಾಕ್ ಶೈಲಿ
ಲಾಂಗ್ ಅನಾರ್ಕಲಿಗಳು ಬದಿಗೆ ಸರಿಯುತ್ತಿದ್ದಂತೆ, ಶಾರ್ಟ್ ಫ್ರಾಕ್-ಶೈಲಿಯ ಕುರ್ತಿಗಳು ಮುಂಚೂಣಿಗೆ ಬರಲಾರಂಭಿಸಿವೆ. ಫ್ರಾಕ್‌ನದ್ದೇ ರೂಪ ಹೊಂದಿರುವ ಫ್ರಿಲ್ಸ್ ಇರುವಂಥ ಅಥವಾ ಮಾಮೂಲಿ ಕುರ್ತಿಗಳು ಹದಿಹರೆಯದ ಹೆಣ್ಣುಮಕ್ಕಳನ್ನು ಆಕರ್ಷಿಸುತ್ತಿವೆ. ಇದನ್ನು ಡೆನಿಮ್ ಅಥವಾ ಲೆಗ್ಗಿಂಗ್ಸ್ ಇಲ್ಲದೆ ಧರಿಸಿದರೂ ಚೆನ್ನಾಗಿಯೇ ಕಾಣುತ್ತದೆ. ಸಾಂಪ್ರದಾಯಿಕ ಸಲ್ವಾರ್ ಕುರ್ತಾದಂತೆಯೇ ಕಾಣಬೇಕೆಂದರೆ, ಎಥಿ°ಕ್ ಪ್ರಿಂಟ್ ಇರುವ ಅಥವಾ ಎಂಬ್ರಾಯಿಡರಿ ವಿನ್ಯಾಸವಿರುವ ಕುರ್ತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
Related Articles
ಹಿಂದೆಲ್ಲ, ಉದ್ದ ಲಂಗದ ಜೊತೆಗೆ ರವಿಕೆ ಧರಿಸುವುದನ್ನಷ್ಟೇ ನೋಡಿರುತ್ತೀರಿ. ಈಗ, ಉದ್ದನೆಯ ಸ್ಕರ್ಟ್ ಜೊತೆಗೆ ಕುರ್ತಿಯನ್ನೂ ಧರಿಸಬಹುದು. ಕುರ್ತಿಗೆ ಲೆಗ್ಗಿಂಗ್ಸ್ ಜೋಡಿಯಾಗುವ ಬದಲು, ಉದ್ದನೆಯ ಲಂಗ ಧರಿಸಿ, ಅದರ ಮೇಲೆ ಮೊಣಕಾಲಿಗಿಂತ ಕೆಳಕ್ಕೆ ಬರುವ ಕುರ್ತಿಗಳನ್ನು ಹಾಕಿಕೊಂಡರೆ, ವಿಶೇಷವಾಗಿ ಕಾಣುವುದರಲ್ಲಿ ಸಂಶಯವಿಲ್ಲ.
Advertisement
ಧೋತಿಗೂ ಕುರ್ತಿಗೂ ನಂಟುಧೋತಿಗೂ, ಕುರ್ತಿಗೂ ಏನು ಸಂಬಂಧ ಎಂದು ಕೇಳಬೇಡಿ? ಧೋತಿ ಪ್ಯಾಂಟ್ ಜೊತೆಗೂ ಕುರ್ತಿ ಧರಿಸಬಹುದು. ಹಗುರವಾಗಿರುವ, ಹತ್ತಿ ಬಟ್ಟೆಯಿಂದ ಮಾಡಿದ ಧೋತಿ ಧರಿಸಿಕೊಂಡು, ಮೇಲೊಂದು ಶಾರ್ಟ್ ಕುರ್ತಿ ತೊಟ್ಟುಕೊಳ್ಳಿ. ಸ್ಲಿವ್‌ಲೆಸ್ ಕುರ್ತಿಯೂ ಧೋತಿಗೆ ಚೆನ್ನಾಗಿಯೇ ಕಾಣುತ್ತದೆ. ದುಪಟ್ಟಾ ಜೋಡಿ
ಸಾಂಪ್ರದಾಯಿಕ ಸಲ್ವಾರ್ ಕುರ್ತಾದಲ್ಲಿ ಮಾತ್ರ ಮಿಂಚುತ್ತಿದ್ದ ದುಪಟ್ಟಾಗಳು ಈಗ ಆಧುನಿಕ ಉಡುಗೆಗಳಲ್ಲೂ ತನ್ನದೇ ಪಾತ್ರ ವಹಿಸತೊಡಗಿದೆ. ಫ್ಯಾಷನ್ ಫ್ಯೂಷನ್‌ನ ಎಫೆಕ್ಟ್ ಎಂಬಂತೆ, ಕುರ್ತಿಗಳು, ಟಿ-ಶರ್ಟ್‌ಗಳ ಮೇಲೂ ದುಪಟ್ಟಾಗಳು ರಾರಾಜಿಸುತ್ತಿವೆ. ಮಾಡರ್ನ್ ಡ್ರೆಸ್‌ಗಳನ್ನು ಧರಿಸಿದರೂ ಅವುಗಳ ಮೇಲೆ ಭಿನ್ನ ಭಿನ್ನ ಬಗೆಗಳಲ್ಲಿ ದುಪಟ್ಟಾಗಳನ್ನು ತೊಟ್ಟುಕೊಳ್ಳಬಹುದು. ಶರ್ಟ್ ಮಾದರಿ ಕುರ್ತಿ
ಮುಂಭಾಗದಲ್ಲಿ ಶರ್ಟ್‌ನಂತೆಯೇ ತೋರುವ ಕುರ್ತಿಗಳಿಗೂ ಈಗ ಭಾರೀ ಬೇಡಿಕೆ ಇದೆ. ಪಲಾಜೋ ಪ್ಯಾಂಟ್ ಅಥವಾ ಪಟಿಯಾಲಾ ಜೊತೆಗೆ ಈ ಶರ್ಟ್ ಶೈಲಿ ಕುರ್ತಿಗಳನ್ನು ಧರಿಸಬಹುದು. ಇವುಗಳು ಕಾಟನ್, ಸಿಲ್ಕ್, ವಿಸ್ಕೋಸ್ ಇತ್ಯಾದಿಗಳಲ್ಲೂ ಲಭ್ಯ. ಡೆನಿಮ್ ಜೊತೆಗೆ
ಡೆನಿಮ್ ಧರಿಸುವುದೆಂದರೆ ಎಲ್ಲರಿಗೂ ಇಷ್ಟ. ಆ ಡೆನಿಮ್ ಜೊತೆಗೆ ಕುರ್ತಿಯನ್ನೂ ತಳುಕು ಹಾಕಿಕೊಂಡರೆ ಇನ್ನಷ್ಟು ಚೆಂದ. ಫ್ರಂಟ್ ಸ್ಲಿಟ್ ಅಥವಾ ಸೈಡ್ ಸ್ಲಿಟ್ ಕುರ್ತಿಗಳ ಜೊತೆಗಂತೂ ಡೆನಿಮ್ ಅದ್ಭುತವಾಗಿ ಕಾಣುತ್ತದೆ. ಗೆಳೆಯರ ಜೊತೆಗೆ ಸಿನಿಮಾಗೋ, ಪಾರ್ಕ್‌ಗೋ, ಪಿಕ್ನಿಕ್‌ಗೊà ಹೋಗುವಾಗ ಟ್ರೆಂಡಿಯಾಗಿಯೂ, ಆರಾಮದಾಯಕವೂ ಇರುವ ಡೆನಿಮ್- ಕುರ್ತಿ ಧರಿಸಬಹುದು. ಹಲೀಮತ್ ಸ ಅದಿಯಾ