ಕೊರಟಗೆರೆ : ಪುರಾತನ ಕಾಲದಿಂದ ತನ್ನದೇ ಆದ ಇತಿಹಾಸವನ್ನು ಹೊಂದಿರುವ ಶ್ರೀ ಕ್ಷೇತ್ರ ಕುರಂಕೋಟೆ ದೊಡ್ಡಕಾಯಪ್ಪ ಆಂಜನೇಯ ಸ್ವಾಮಿ ದೇವಾಲಯಕ್ಕೆ ಅರ್ಚಕನೇ ಬೀಗ ಹಾಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ಕುರಂಕೋಟೆ ದೊಡ್ಡಕಾಯಪ್ಪ ದೇವಸ್ಥಾನದಲ್ಲಿ ಶ್ರೀನಿವಾಸ್ ಮೂರ್ತಿ ಎಂಬುವ ವ್ಯಕ್ತಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಸಮಿತಿಯ ಪ್ರಕಾರ ಪ್ರತಿ ವರ್ಷವೂ ಕೂಡ ಒಬ್ಬರಾದ ಮೇಲೆ ಇನ್ನೊಬ್ಬರು ಸ್ವಾಮಿಗೆ ಪೂಜೆ ಸಲ್ಲಿಸಬೇಕಾಗಿತ್ತು. ಆದರೆ ಅರ್ಚಕ ಶ್ರೀನಿವಾಸ್ ಮೂರ್ತಿ ದೇವಾಲಯದ ಬೀಗವನ್ನು ಇನ್ನೊಬ್ಬ ಅರ್ಚಕರಿಗೆ ಹಸ್ತಾಂತರ ಮಾಡದೇ ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾರೆ.
ದೊಡ್ಡಕಾಯಪ್ಪ ದೇವಾಸ್ಥನದ ಸೇವಾ ಟ್ರಸ್ಟ್ ನ ಲೆಕ್ಕ ಪರಿ ಶೋಧಕ ಸಿದ್ದರಾಜಯ್ಯ ಮಾತನಾಡಿ ಪ್ರತಿ ಶ್ರೀರಾಮ ನವಮಿಯಂದು ಅರ್ಚರನ್ನು ಬದಲಾವಣೆ ಮಾಡಲಾಗುತ್ತದೆ ಅದೇ ರೀತಿ ಪ್ರಸ್ತುತ ಪೂಜೆ ಸಲ್ಲಿಸುತ್ತಿದ್ದ ಅರ್ಚಕ ಶ್ರೀನಿವಾಸ್ ಮೂರ್ತಿ ಅವರ ಸಮಯ ಮುಗಿದ ಕಾರಣ ಇನ್ನೊಬ್ಬ ಅರ್ಚಕರಾದರಿಗೆ ದೇವಸ್ಥಾನದ ಬೀಗ ಹಸ್ತಾಂತರ ಮಾಡಿ ಮುಂದೆ ಸ್ವಾಮಿಯ ಪೂಜೆ ಕಾರ್ಯಗಳನ್ನು ಮಾಡಲು ಅರ್ಚಕ ವೆಂಕಟೇಶ್ ಗೆ ಅವಕಾಶ ಮಾಡಿಕೊಡಬೇಕಾಗಿತ್ತು ಆದರೆ ಶ್ರೀನಿವಾಸ್ ಮೂರ್ತಿ ವಿನಾಕಾರಣ ಬೀಗ ಕೊಡದೆ ಭಾನುವಾರ ಪೂಜೆಯ ಸಮಯದಲ್ಲಿ ದೇವಸ್ಥಾನದ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಈ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು ತಾಲ್ಲೂಕಿನ ಯಾವುದೇ ಅಧಿಕಾರಿಗಳಾಗಲಿ, ಮುಜರಾಯಿ ಇಲಾಖೆಯವರಾಗಲಿ ಇದುವರೆಗೂ ಸ್ಥಳಕ್ಕೆ ಬಂದಿಲ್ಲ ಎಂದರು.
ಸ್ವಾಮಿಯ ದರ್ಶನ ಸಿಗದೇ ನಿರಾಸೆಯಾದ ಭಕ್ತರು
ತಮ್ಮ ಇಷ್ಟಾರ್ಥ ಸಿದ್ದಿಯನ್ನು ಕಲ್ಪಿಸಿಕೊಳ್ಳುವ ನಿಟ್ಟಿನಲ್ಲಿ ಸ್ವಾಮಿಯ ದರ್ಶನ ಮಾಡಲು ವಿಶೇಷ ಪೂಜೆ, ಹರಕೆಯನ್ನು ನೆರವೇರಿಸಲು ಬಂದಂತಹ ಭಕ್ತಾದಿಗಳಿಗೆ ದರ್ಶನ ಸಿಗದೇ ಪೂಜೆಯೂ ಮಾಡಿಸದೇ ದೇವಸ್ಥಾನದ ಬಾಗಿಲು ಹಾಕಿರುವುದನ್ನು ಕಂಡು ಭಕ್ತರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹತಾಶೆಗೊಂಡು ವಾಪಾಸ್ಸಾಗಿದ್ದಾರೆ.
ಅರ್ಚಕ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ್ ಮೂರ್ತಿ ಪೂಜೆ ಕೈoಕರ್ಯಗಳನ್ನು ಮಾಡುತ್ತಿದ್ದರು ಸಮೀತಿಯ ಪ್ರಕಾರ ಪ್ರತಿ ವರ್ಷವೂ ಅರ್ಚಕರನ್ನು ಬದಲಾವಣೆ ಮಾಡಬೇಕಾಗುತ್ತದೆ ಅದೇ ರೀತಿ ಈ ವರ್ಷದ ಶ್ರೀ ರಾಮನವಮಿ ನಂತರ ಮತ್ತೊಬ್ಬ ಅರ್ಚಕನಿಗೆ ದೇವಸ್ಥಾನದ ಬೀಗ ನೀಡಿ ಪೂಜೆ ಮುಂದುವರೆಸಬೇಕಾಗಿತ್ತು ಆದರೆ ಶ್ರೀನಿವಾಸ್ ಮೂರ್ತಿ ದೇವಾಲಯದ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದಾನೆ.ಈ ವಿಚಾರ ಈಗಾಗಲೇ ನಾವು ತಾಲ್ಲೂಕು ಆಡಳಿತಕ್ಕೆ ತಿಳಿಸಿದ್ದೇವೆ.
– ಪಾಂಡುರಂಗಯ್ಯ. ಕಾರ್ಯದರ್ಶಿ. ಶ್ರೀ ಆಂಜನೇಯ ಸ್ವಾಮಿ ದೊಡ್ಡಕಾಯಪ್ಪ ಸೇವಾ ಸಮಿತಿ. ಕುರಂ ಕೋಟೆ.
ಇದನ್ನೂ ಓದಿ :ಭಾರತವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದು ಸಿಬಿಐನ ಪ್ರಮುಖ ಜವಾಬ್ದಾರಿ: ಪಿಎಂ ಮೋದಿ