Advertisement

Kundapura: 150 ವರ್ಷ ಇತಿಹಾಸವಿರುವ ಕುಂಜ್ಞಾಡಿ ಕಂಬಳ

01:17 AM Dec 05, 2024 | Team Udayavani |

ಕುಂದಾಪುರ: ಸುಮಾರು 150 ವರ್ಷ ಇತಿಹಾಸವಿರುವ ಇಡೂರು ಕುಂಜ್ಞಾಡಿ ಗ್ರಾಮದ ಕುಂಜ್ಞಾಡಿ ಶ್ರೀ ಹಾçಗುಳಿ ಸಾಂಪ್ರದಾಯಿಕ ಕಂಬಳ್ಳೋತ್ಸವವು ಡಿ. 5ರಂದು ಕುಂಜ್ಞಾಡಿ ದೊಡ್ಮನೆ ಕಂಬಳಗದ್ದೆಯಲ್ಲಿ
ನಡೆಯಲಿದೆ.

Advertisement

ಕುಂಜ್ಞಾಡಿ ದೊಡ್ಮನೆ ಮನೆತನದವರ ನೇತೃತ್ವದಲ್ಲಿ ಹೖಾಗುಳಿ ದೇವಸ್ಥಾನದ ಕಂಬಳ ಸಮಿತಿಯವರು ಹಾಗೂ ಊರವರ ಸಹಕಾರದೊಂದಿಗೆ ಕಂಬಳ ನಡೆಯುತ್ತಿದೆ.

ಕಂಬಳದ ದಿನ ಬೆಳಗ್ಗೆ ಮೊದಲಿಗೆ ಕುಂಜ್ಞಾಡಿಯ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ, ಬಳಿಕ ಶ್ರೀ ಹಾçಗುಳಿ ದೇವರಿಗೆ, ಆದಿಸ್ವಾಮಿ ಬೊಬ್ಬರ್ಯ ದೇವರಿಗೆ, ದೊಡ್ಮನೆ ಮನೆಯ ನಾಗನಿಗೆ ಪೂಜೆ ಸಲ್ಲಿಸಲಾಗುತ್ತದೆ.

ಮುಹೂರ್ತದ ಹೋರಿಯಾಗಿ ಶಿರೂರುಮನೆ ನಿತಿನ್‌ ಶೆಟ್ರ ಮನೆಯ ಕೋಣಗಳನ್ನು ಕಂಬಳಗದ್ದೆಗೆ ಇಳಿಸಲಾಗುತ್ತದೆ.

ಪ್ರತಿವರ್ಷ 60-70 ಕೋಣಗಳು ಕಂಬಳಕ್ಕೆ ಬರುತ್ತವೆ. ದೊಡ್ಮನೆಯ ಸ್ವಾಮಿ ಮನೆಯಿಂದ ಕಂಬಳಗದ್ದೆಗೆ ಕಲಶ ತೆಗೆದುಕೊಂಡು ಹೋಗಿ, ಮನೆಯ ಹೋರಿಗಳನ್ನು ಇಳಿಸಿ, ಕೊನೆಯದಾಗಿ ಓಡಿಸುವುದರೊಂದಿಗೆ ಕಂಬಳ ಕೊನೆ
ಗೊಳ್ಳುತ್ತದೆ. ಆ ಬಳಿಕ ಮತ್ತೆ ಕಲಶದೊಂದಿಗೆ ದೊಡ್ಮನೆಗೆ ತೆರಳಬೇಕು. ಅಲ್ಲಿ ಕೋಣಗಳಿಗೆ ವೀಳ್ಯ, ತಾಂಬೂಲ ಸಹಿತ ಮರ್ಯಾದೆ ನೀಡಲಾಗುತ್ತದೆ. ರಾತ್ರಿಯ ಊಟ ಮುಗಿದ ಬಳಿಕ ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ರಂಗಪೂಜೆ ನೆರವೇರುತ್ತದೆ.

Advertisement

ಬಳಿಕ ಕಾಗೆಗಳಿಗೆ ಅನ್ನ ಹಾಕುವ ಕ್ರಮವಿದೆ. ಹಿಂದಿನಿಂದ ಬಂದ ಸಂಪ್ರದಾಯವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರಲಾಗುತ್ತಿದೆ.

650 ವರ್ಷ ಹಿರಿಮೆಯ ಹೊಸಮಠ ಕಂಬಳ
ತೆಕ್ಕಟ್ಟೆ: ಸುಮಾರು 650 ವರ್ಷ ಇತಿಹಾಸವಿರುವ ಕೊರ್ಗಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೊಸಮಠ ದೊಡ್ಮನೆ ಮನೆತನದ ಹೊಸಮಠ ಕಂಬಳ್ಳೋತ್ಸವವು 3 ಎಕ್ರೆ ವಿಸ್ತೀರ್ಣದ ಈ ಕಂಬಳ ಗದ್ದೆಯಲ್ಲಿ ನಡೆಯಲಿದೆ. ಮನೆತನಕ್ಕೆ ಸಂಬಂಧಿಸಿದ ಶ್ರೀ ಸ್ವಾಮಿ ಹಾಗೂ ಶ್ರೀ ನಾಗ ಸನ್ನಿಧಿಗೆ ಪೂಜೆ ಸಲ್ಲಿಸಿ, ಮುಹೂರ್ತಕ್ಕೆ ದೊಡ್ಮನೆಯ ಕೋಣಗಳನ್ನು ಗದ್ದೆಗೆ ಇಳಿಸುವ ಹಾಗೂ ಗೋರಿಯನ್ನು ಮೆಟ್ಟುವ ಪದ್ಧತಿ ಇದೆ. ಬಳಿಕ ಇತರ ಕೋಣಗಳು ಕಂಬಳದಲ್ಲಿ ಭಾಗವಹಿಸಲಿವೆ.

ಸಂಜೆ 6 ಗಂಟೆ ಬಳಿಕ ಸಂಪ್ರದಾಯದಂತೆ ಸೂಡಿ ಹೋರಿ (ದೀವಟಿಗೆ) ಓಡಿಸುವ ಮೂಲಕ ಕಂಬಳ ಸಂಪನ್ನಗೊಳ್ಳುವುದು. ಆದರೆ ಪ್ರಸ್ತುತ ಹೊನಲು ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದ್ದು, ಡಿ.5ರಂದು ಮಧ್ಯಾಹ್ನ ಗಂಟೆ 3ಕ್ಕೆ ನೋಂದಣಿ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ 4ರಿಂದ ವಿವಿಧ ಸ್ಪರ್ಧೆಗಳೊಂದಿಗೆ ಕಂಬಳ ಜರಗಲಿದೆ.

ಒಂದು ಗ್ರಾಮದಲ್ಲಿ 2 ಕಂಬಳ್ಳೋತ್ಸವ
ಕೊರ್ಗಿ ಹಾಗೂ ಹೊಸಮಠ ಸಹಿತ ಒಂದು ಗ್ರಾಮದಲ್ಲಿ 2 ಕಂಬಳ್ಳೋತ್ಸವ ನಡೆಯುವುದು ಇಲ್ಲಿನ ವಿಶೇಷತೆ. ಈ ಎರಡು ಕಂಬಗಳು ಅಕ್ಕ-ತಂಗಿ ಎನ್ನುವ ಪ್ರತೀತಿ ಕೂಡ ಇದೆ.

Advertisement

Udayavani is now on Telegram. Click here to join our channel and stay updated with the latest news.

Next