Advertisement

ಕುಣಿಗಲ್‌ನಲ್ಲಿ ಫ‌ುಟ್ಪಾತ್‌ ಅಂಗಡಿಗಳ ತೆರವು

07:42 PM Oct 11, 2019 | Team Udayavani |

ಕುಣಿಗಲ್‌: ವ್ಯಾಪಾರಸ್ಥರ ತೀವ್ರ ವಿರೋಧದ ನಡುವೆ ಪಟ್ಟಣದ ರಸ್ತೆ ಬದಿಯಲ್ಲಿಟ್ಟು ಕೊಂಡಿದ್ದ ಫ‌ುಟಾ³ತ್‌ ಅಂಗಡಿಗಳನ್ನು ಪೊಲೀಸರ ನೆರವಿನಿಂದ ಪುರಸಭಾ ಅಧಿಕಾರಿಗಳು ಗುರುವಾರ ತೆರವು ಗೊಳಿಸಿದರು.

Advertisement

ನೋಟಿಸ್‌ ನೀಡಲಾಗಿತ್ತು: ಪಟ್ಟಣದ ಕೋಟೆ ಹಾಗೂ ಸಂತೇ ಮೈದಾನದ ಮಾರ್ಗ ಸೇರಿದಂತೆ 3 ಭಾಗದ ಫ‌ುಟಾ³ತ್‌ಗಳಲ್ಲಿ ಹಲವು ವರ್ಷಗಳಿಂದ ಅಂಗಡಿಗಳನ್ನು ಇಟ್ಟುಕೊಂಡಿದ್ದರು.

ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಸಂಬಂಧ ಸಾರ್ವಜನಿಕರು ಹಲವು ಬಾರಿ ಪುರಸಭೆಗೆ ತೆರವುಗೊಳಸುವಂತೆ ಮನವಿ ಸಲ್ಲಿಸಿದ್ದರು.

ಹೀಗಾಗಿ ಪುರಸಭಾ ಅಧಿಕಾರಿಗಳು ಅಂಗಡಿ ಮಾಲಿಕರಿಗೆ ನೋಟಿಸ್‌ ನೀಡಲಾಗಿತ್ತು. ಗುರುವಾರ ಬೆಳಗ್ಗೆ ಪುರಸಭಾ ಕಂದಾಯ ಅಧಿಕಾರಿ ಜಗರೆಡ್ಡಿ ನೇತೃತ್ವದಲ್ಲಿ ಪರಿಸರ ಎಂಜಿನಿಯರ್‌ ಚಂದ್ರಶೇಖರ್‌ ಕಾರ್ಯಾಚರಣೆ ನಡೆಸಿದರು. ಈ ವೇಳೆ ವ್ಯಾಪಾರಿಗಳು ತೆರವಿಗೆ ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದರು.

ಮಾತಿನ ಚಕಮಕಿ: ರಸ್ತೆ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲು ಮುಂದಾದ ಅಧಿಕಾರಿಗಳೊಂದಿಗೆ ವ್ಯಾಪಾರಿಗಳು ವಾಗ್ವಾದಕ್ಕಿಳಿದರು. ಕೂಡಲೇ ಅಂಗಡಿ ತೆರವುಗೊಳಿಸಿ ಎಂದರೆ ನಮ್ಮ ಕುಟುಂಬ ಬೀದಿಗೆ ಬರಲಿದೆ ಎಂದು ವ್ಯಾಪಾರಿಗಳು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಜಗ್ಗದ ಅಧಿಕಾರಿಗಳು ನಿಮ್ಮಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಸಬೂಬು ಬೇಕಿಲ್ಲ, ಸಂತೇಮಾಳದಲ್ಲಿ ವ್ಯಾಪಾರ ಮಾಡಲು ಹಲವು ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಅಲ್ಲಿ ಹೋಗಿ ವ್ಯಾಪಾರ ಮಾಡಿ. ಸುಮ್ಮನೆ ನಾಗರಿಕರಿಗೆ ತೊಂದರೆ ಕೊಡಬೇಡಿ ಎಂದು ಖಡಕ್‌ ಎಚ್ಚರಿಕೆ ನೀಡಿದರು.

Advertisement

ತೆರವುಗೊಳಿಸಿ: ಕೆಲ ವ್ಯಕ್ತಿಗಳು ಚರಂಡಿ ಮೇಲೆ ಅಂಗಡಿ ಮಳಿಗೆ ನಿರ್ಮಾಣ ಮಾಡಿಕೊಂಡು ಕಾನೂನು ಬಾಹಿರವಾಗಿ ವ್ಯಾಪಾರ ಮಾಡುತ್ತಿದ್ದಾರೆ. ಮೊದಲು ಆ ಕಟ್ಟಡ ತೆರವುಗೊಳಿಸಿ ಬಳಿಕ ನಾವು ತೆರವುಗೊಳಿಸುತ್ತೇವೆ ಎಂದು ಪಟ್ಟು ಹಿಡಿದರು. ಈ ವೇಳೆ ಕಂದಾಯ ಅಧಿಕಾರಿ ಜಗರೆಡ್ಡಿ, ಅಕ್ರಮವಾಗಿ ಚರಂಡಿ ಮೇಲೆ ಅಂಗಡಿ ಮಳಿಗೆ ಮಾಡಿಕೊಂಡಿ ರುವವರಿಗೆ ನೋಟಿಸ್‌ ನೀಡಿ ತೆರವುಗೊಳಿಸಲಾಗು ವುದು. ಮೊದಲು ನೀವು ಅಂಗಡಿ ತೆರವುಗೊಳಿಸಿ ಎಂದು ತಿಳಿಸಿದರು. ಇದಕ್ಕೆ ಒಪ್ಪದ ವ್ಯಾಪಾರಿಗಳು
ಖಾಸಗಿ ಬಸ್‌ ನಿಲ್ದಾಣ, ಬಿ.ಎಂ.ರಸ್ತೆ ಬದಿಯಲ್ಲಿ ಹಣ್ಣು, ಹೂ, ತರಕಾರಿ ಮೊದಲಾದ ವಸ್ತು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಒಂದೆಡೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು, ಮುಂದಿನ ದಿನದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಅಂಗಡಿ ತೆರವುಗೊಳಿಸಬೇಕೆಂದು ತಿಳಿಸಿದರು. ಇದಕ್ಕೆ ಒಪ್ಪಿದ ಕೆಲ ವ್ಯಾಪಾರಿಗಳು, ಸ್ವಯಂ ಪ್ರೇರಿತರಾಗಿ ಅಂಗಡಿ ತೆರವು ಮಾಡಿಕೊಂಡರು.

ಮತ್ತೆ ಅಂಗಡಿ ಇಟ್ಟರೆ ದಂಡ: ತೆರವುಗೊಳಿಸಿದ ಸ್ಥಳದಲ್ಲಿ ಮತ್ತೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುವವರಿಗೆ ಮುಲಾಜಿಲ್ಲದೆ ದಂಡ ಹಾಕಲಾಗು ವುದು ಎಂದು ಪುರಸಭಾ ಮುಖ್ಯಾಧಿಕಾರಿ ಆರ್‌. ರಮೇಶ್‌ ಎಚ್ಚರಿಕೆ ನೀಡಿದರು.ಕಾರ್ಯಾಚರಣೆ ಯಲ್ಲಿ ಕಂದಾಯ ನಿರೀಕ್ಷಕರಾದ ಹನುಮಂತ ರಾಜು, ವ್ಯವಸ್ಥಾಪಕ ವೆಂಕಟರಮಣಪ್ಪ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next