Advertisement

Kunigal : ಲಾರಿ ಹಿಂಬದಿಗೆ ಕಾರು ಢಿಕ್ಕಿ; ತಾಯಿ, ಮಗ ಸ್ಥಳದಲ್ಲೇ ಮೃತ್ಯು

10:00 PM Sep 15, 2023 | Team Udayavani |

ಕುಣಿಗಲ್ : ಲಾರಿ ಹಿಂಬದಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಾಯಗೊಂಡ ಭೀಕರ ಅಪಘಾತ ರಾಷ್ಟ್ರೀಯ ಹೆದ್ದಾರಿ 75 ತಾಲೂಕಿನ ಹೇರೂರು ಸೇತುವೆ ಬಳಿ ಶುಕ್ರವಾರ ರಾತ್ರಿ ನಡೆದಿದೆ.

Advertisement

ನಾಗಮಂಗಲ ತಾಲೂಕು ಸೀಗೇಹಳ್ಳಿ ಗ್ರಾಮ ಹಾಲಿ ಬೆಂಗಳೂರು ಮಾದನಾಯಕಹಳ್ಳಿ ವಾಸಿ ಶೋಭ ಸುಮಾರು (35 ) ಆಕೆಯ ಪುತ್ರ ನಿಖಿಲ್ ಗೌಡ (12) ಮೃತ ದುರ್ದೈವಿಗಳು, ಪತಿ ಗಂಗೇಶ್ ಹಾಗೂ ಮಗಳು ಭುವನ ತೀವ್ರವಾಗಿ ಗಾಯಗೊಂಡಿದ್ದಾರೆ. ಢಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.

ಗಂಗೇಶ್ , ಪತ್ನಿ ಮಗ ಮತ್ತು ಮಗಳು ಗೌರಿ-ಗಣೇಶ ಹಬ್ಬಕ್ಕೆಂದು ಬೆಂಗಳೂರು ಮಾದನಾಯಕನಹಳ್ಳಿ ಯಿಂದ ಕಾರಿನಲ್ಲಿ ತನ್ನ ಸ್ವಗ್ರಾಮ ಸಿಗೇಹಳ್ಳಿ ಗ್ರಾಮಕ್ಕೆ ಹೊಗುತ್ತಿರಬೇಕಾದರೆ, ರಾಷ್ಟ್ರೀಯ ಹೆದ್ದಾರಿ 75 ಹೇರೂರು ಸೇತುವೆ ಬಳಿ ಬೆಂಗಳೂರಿನಿಂದ ಎಡಿಯೂರು ಕಡೆ ಚಲಿಸುತ್ತಿದ್ದ ಲಾರಿ ಏಕಾಏಕಿ ಬ್ರೇಕ್ ಹಾಕಿದ ಕಾರಣ ಹಿಂಬದಿಗೆ ಢಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎನ್ನಲಾಗಿದೆ. ಗಾಯಾಳುಗಳಿಬ್ಬರನ್ನು ಅದಿಚುಂಚನಗಿರಿ ಆಸ್ಪತ್ರೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ನವೀನ್ ಗೌಡ ಭೇಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next