Advertisement

Kunigal; ಬೀದಿ‌ ನಾಯಿ ದಾಳಿ‌ : ಗಂಭೀರವಾಗಿ ಗಾಯಗೊಂಡ ಮಗು

11:00 PM Aug 11, 2023 | Team Udayavani |

ಕುಣಿಗಲ್ : ಬೀದಿ ನಾಯಿ ದಾಳಿಗೆ ಮಗು ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಮಿಷಿನ್ ಕಾಂಪೋಡ್ ನಲ್ಲಿ‌ ಶುಕ್ರವಾರ ಸಂಜೆ ನಡೆದಿದೆ. ಸುಪೀಯಾ (4) ಗಾಯಗೊಂಡ ಮಗು

Advertisement

ಸುಪೀಯ ಹಾಗೂ ಇತರೆ ಮಕ್ಕಳು ಸಪ್ತಗಿರಿ ಆಸ್ಪತ್ರೆ ಮುಂಭಾಗದಲ್ಲಿ ಇರುವ ಮಿಷನ್ ಕಾಂಪೋಡ್ ವಾರ್ಡ್ ನಂ 17 ಬಡವಣೆಯಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ನಾಯಿಗಳು ದಾಳಿ ಮಾಡಿ ಮಗುವನ್ನು ಗಾಯಗೊಳಿಸಿದೆ. ಮಗುವಿನ ಅಳುವ ಶಬ್ದವನ್ನು ಕೇಳಿದ ಪೋಷಕರು ಮಗವನ್ನು ರಕ್ಷಣೆ ಮಾಡಿದ್ದಾರೆ, ಕುಣಿಗಲ್ ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕರೆದುಕೊಂಡು ಹೋಗಿದ್ದಾರೆ. ದೃಶ್ಯ ಸಿಸಿ ಟಿವಿಯಲ್ಲಿ ಪ್ರಕಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next