Advertisement
ಜಾರ್ಖಂಡ್ ರಾಜ್ಯದ ಏಜಾಜ್(30), ಸಹೇಬುಲ್ಲಾ(34)ಬಂಧಿತರು.
Related Articles
ಆರೋಪಿಗಳ ಪತ್ತೆಗೆ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಜಿಲ್ಲಾ ಎಸ್ಪಿ ಅಶೋಕ್, ಎಎಸ್‌ಪಿ ಮರಿಯಪ್ಪ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಓಂಪ್ರಕಾಶ್, ಸಿಪಿಐ ನವೀನ್‌ಗೌಡ ನೇತೃತ್ವದಲ್ಲಿ ಪೋಲಿಸ್ ತಂಡವನ್ನು ರಚಿಸಲಾಗಿತ್ತು.
Advertisement
ಅಣ್ಣನ ನೋಡಲು ಬಂದ ಆರೋಪಿ:ಆರೋಪಿ ಜಾರ್ಖಂಡ್ ಮೂಲದ ಏಜಾಜ್ ತನ್ನ ಅಣ್ಣ ಕೆಲಸ ಮಾಡುತ್ತಿರುವ ಕರ್ನಾಟಕದ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿಗೆ ಹಲವು ಬಾರಿ ಆಗಮಿಸಿ ಅಣ್ಣನನ್ನು ಭೇಟಿಯಾಗಿ ಹೋಗಿದ್ದ ಎನ್ನಲಾಗಿದೆ. ಬೈಕ್ ಕಳ್ಳತನ ! : ಜಾರ್ಖಂಡ್‌ನಿಂದ ಗನ್ ತಂದಿದ್ದರು.ಅಣ್ಣನನ್ನು ನೋಡಲು ಬಂದ ಏಜಾಜ್, ಸಹೇಬುಲ್ಲಾ ಜಾರ್ಖಂಡ್‌ನಿಂದ ಬಂದೂಕು ತೆಗೆದುಕೊಂಡು ಬಂದು, ಬೆಂಗಳೂರಿನಲ್ಲಿ ಬೈಕ್ ಕದ್ದಿದ್ದರು ಎನ್ನಲಾಗಿದೆ. ಕುಣಿಗಲ್ ಮಾರ್ಗವಾಗಿ ತುರುವೇಕೆರೆಗೆ ಹೋಗುತ್ತಿದ್ದ ವೇಳೆ ಉರ್ಕೆಹಳ್ಳಿ ಒಂಟಿ ಮನೆಯನ್ನೇ ಟಾಗೇìಟ್ ಮಾಡಿ ಕುಡಿಯುವ ನೀರು ಕೇಳುವ ನೆಪದಲ್ಲಿ ಮನೆ ಒಳಗೆ ನುಗ್ಗಿ ದರೋಡೆ ಮಾಡಿ ಪರಾರಿ ಆಗಿದ್ದರು. ಆರೋಪಿಗಳ ಎಡೆಮುಡಿ ಕಟ್ಟಿದ ಪೊಲೀಸರು: ಪೊಲೀಸರ ತಂಡ ಆರೋಪಿಗಳ ಪತ್ತೆಗೆ ವಿವಿಧೆಡೆ ಕಾರ್ಯಾಚರಣೆ ನಡೆಸಿತು. ಬಳಿಕ ಆರೋಪಿಗಳಾದ ಏಜಾಜ್, ಸಹೇಬುಲ್ಲಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಗರಿಕರ ಪ್ರಶಂಸೆ:
ಘಟನೆ ನಡೆದು ಕೇವಲ 5 ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯಾಚರಣೆಗೆ ತಾಲೂಕಿನ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.