Advertisement
ತಾಲೂಕಿನ ಎಡಿಯೂರು ಹೋಬಳಿ ಕಟ್ಟಿಗೆಹಳ್ಳಿ ಗ್ರಾಮದ, ಬಿಜಿಎಸ್ ಶಾಲೆಯ ವಿದ್ಯಾರ್ಥಿ, 9 ವರ್ಷದ ಕೆ.ಆರ್.ಮೋಹಿತ್ (ಬಾಲಾಜಿ) ಮೃತ ದುರ್ದೈವಿ.
Related Articles
Advertisement
ಮೃತ ವಿದ್ಯಾರ್ಥಿಯನ್ನು ಅಂಬುಲೆನ್ಸ್ ನಲ್ಲಿ ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶಾವಾಗಾರಕ್ಕೆ ತರಲಾಯಿತು. ಶವವನ್ನು ಶವಗಾರಕ್ಕೆ ಸಾಗಿಸಲು ಬಿಡದ ವಿದ್ಯಾರ್ಥಿಯ ಸಂಬಂಧಿಕರು ಹಾಗೂ ನೂರಾರು ಗ್ರಾಮಸ್ಥರು ಮಗುವಿನ ಸಾವಿಗೆ ಶಾಲಾ ಆಡಳಿತ ಮಂಡಲಿ ನೇರ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶವವನ್ನು ಶಾಲಾ ಮುಂಭಾಗದಲ್ಲಿ ಇಟ್ಟು ಉಗ್ರ ಪ್ರತಿಭಟನೆ ನಡೆಸಿದರು, ಬಳಿಕ ಹಳೇಯ ರಾಷ್ಟ್ರೀಯ ಹೆದ್ದಾರಿ 48 ರ ಬಿ.ಎಂ ರಸ್ತೆಯಲ್ಲಿ ಶವವನ್ನು ಇಟ್ಟು ಹಲವು ಸಮಯ ಪ್ರತಿಭಟನೆ ನಡೆಸಿದರು, ನಮಗೆ ನ್ಯಾಯ ಬೇಕೂ ಎಂದರು, ಶಾಲಾ ಆಡಳಿತ ಮಂಡಲಿಯ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸಂಚಾರ ದಲ್ಲಿ ವ್ಯತ್ಯಯ ಉಂಟಾಯಿತು, ಪರಿಸ್ಥತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ರಾಮಕೃಷ್ಣ ದಂಪತಿಗೆ ಮೋಹಿತ್ ಹಾಗೂ ಒಂದು ಹೆಣ್ಣು ಮಗುವಿದ್ದು, ಇವರಲ್ಲಿ ಮೋಹಿತ ಅಪಘಾತದಲ್ಲಿ ಮೃತಪಟ್ಟ ವಿಷಯ ತಿಳಿದ ತಂದೆ, ತಾಯಿ ಹಾಗೂ ಗ್ರಾಮಸ್ಥರು ಶಾಲೆ ಬಳಿಗೆ ದೌಡಾಯಿಸಿ ಶವವನ್ನು ನೋಡಿ ಗೋಳಾಡಿದರು.
ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಡಾ.ಹೆಚ್.ಡಿ.ರಂಗನಾಥ್, ಮಾಜಿ ಸಚಿವ ಡಿ.ನಾಗರಾಜಯ್ಯ, ಪಿಕಾರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್ ಮೃತನ ಪೋಷಕರನ್ನು ಬೇಟಿಯಾಗಿ ಸಮಾಧಾನ ಪಡಿಸಿದರು, ಬಳಿಕ ಪೊಲೀಸ ರಿಂದ ಘಟನೆ ಸಂಬಂಧ ಮಾಹಿತಿ ಪಡೆದರು.
ಪಟ್ಟು ಬಿಡದ ಪ್ರತಿಭಟನಾಕಾರರುಘಟನೆ ನಡೆದು ನಾಲ್ಕು ಗಂಟೆಗಳು ಕಳೆದರೂ ಶಾಲಾ ಆಡಳಿತ ಮಂಡಳಿ ಯಾರೊಬ್ಬರು ಸ್ಥಳಕ್ಕೆ ಬರದ ಕಾರಣ ಕುಪಿತಗೊಂಡ ಪ್ರತಿಭಟನಾಕಾರರು ಶಾಲಾ ಅವರಣಕ್ಕೆ ನುಗ್ಗಲು ಯತ್ನಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಬಿಜಿಎಸ್ ಶಾಲಾ ಕಾಲೇಜು ಆಡಳಿತಾಧಿಕಾರಿ, ಅದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಪ್ರತಿಭಟನೆಯನ್ನು ಶಾಲಾ ಮುಂಭಾಗದಲ್ಲಿ ಮುಂದುವರೆಸಿದ್ದಾರೆ.