ಕುಣಿಗಲ್ : ಲಾರಿ, ಕಾರು ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪತಿ, ಪತ್ನಿ, ಮಗು ಸೇರಿದಂತೆ ಒಂದೇ ಕುಟುಂಬದ ಮೂರು ಮಂದಿ ಮೃತಪಟ್ಟು ಓರ್ವ ಗಾಯಗೊಂಡಿರುವ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿ 33 ರ ಅರಮನೆ ಹೊನ್ನಮಾಚನಹಳ್ಳಿ ಸಮೀಪ ಮಂಗಳವಾರ ಸಂಜೆ ಸಂಭವಿಸಿದೆ.
ರಾಮನಗರ ಜಿಲ್ಲೆ ಚನ್ನಪ್ಪಟಣ ಶಾಮಿಯಾ ಮೊಹಲ್ಲಾದ ಸೈಯದ್ ಮೊಹಮದ್ ನಜ್ಮಿ (42), ನಾಜೀಯಾ (30). ಸೈಹದ್‌ಖುದ್ ಮೀರ್ ಹಸಿ(2) ಮೃತ ದುರ್ದೈವಿಗಳು, ತೀವ್ರವಾಗಿ ಗಾಯಗೊಂಡ ಸೈಹದ್‌ಖುದ್ ಮೀರ್ ನಬಿ (3) ನನ್ನು ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೋಯ್ಯಲಾಗಿದೆ.
ಘಟನೆ ವಿವರ : ಮಂಗಳವಾರ ಸೈಯದ್‌ಮೊಹಮದ್ ನಜ್ಮಿ ಅವರು ತನ್ನ ಪತ್ನಿ ನಾಜೀಯಾ ಹಾಗೂ ಮಕ್ಕಳಾದ ಸೈಹದ್‌ಖುದ್ ಮೀರ್ ನಬಿ, ಸೈಹದ್‌ಖುದ್ ಮೀರ್ ಹಸಿ ಅವರೊಂದಿಗೆ ರಂಜಾನ್ ಹಬ್ಬ ಮುಗಿಸಿಕೊಂಡು, ಚನ್ನಪಟ್ಟಣದಿಂದ ತನ್ನ ಸಂಬಂಧಿಕರ ಮೆನೆ ಭದ್ರಾವತಿಗೆ ಸ್ಯಾಂಟ್ರೋ ಕಾರಿನಲ್ಲಿ ತೆರಳುತ್ತಿರಬೇಕಾದರೆ, ತಾಲೂಕಿನ ಹುಲಿಯೂರುದುರ್ಗ ಹೋಬಳಿ ಅರಮನೆ ಹೊನ್ನಮಾಚನಹಳ್ಳಿ. ಸಮೀಪ ಹೈದರಾಬಾದ್‌ನಿಂದ ಕೇರಳಕ್ಕೆ ತೆರಳುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಬವಿಸಿದೆ ಎನ್ನಲಾಗಿದ್ದು ಸ್ಥಳದಲ್ಲೇ ಮೂರು ಮಂದಿ ಮೃತಪಟ್ಟರು, ತೀವ್ರವಾಗಿ ಗಾಯಗಾಯಗೊಂಡ ಸೈಹದ್‌ಖುದ್ ಮೀರ್ ನಬಿನನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನಾಗಮಂಗಲ ತಾಲೂಕು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ,
ಘಟನಾ ಸ್ಥಳಕ್ಕೆ ಪಿಎಸ್‌ಐ ಚೇತನ್ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.