ಕುಣಿಗಲ್ : ಸರ್ವೆ ಕಾರ್ಯಕ್ಕೆ ಜಮೀನಿಗೆ ಹೊಗಿದ್ದ ಸರ್ವೇಯರ್ ಮೇಲೆ ವ್ಯಕ್ತಿಗಳು ಇಟ್ಟಿಗೆ, ದೊಣ್ಣೆಯಿಂದ ಹಲ್ಲೆ ಮಾಡಿರುವ ಘಟನೆ ಪಟ್ಟಣದ ವಾರ್ಡ್ ನಂ ಒಂದು ಬಿದನಗೆರೆ ಗ್ರಾಮದಲ್ಲಿ ಗುರುವಾರ ನಡೆದಿದೆ.
ಇಲ್ಲಿನ ತಾಲೂಕು ಕಚೇರಿಯ ಲೈಸನ್ಸ್ ಸರ್ವೆಯರ್ ಗಿರೀಶ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದರು ಘಟನೆಗೆ ಸಂಬಂಧಿಸಿದಂತೆ ಐವರ ವಿರುದ್ದ ಪ್ರಕರಣ ದಾಖಲಿಸಿದ್ದು ಇಬ್ಬರು ಆರೋಪಿಗಳನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ,
ಘಟನೆ ವಿವರ: ಬಿದನಗೆರೆ ಗ್ರಾಮದ ಸರ್ವೆ ನಂಬರ್ 74 ರ ಜಮೀನಿಗೆ ಸಂಬಂಧಿಸಿದಂತೆ ಸರ್ವೆ ಮಾಡಲು ಗ್ರಾಮದ ರತ್ನಮ್ಮ ಅವರು ಭೂಮಾಪನ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದ್ದರು, ಈ ನಿಟ್ಟಿನಲ್ಲಿ ಸಹಾಯಕ ನಿರ್ದೇಶಕರು ಸರ್ವೆ ಕಾಯಕ್ಕೆ ಲೈಸನ್ಸ್ ಸರ್ವೆಯರು ಆಗಿರುವ ಗಿರೀಶ್ ಅವರನ್ನು ನಿಯೋಜಿಸಿದ್ದರು, ಗಿರೀಶ್ ಅವರು ಗುರುವಾರ ಸರ್ವೆ ಮಾಡಲೆಂದು ಬಿದನಗೆರೆ ಗ್ರಾಮಕ್ಕೆ ತೆರಳಿ ಸರ್ವೆ ಕಾರ್ಯದಲ್ಲಿ ತೊಡಗಿದ್ದರು. ಆ ವೇಳೆ ಅಲ್ಲಿಗೆ ಬಂದ ರತ್ನಮ್ಮ ಅವರ ಸಂಬಂಧಿ ಬಿದನಗೆರೆ ಗ್ರಾಮದ ಕೃಷ್ಣಪ್ಪ ಹಾಗೂ ಆತನ ಮಗ ಆನಂದ್, ಸುಶೀಲಾ, ಪೂರ್ಣಿಮ, ಗಂಗಣ್ಣ ಅವರು ಯಾವ ದಾಖಲೆ ಆಧಾರದ ಮೇಲೆ ಜಮೀನು ಸರ್ವೆ ಮಾಡಲು ಬಂದಿದ್ದೀರ ಎಂದು ಸರ್ವೆಯರ್ ಗಿರೀಶ್ ಅವರನ್ನು ಪ್ರಶ್ನಿಸಿದ್ದಾರೆ, ರತ್ನಮ್ಮ ನೀಡಿರುವ ದಾಖಲೆ ಮೇರೆಗೆ ಸರ್ವೆ ಮಾಡಲು ಬಂದಿದ್ದೇನೆ ಎಂದು ಸರ್ವೆಯರ್ ತಿಳಿಸಿದ್ದಾರೆ, ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ಇದೆ, ಹೇಗೆ ಅಳತೆ ಮಾಡಲು ಬಂದಿದ್ದೀರ ಎಂದು ಕೃಷ್ಣಪ್ಪ ಹಾಗೂ ಆತನ ಮಗ ಆನಂದ್, ವಾಗ್ವಾದ ನಡೆಸಿ ಇಟ್ಟಿಗೆ ಹಾಗೂ ದೋಣ್ಣೆಯಿಂದ ಹಲ್ಲೆ ನಡೆಸಿದ್ದಾರೆ, ಹಾಗೂ ಅರ್ಜಿದಾರರಾದ ರತ್ನಮ್ಮ ಮೇಲೆ ಸುಶೀಲಾ, ಪೂರ್ಣಿಮ, ಗಂಗಣ್ಣ ಅವರು ಹಲ್ಲೆ ನಡೆಸಿದ್ದಾರೆ ಎಂದು ನೀಡಿದ ದೂರಿನ ಮೇಲೆಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,
ಪ್ರಕರಣಕ್ಕೆ ಸಂಬಂಧಿಸಿ ಆನಂದ್ ಹಾಗೂ ಕೃಷ್ಣಪ್ಪ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Bihar ದರೋಡೆಕೋರ-ರಾಜಕಾರಣಿ ಆನಂದ್ ಮೋಹನ್ ಸಿಂಗ್ ಜೈಲಿನಿಂದ ಬಿಡುಗಡೆ