Advertisement

ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಕ್ರಮಕ್ಕೆ ಸೂಚನೆ

03:39 PM Aug 08, 2019 | Naveen |

ಕುಣಿಗಲ್: ಪರಿಸರ ಮತ್ತು ನಾಗರಿಕರ ಆರೋಗ್ಯ ಹಾಗೂ ವನ್ಯ ಜೀವಿಗಳ ನಾಶಕ್ಕೆ ಕಾರಣವಾಗಿರುವ ಅಕ್ರಮ ಕಲ್ಲುಗಣಿಗಾರಿಕೆ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ತಾಪಂ ಅಧ್ಯಕ್ಷ ಹರೀಶ್‌ನಾಯ್ಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

Advertisement

ನಿಯಮ ಉಲ್ಲಂಘನೆ: ಟಿ.ಹೊಸಹಳ್ಳಿ, ಡಿ.ಹೊಸ ಹಳ್ಳಿ, ಕೊಡವತ್ತಿ ಮತ್ತು ಸಂತೇಮಾವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೆ ಹಾಗೂ ನಿಯಮಾನುಸಾರ ಕ್ರಷರ್‌ ನಡೆಯುತ್ತಿಲ್ಲ. ಇದು ಪರಿಸರ ಮತ್ತು ನಾಗರಿಕರ ಆರೋಗ್ಯಕ್ಕೆ ಮಾರಕವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಗುರುವಾರ ತಾಪಂ ಅಧ್ಯಕ್ಷ ಹರೀಶ್‌ ನಾಯ್ಕ ಹಾಗೂ ಇಒ ಶಿವರಾಜಯ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ಸಂದೀಪ್‌, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ನಿರ್ದೇಶಕ ರಮೇಶ್‌ ಜೊತೆಗೆ ತಾಲೂಕಿನ ತರಿಕೆರೆ ಬಾಲಾಜಿ ಕ್ರಷರ್‌ ಸೇರಿ ಹಲವು ಗಣಿಗಾರಿಕೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ವ್ಯವಸ್ಥಾಪಕರಿಗೆ ತರಾಟೆ: ಗಣಿಗಾರಿಕೆಗೆ ಸಂಬಂಧಿಸಿ ದಾಖಲೆ ನೀಡುವಂತೆ ಬಾಲಾಜಿ ಕ್ರಷರ್‌ ವ್ಯವಸ್ಥಾಪಕರಿಗೆ ಹರೀಶ್‌ ನಾಯ್ಕ ಕೇಳಿದರು. ದಾಖಲೆಗಳು ಇಲ್ಲ, ಬೇರೊಬ್ಬರಲ್ಲಿದೆ ಎಂದು ತಿಳಿಸಿ ದರು. ಇದರಿಂದ ಕೆಂಡಾಮಂಡಲರಾದ ಹರೀಶ್‌ ನಾಯ್ಕ, ಇಲ್ಲಿ ನೀನು ಯಾವ ಹುದ್ದೆಯಲ್ಲಿ ಇದ್ದೀಯಾ? ಗಣಿಗಾರಿಕೆ ನಡೆಸಲು ಅಗತ್ಯ ದಾಖಲೆ ಇಟ್ಟುಕೊಳ್ಳಬೇಕು. ಇಲ್ಲ ಅಂದರೆ ಅರ್ಥವೇನು ಎಂದು ತರಾಟೆ ತೆಗೆದುಕೊಂಡರು. ಈ ವೇಳೆ ಪ್ರತಿ ಕ್ರಿಯಿಸಿದ ಭೂ ವಿಜ್ಞಾನ ಇಲಾಖೆಯ ಸಂದೀಪ್‌, ವಾರದ ಒಳಗಾಗಿ ಎಲ್ಲಾ ದಾಖಲೆ ಪಡೆಯ ಲಾಗುವುದು ಎಂದರು.

ಕಾನೂನಿಗೆ ವಿರುದ್ಧ: ಕಲ್ಲು ಗಣಿಗಾರಿಕೆಯಿಂದ ಪರಿಸರ ಮೇಲೆ ಹಾಗುವ ಹಾನಿ ತಡೆಗೆ ಏನು ಕ್ರಮ ಕೈಗೊಂಡಿದ್ದೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಹರೀಶ್‌ನಾಯ್ಕ, ತಾಲೂಕಿನಲ್ಲಿ ನಡೆಯುತ್ತಿರುವ ಬಹುತೇಕ ಗಣಿಗಾರಿಕೆಗಳು ಕಾನೂನಿಗೆ ವಿರುದ್ಧ ವಾಗಿ ನಡೆಸಲಾಗುತ್ತಿದೆ. ಅಕ್ಕಪಕ್ಕ ಗ್ರಾಮಗಳಲ್ಲಿ ಭೂಮಿ ಕಂಪಿಸಿ ಮನೆಗಳು ಬಿರುಕು ಬಿಟ್ಟಿವೆ. ಗರ್ಭಿ ಣಿಯರು ಮನೆಯಲ್ಲಿ ವಾಸಿಸದ ಪರಿಸ್ಥಿತಿ ನಿರ್ಮಾ ಣವಾಗಿದೆ. ಲಾರಿಗಳಲ್ಲಿ ನಿಗದಿಗಿಂತ ಹೆಚ್ಚು ಪ್ರಮಾ ಣದಲ್ಲಿ ಜಲ್ಲಿ ಸಾಗಿಸಲಾಗುತ್ತಿದೆ. ಇದರಿಂದ ರಸ್ತೆಗಳು ಹಾಳಾಗುತ್ತಿವೆ. ಲಾರಿ ಮೇಲೆ ಟಾರ್ಪಲ್ ಹಾಕದ ಕಾರಣ ಧೂಳಿನ ಸಮಸ್ಯೆ ಸೃಷ್ಟಿಯಾಗಿದೆ. ದಾಖಲೆ ಇಲ್ಲದೆ ಹಾಗೂ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ಕ್ರಷರ್‌ ಮುಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಸದಸ್ಯ ಕೆಂಪೇಗೌಡ, ಪಿಡಿಒ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next