Advertisement

ಪರಿಶೀಲನೆಗೆ ಬಂದವರಿಗೆ ಕಾರ್ಮಿಕರಿಂದ ಘೇರಾವ್‌

03:32 PM Aug 08, 2019 | Naveen |

ಕುಣಿಗಲ್: ಅಂಚೇಪಾಳ್ಯ ವಸಾಹತು ಪ್ರದೇಶದ ಇಂಡೋಸ್ಪ್ಯಾನಿಷ್‌ ಕಾರ್ಖಾನೆಯ ಕ್ಯಾಂಟೀನ್‌ನಲ್ಲಿ ಊಟ ಸೇವಿಸಿ 130 ಕಾರ್ಮಿಕರು ಅಸ್ವಸ್ಥಗೊಂಡ ಪ್ರಕರಣ ಹಿನ್ನೆಲೆಯಲ್ಲಿ ಪರಿಶೀಲನೆಗೆ ಬುಧವಾರ ಆಗಮಿಸಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕಾರ್ಮಿಕರೇ ದಿಗ್ಬಂಧನ ವಿಧಿಸಿ ಗಲಾಟೆ ಮಾಡಿದ ಘಟನೆ ನಡೆಯಿತು.ಕಾರ್ಖಾನೆ ಕ್ಯಾಂಟೀನ್‌ನಲ್ಲಿ ಊಟ ಮಾಡಿದ 130ಕ್ಕೂ ಕಾರ್ಮಿಕರು ಅಸ್ವಸ್ಥ ಗೊಂಡು ವಿವಿಧ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಬುಧವಾರ ಪ್ರಕಟವಾದ ಪತ್ರಿಕಾ ವರದಿ ಹಿನ್ನೆಲೆಯಲ್ಲಿ ತಾಪಂ ಅಧ್ಯಕ್ಷ ಹರೀಶ್‌ ನಾಯ್ಕ, ಸದಸ್ಯ ಕೆಂಪೇಗೌಡ ಮತ್ತು ಡಿಎಚ್ಒ ಚಂದ್ರಿಕಾ, ಇಒ ಶಿವರಾಜಯ್ಯ ನೇತೃತ್ವದ ಅಧಿಕಾರಿಗಳ ತಂಡ ಕಾರ್ಖಾನೆಗೆ ಭೇಟಿ ನೀಡಿದ್ದು, ಇದರಿಂದ ಆಕ್ರೋಶಗೊಂಡ ಕಾರ್ಖಾನೆ ಆಡಳಿತ ಮಂಡಳಿ ಕಾರ್ಮಿಕರನ್ನು ಎತ್ತಿಕಟ್ಟಿ ಗಲಾಟೆ ಮಾಡಿಸಿ ಪರಿಶೀಲನೆಗೆ ಅವಕಾಶ ಕೊಡದೇ ತಪ್ಪು ಮುಚ್ಚಿಟ್ಟುಕೊಳ್ಳುವ ಹುನ್ನಾರ ಮಾಡಿದೆ.

Advertisement

ಕ್ಯಾಂಟೀನ್‌ಗೆ ಪರವಾನಗಿ ಇಲ್ಲ: ಅಧಿಕಾರಿಗಳ ಜತೆ ಆಗಮಿಸಿದ್ದ ಮುಖ್ಯಪೇದೆ ಗಲಾಟೆ ನಿಯಂತ್ರಿಸಲು ಆಗದೆ ಮೂಕ ಪೇಕ್ಷಕರಾಗಿದ್ದರು. ಗಲಾಟೆ ನಡು ವೆಯೂ ಕ್ಯಾಂಟೀನ್‌ನ ಅಡುಗೆ ಮನೆ ಪರಿಶೀಲಿಸಿ ಅಧಿಕಾರಿ ಮತ್ತು ಜನಪ್ರತಿನಿಧಿಗಳ ತಂಡ ಕ್ಯಾಂಟೀನ್‌ ನಡೆಸಲು ಪರವಾನಗಿ ಪಡೆದಿರುವ ಬಗ್ಗೆ ಪ್ರಶ್ನೆ ಮಾಡಿ ದಾಗ ‘ಏಳು ವರ್ಷದಿಂದ ಕ್ಯಾಂಟೀನ್‌ ನಡೆಸ ಲಾಗುತ್ತಿದೆ. ಯಾವುದೇ ಪರವಾನಗಿ ಪಡೆದಿಲ್ಲ ಎಂದು ಕಾರ್ಖಾನೆ ಅಡಳಿತ ಮಂಡಳಿ ತಪ್ಪು ಒಪ್ಪಿಕೊಂಡಿದೆ.

ಜಟಾಪಟಿ, ತಳ್ಳಾಟ: ಈ ಸಮಯಕ್ಕೆ ಆಗಮಿಸಿದ ನೂರಾರು ಮಹಿಳಾ ಕಾರ್ಮಿಕರು ಪ್ರಶ್ನೆ ಮಾಡುತ್ತಿದ್ದ ತಾಪಂ ಅಧ್ಯಕ್ಷ ಹರೀಶ್‌ ನಾಯ್ಕ ಹಾಗೂ ತಾಪಂ ಸದಸ್ಯ ಕೆಂಪೇಗೌಡ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇಲ್ಲಿ ಎಲ್ಲವೂ ಸರಿಯಾಗಿದೆ. ನಿಮ್ಮನ್ನ ಪರಿಶೀಲನೆ ಮಾಡಲು ಕರೆದಿರುವವರು ಯಾರು ಎಂದು ರೇಗಾಡಿ ದರು. ಈ ವೇಳೆ ಮಹಿಳಾ ಕಾರ್ಮಿಕರು ಹಾಗೂ ಪರಿ ಶೀಲನಾ ತಂಡದ ನಡುವೆ ಜಟಾಪಟಿ ನಡೆದು ತಳ್ಳಾ ಟವೂ ನಡೆಯಿತು. ನಂತರ ಮಾಧ್ಯಮದವರಮೇಲೂ ಗರಂ ಆದ ಕಾರ್ಮಿಕರು, ಇಲ್ಲಿಗೆ ಏಕೆ ಬಂದಿದ್ದೀರಾ? ವಿಡಿಯೋ ಮಾಡಬೇಡಿ, ಫೋಟೋ ತೆಗಿಬೇಡಿ. ಇಲ್ಲಿ ಏನೂ ಆಗಿಲ್ಲ ಎಂದು ವಾಗ್ವಾದ ನಡೆಸಿದರು. ಆಡಳಿತ ಮಂಡಳಿ ಕಾರ್ಮಿ ಕರನ್ನು ಸಮಾಧಾನ ಪಡಿಸಿತು. ಆಹಾರ ಸುರಕ್ಷಾ ಕ್ರಮ ಅನುಸರಿಸಿಲ್ಲ. ಜೊತೆಗೆ ಕ್ಯಾಂಟೀನ್‌ ನಡೆಸಲು ಯಾವುದೇ ಅನುಮತಿ ಪಡೆ ದಿಲ್ಲ. ಈ ಸಂಬಂಧ ಕಾರ್ಖಾನೆ ವಿರುದ್ಧ ವರದಿ ಸಲ್ಲಿಸ ಲಾಗುವುದೆಂದು ಡಿಎಚ್ಒ ಚಂದಿಕಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next