Advertisement

Kunigal; ಬೈಕ್ ನಡುವೆ ಮುಖಾಮುಖಿ ಢಿಕ್ಕಿ: ಓರ್ವ ಸಾವು

10:49 PM Dec 04, 2023 | Team Udayavani |

ಕುಣಿಗಲ್ :ರಾಷ್ಟ್ರೀಯ ಹೆದ್ದಾರಿ 48 ನಂಜೀಚನ್ನನಪಾಳ್ಯ ಗ್ರಾಮದ ಬಳಿ ಎರಡು ಬೈಕ್‌ಗಳ ನಡುವೆ ಸೋಮವಾರ ಮುಖಾಮುಖಿ ಢಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

Advertisement

ತಾಲೂಕಿನ ಎಡಿಯೂರು ಹೋಬಳಿ ಸಿದ್ದಾಪುರ ಗ್ರಾಮದ ಮಹಮದ್‌ಪೀರ್ (44) ಮೃತ ದುರ್ದೈವಿ. ಇತನ ಹೆಂಡತಿ ಉಮೇಸಲ್ಮಾ, ಮತ್ತೊಂದು ಬೈಕ್ ಸವಾರ ಗಾಯಗೊಂಡಿದ್ದು, ಹೆಸರು ತಿಳಿದು ಬಂದಿಲ್ಲ.

ಘಟನೆ ವಿವರ : ಕೆಲಸದ ನಿಮಿತ ತನ್ನ ಪತ್ನಿಯೊಂದಿಗೆ ಮಹಮದ್‌ಪೀರ್ ತನ್ನ ಸ್ವಾಗ್ರಾಮ ಸಿದ್ದಾಪುರದಿಂದ ಕುಣಿಗಲ್ ಪಟ್ಟಣಕ್ಕೆ ಬೈಕ್‌ನಲ್ಲಿ ಬರುತ್ತಿರಬೇಕಾದರೆ ಕುಣಿಗಲ್ ಕಡೆಯಿಂದ ಬಂದ ಮತ್ತೊಂದು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.  ಸಿಪಿಐ ನವೀನ್‌ಗೌಡ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next