Advertisement

ಕುಣಿಗಲ್: ಲಾರಿ ಆಟೋ ನಡುವೆ ಢಿಕ್ಕಿ ; ಮಗು ಮೃತ್ಯು, ನಾಲ್ವರು ಗಂಭೀರ

08:55 PM Jan 14, 2023 | Team Udayavani |

ಕುಣಿಗಲ್ : ಲಾರಿ ಹಾಗೂ ಆಟೋ ನಡುವೆ ಸಂಬವಿಸಿದ ಭೀಕರ ಅಪಘಾತದಲ್ಲಿ ಮಗು ಮೃತಪಟ್ಟು ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ರಾಜ್ಯ ಹೆದ್ದಾರಿ 33 ಟಿ.ಎಂ ರಸ್ತೆ ಗವಿಮಠ ಸಮೀ‌ಪ ಶನಿವಾರ ಸಂಭವಿಸಿದೆ

Advertisement

ಬೆಂಗಳೂರಿನ ಹೆಗ್ಗರೆ ಮೂಲದ ತನ್ವಿಕ(3) ಮೃತಪಟ್ಟ ದುರ್ದೈವಿ ಮಗು. ಐಶ್ವರ್ಯ , ಸರಸ್ವತಿ, ಮುನಿಯಮ್ಮ, ಸೌಮ್ಯ, ಶಿವರಾಜು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ
ಮಕರ ಸಂಕ್ರಾಂತಿ ಹಬ್ಬಕ್ಕೆಂದು ಬೆಂಗಳೂರಿನ ಹೆಗ್ಗರೆಯಿಂದ ಆಟೋ ರಿಕ್ಷಾದಲ್ಲಿ ಕುಣಿಗಲ್ ತಾಲೂಕಿನ ಮೋದೂರು ಗ್ರಾಮಕ್ಕೆ ಬರುತ್ತಿರಬೇಕಾದರೆ, ಮದ್ದೂರು ಕಡೆಯಿಂದ ಬಂದ ಟಿಪ್ಪರ್ ಲಾರಿ ಆಟೋ ಗೆ ಢಿಕ್ಕಿ ಹೊಡೆದ ಪರಿಣಾಮ ಆಟೋ ಪಲ್ಟಿಯಾಗಿದೆ ಎನ್ನಲಾಗಿದ್ದು ಘಟನೆಯಲ್ಲಿ ಐದು ಮಂದಿ ಗಾಯಗೊಂಡಿದ್ದಾರೆ, ತೀವ್ರವಾಗಿ ಗಾಯಗೊಂಡ ತನ್ವಿಕ ಹಾಗೂ ಇತರರನ್ನು ಕುಣಿಗಲ್ ಪಟ್ಟಣದ ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ.

ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next