Advertisement
ಅವರು ರವಿವಾರ ಜೆ.ಎನ್.ಎಸ್. ಕಂಪೆನಿ ಹಾಗೂ ಯುವ ಮೆರಿಡಿಯನ್ ಸಮೂಹ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿ ಗಾಂಧಿ ಮೈದಾನದ ಎದುರು ನಿರ್ಮಾಣಗೊಂಡ “ಯುವ ಮನೀಶ್’ ಹೊಟೇಲನ್ನು ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು.
“ಕೋಸ್ಟಲ್ – ಟೆಂಪಲ್ ಟೂರಿಸಂ’ಗೆ ಅಗಾಧ ಅವಕಾಶವಿರುವ ಕರಾವಳಿ ಜಿಲ್ಲೆಗಳಲ್ಲಿ ಇಂತಹ ಸುಸಜ್ಜಿತ ಹೊಟೇಲ್‌ಗಳ ಆವಶ್ಯಕತೆ ಬಹಳಷ್ಟಿದೆ. ಇದರಿಂದ ಉದ್ಯೋಗ ಸೃಷ್ಟಿ, ಊರಿನ ಅಭಿವೃದ್ಧಿ ಆಗಲಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.
Related Articles
ಶಾಸಕರಾದ ಬಾಲಚಂದ್ರ ಜಾರಕಿ ಹೊಳಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ಶ್ರೀನಿವಾಸ ಶುಭ ಹಾರೈಸಿದರು.
Advertisement
ದುಬಾೖಯ ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ಎಂಡಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಬೆಂಗಳೂರಿನ ರೆಡಿಸ್ಸನ್ ಬ್ಲೂ ಆರ್ಟಿಯಾ ನಿರ್ದೇಶಕ ಕೆ. ನಾಗರಾಜ್, ರಾಜಕೀಯ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಜೆ.ಎನ್.ಎಸ್. ಕಂಪೆನಿಯ ಮನೀಶ್ ಜೆ. ಶೆಟ್ಟಿ, ಯುವ ಮೆರಿಡಿಯನ್ ಸಮೂಹ ಸಂಸ್ಥೆಗಳ ಬೈಲೂರು ವಿನಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಯುವ ಮೆರಿಡಿಯನ್ ಸಮೂಹದ ಆಡಳಿತ ಮುಖ್ಯಸ್ಥ ಬೈಲೂರು ಉದಯಕುಮಾರ್ ಶೆಟ್ಟಿ ಪ್ರಸ್ತಾವನೆಗೈದು, ಜೆ.ಎನ್.ಎಸ್. ಕಂಪೆನಿ ಆಡಳಿತ ಮುಖ್ಯಸ್ಥ ಜಯಶೀಲ ಎನ್. ಶೆಟ್ಟಿ ಸ್ವಾಗತಿಸಿದರು.ಕೆ.ಸಿ. ರಾಜೇಶ್ ನಿರ್ವಹಿಸಿದರು. “ಕರಾವಳಿ – ಬೆಂಗಳೂರು ಕಾರಿಡಾರ್ ರಸ್ತೆ’
ಉಡುಪಿ ಪ್ರವಾಸೋದ್ಯಮಕ್ಕೆ ಯೋಗ್ಯವಾಗಿದೆ. ತೊಡಕುಗಳನ್ನೆಲ್ಲ ನಿವಾರಿಸಿ ಕೊಂಡು ಅಭಿವೃದ್ಧಿಪಡಿಸಲಾಗುವುದು. ಇಲ್ಲಿನ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ಉಡುಪಿ-ಮಂಗಳೂರು- ಬೆಂಗಳೂರು ನಡುವೆ “ಎಕ್ಸ್‌ಪ್ರೆಸ್ ಹೈವೇ’ ರೀತಿಯ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ರೂಪರೇಖೆ ಸಿದ್ಧಪಡಿಸಲಾಗುವುದು ಎಂದು ಅಧ್ಯಕ್ಷತೆ ವಹಿಸಿದ್ದ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಹೇಳಿದರು.