Advertisement

ಕುಂದಾಪುರ ತಾ.ಪಂ.: 2 ವರ್ಷವಾದರೂ ಬಾರದ ಅನುದಾನ

02:19 AM May 01, 2022 | Team Udayavani |

ಕುಂದಾಪುರ: ರಾಜ್ಯದಲ್ಲಿ ಕಾಮಗಾರಿ ಗಳಿಗೆ ಗುತ್ತಿಗೆದಾರರ ಹಣ ಪಾವತಿ ವಿಚಾರ ಚರ್ಚೆಯಲ್ಲಿ ಇರುವಂತೆಯೇ ಕುಂದಾಪುರ ತಾ.ಪಂ. ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳಿಗೆ ಎರಡು ವರ್ಷಗಳಿಂದ ಅನುದಾನ ಬಿಡುಗಡೆ ಯಾಗದ ಸಂಗತಿ ಬೆಳಕಿಗೆ ಬಂದಿದೆ. ಪೂರ್ಣ ಗೊಂಡ 13 ಕಾಮಗಾರಿಗಳ 47.69 ಲಕ್ಷ ರೂ. ಬಿಡುಗಡೆಗಾಗಿ ಕಾಯಲಾಗುತ್ತಿದೆ. ರಾಜ್ಯದ ಉಳಿದೆಲ್ಲ ತಾ.ಪಂ.ಗಳಿಗೆ ಹಣ ಬಂದರೂ ಕುಂದಾಪುರ ಮಾತ್ರ ಯಾಕೆ ಬಾಕಿ ಎನ್ನುವುದು ಸದ್ಯ ಚರ್ಚೆಗೆ ಗ್ರಾಸವಾಗಿದೆ.

Advertisement

15ನೇ ಹಣಕಾಸು ಯೋಜನೆಯಡಿ ಬಿಡುಗಡೆ
15ನೆ ಹಣಕಾಸು ಯೋಜನೆಯಡಿ 2020-21ನೇ ಸಾಲಿನಲ್ಲಿ ಉಡುಪಿ ಜಿಲ್ಲೆಗೆ 8 ಕೋ.ರೂ., ದ.ಕ. ಜಿಲ್ಲೆಗೆ 10 ಕೋ.ರೂ. ಬಿಡುಗಡೆಯಾಗಿದೆ. 2020ರ ಜೂ. 19ರಂದು ಒಂದನೇ ಕಂತಿನ ಅನಿರ್ಬಂಧಿತ ಅನುದಾನ, ಜೂ. 22ರಂದು ಅನಿರ್ಬಂಧಿತ ಅನುದಾನ, 2021ರ ಫೆ. 3ರಂದು ಎರಡನೇ ಕಂತಿನ ಅನಿರ್ಬಂಧಿತ ಅನುದಾನ, 2021ರ ಮಾ. 30ರಂದು ಎರಡನೇ ಕಂತಿನ ನಿರ್ಬಂಧಿತ ಅನುದಾನ ಬಿಡುಗಡೆಯಾಗಿದೆ.

ಬ್ರಹ್ಮಾವರಕ್ಕೆ 1.29 ಕೋ.ರೂ., ಬೈಂದೂರಿಗೆ 1.16 ಕೋ.ರೂ., ಹೆಬ್ರಿಗೆ 38 ಲಕ್ಷ ರೂ., ಕಾಪು 90 ಲಕ್ಷ ರೂ., ಕುಂದಾಪುರ 1.9 ಕೋ.ರೂ., ಕಾರ್ಕಳ 1.3 ಕೋ.ರೂ., ಉಡುಪಿ 1 ಕೋ.ರೂ. ಎಂದು ಒಟ್ಟು 8 ಕೋ.ರೂ.; ಬಂಟ್ವಾಳಕ್ಕೆ 2.7 ಕೋ.ರೂ., ಬೆಳ್ತಂಗಡಿಗೆ 2.2 ಕೋ.ರೂ., ಮಂಗಳೂರಿಗೆ 2.3 ಕೋ.ರೂ., ಮೂಡುಬಿದಿರೆಗೆ 63 ಲಕ್ಷ ರೂ., ಕಡಬಕ್ಕೆ 1 ಕೋ.ರೂ., ಪುತ್ತೂರಿಗೆ 1.1 ಕೋ.ರೂ., ಸುಳ್ಯಕ್ಕೆ 90 ಲಕ್ಷ ರೂ. ಎಂದು ಒಟ್ಟು 10.9 ಕೋ.ರೂ. ಬಿಡುಗಡೆಯಾಗಿದೆ.

ಕುಂದಾಪುರಕ್ಕೆ ಬಾಕಿ
ಕುಂದಾಪುರದ ಹೊರತು ರಾಜ್ಯದ ಎಲ್ಲ ತಾ.ಪಂ.ಗಳ ಖಾತೆಗೆ ಹಣ ಜಮೆಯಾಗಿದೆ.ತಾ.ಪಂ. ಇತ್ತೀಚೆಗೆ ತರಿಸಿಕೊಂಡಿದೆ. 15ನೇ ಹಣ ಕಾಸು ಆಯೋಗದ ಅನುದಾನದಡಿ 1.9 ಕೋ.ರೂ. ನಿಗದಿಯಾಗಿದೆ. ಮೊದಲ ಕಂತಿನ ಅನುದಾನ 47.69 ಲಕ್ಷ ರೂ. 2020ರ ಆ. 29ರಂದು ಬಿಡುಗಡೆ ಯಾಗಿದೆ. ಎರಡನೇ ಕಂತು 47.69 ಲಕ್ಷ ರೂ. ತಾ.ಪಂ. ಖಾತೆಗೆ ಜಮೆಯಾಗಲು ಬಾಕಿಯಾದ ಕುರಿತು ತಾ.ಪಂ.ನಿಂದ ಪಂ.ರಾಜ್‌ ಇಲಾಖೆ ನಿರ್ದೇ ಶಕರಿಗೆ, ಸರಕಾರದ ಅಧೀನ ಕಾರ್ಯದರ್ಶಿಗಳಿಗೆ ಪತ್ರ ವನ್ನೂ ಬರೆಯಲಾಗಿದೆ ಎನ್ನಲಾಗಿದೆ. ಆದರೂ ಹಣ ಬಂದಿಲ್ಲ. ಗುತ್ತಿಗೆದಾರರು ಆತಂಕಗೊಂಡಿದ್ದಾರೆ. ಅನುದಾನ ಬಾರದಿರುವ ಬಗ್ಗೆ ತಾಲೂಕು ಪಂಚಾಯತ್‌ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪೂರ್ಣಗೊಂಡ ಕಾಮಗಾರಿ
ಕಾಳಾವರ, ಕಂದಾವರ, ಆನಗಳ್ಳಿ, ಬೀಜಾಡಿ, ಗೋಪಾಡಿ, ಹೆಂಗವಳ್ಳಿ, ಅಮಾಸೆಬೈಲು, ಇಡೂರು ಕುಂಜ್ಞಾಡಿ, ಆಲೂರು, ಗುಜ್ಜಾಡಿ, ಹೊಂಬಾಡಿ ಮಂಡಾಡಿ, ಸಿದ್ದಾಪುರ, ಬಸ್ರೂರು, ತಲ್ಲೂರು, ಹಟ್ಟಿಯಂಗಡಿ, ಗಂಗೊಳ್ಳಿ, ಆಜ್ರಿ, ಗುಲ್ವಾಡಿ, ಆಜ್ರಿ, ಕರ್ಕುಂಜೆ, ಬಸ್ರೂರು, ವಂಡ್ಸೆ ಗ್ರಾ.ಪಂ. ವ್ಯಾಪ್ತಿಯಲ್ಲಿ ರಸ್ತೆ, ಸೇತುವೆ, ಕುಡಿಯುವ ನೀರು, ಕಟ್ಟಡ ನಿರ್ಮಾಣ, ಕಾಲುಸಂಕ, ಸೋಲಾರ್‌ ದೀಪ, ಶೌಚಾಲಯ ಮೊದಲಾದ ಕಾಮಗಾರಿ ಪೂರ್ಣವಾಗಿದ್ದು, ಅನುದಾನ ಇನ್ನೂ ಬಂದಿಲ್ಲ. 23 ಕಾಮಗಾರಿಗಳಲ್ಲಿ 10 ಕಾಮಗಾರಿಗಳಿಗೆ ಗುತ್ತಿಗೆದಾರರಿಗೆ ಹಣ ಪಾವತಿಗೆ ಬಾಕಿ ಇದ್ದು, 13 ಕಾಮಗಾರಿಗಳು ನಿರ್ಮಾಣ ಹಂತದಲ್ಲಿವೆ.

Advertisement

ಅನುದಾನ ಬಾಕಿ ವಿಚಾರ ಈಗಷ್ಟೇ ಗಮನಕ್ಕೆ ಬಂದಿದ್ದು, ತತ್‌ಕ್ಷಣ ಮೇಲಧಿಕಾರಿಗಳ ಗಮನಕ್ಕೆ ತಂದು ಬಿಡುಗಡೆಗೆ ವ್ಯವಸ್ಥೆ ಮಾಡುತ್ತೇವೆ. ಬ್ಯಾಂಕ್‌ ತಾಂತ್ರಿಕ ಕಾರಣದಿಂದ ತಾ.ಪಂ. ಖಾತೆಗೆ ಹಣ ಜಮೆಯಾಗಿಲ್ಲ ಎಂದು ಪ್ರ
ಸಿಇಒ, ಉಡುಪಿ ಜಿ.ಪಂ.

-ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next