Advertisement

ಕುಂದಾಪುರ ಉಪ ವಿಭಾಗ : ಶತ ಪ್ರತಿಶತಕ್ಕಿಂತ ಹೆಚ್ಚು ಗುರಿ ಸಾಧನೆ, ಇಲಾಖೆಯಿಂದ ಮೆಚ್ಚುಗೆ

12:00 AM May 06, 2022 | Team Udayavani |

ಉಡುಪಿ : ಕುಂದಾಪುರ ಉಪ ವಿಭಾಗವು 2021ರ ನವಂಬರ್‌ನಿಂದ 2022ರ ಮಾರ್ಚ್‌ವರೆಗೆ ನ್ಯಾಯಾಲಯದ ವಿವಾದಾಸ್ಪದ ಪ್ರಕರಣಗಳ ವಿಲೇವಾರಿಯಲ್ಲಿ ಶತ ಪ್ರತಿಶತಕ್ಕಿಂತ ಹೆಚ್ಚು ಗುರಿ ಸಾಧನೆ ಮಾಡಿದೆ. ಕುಂದಾಪುರ ಉಪವಿಭಾಗದ ಈ ವಿಶೇಷ ಸಾಧನೆಗಾಗಿ ಉಪ ವಿಭಾಗಾಧಿಕಾರಿ ಕೆ. ರಾಜು ಮತ್ತು ಕಚೇರಿ ಅಧಿಕಾರಿ, ಸಿಬಂದಿ ವರ್ಗಕ್ಕೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಶ್ಲಾಘನೆ ವ್ಯಕ್ತಪಡಿಸಿ ಅಭಿನಂದನ ಪತ್ರ ಕಳುಹಿಸಿದ್ದಾರೆ.

Advertisement

ಕುಂದಾಪುರ ಎಸಿ ಕೋರ್ಟ್‌ನಲ್ಲಿ ಪಹಣಿ ತಿದ್ದುಪಡಿ, ಖಾತಾ ಬದಲಾವಣೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತಾದ ಕರ್ನಾಟಕ ಭೂ ಕಂದಾಯ 1964ರ ಕಲಂ 49 ಮತ್ತು 136/2ರಂತೆ ಮೇಲ್ಮನವಿ ಸಲ್ಲಿಸಿದ ಪ್ರಕರಣಗಳಲ್ಲಿ 1,953 ಹಳೆ ಪ್ರಕರಣಗಳು ಬಾಕಿ ಇವೆ. ಎಪ್ರಿಲ್‌ನಲ್ಲಿ 215 ಅರ್ಜಿಗಳು ಸ್ವೀಕಾರವಾಗಿದ್ದು, ಒಟ್ಟು 2,168 ಪ್ರಕರಣಗಳಾಗಿವೆ.

ಮಾರ್ಚ್‌ನಲ್ಲಿ 200, ಎಪ್ರಿಲ್‌ನಲ್ಲಿ 200 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 1,968 ಅರ್ಜಿಗಳು ವಿಲೇಗೆ ಬಾಕಿ ಇವೆ. ಎಸಿ ಕೋರ್ಟ್‌ ಅರ್ಜಿ ವಿಲೇಗೆ ಕಂದಾಯ ಇಲಾಖೆ ತಿಂಗಳಿಗೆ 100 ಅರ್ಜಿಗಳನ್ನು ವಿಲೇ ಮಾಡಲು ಗುರಿ ನೀಡಿದ್ದು, ರಾಜ್ಯದಲ್ಲಿಯೇ ಉಡುಪಿ ಜಿಲ್ಲೆಯ ಕುಂದಾಪುರ ಉಪ ವಿಭಾಗವು ಗರಿಷ್ಠ ಅರ್ಜಿಗಳನ್ನು ವಿಲೇವಾರಿ ಮಾಡಿದೆ.

ಇತರ ಜಿಲ್ಲೆಗಳಲ್ಲಿ 2 ಉಪ ವಿಭಾಗ ಕಚೇರಿಗಳಿದ್ದರೂ ಗರಿಷ್ಠ ಪ್ರಮಾಣದಲ್ಲಿ ಅರ್ಜಿ ವಿಲೇ ಮಾಡಲು ಸಾಧ್ಯವಾಗಿಲ್ಲ. ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಉಪ ವಿಭಾಗ ಒಂದೆ ಇದ್ದರೂ ಉತ್ತಮ ಸಾಧನೆ ತೋರಿದ್ದಕ್ಕೆ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next