Advertisement
ಕಡಲ ಅಲೆಗಳ ಅಬ್ಬರ ಭಾರೀ ಪ್ರಮಾಣದಲ್ಲಿ ಇರುವುದರಿಂದ ಬೋಟು, ದೋಣಿಗಳನ್ನು ಸಮುದ್ರಕ್ಕೆ ಇಳಿಸಿ, ಹುಡುಕಾಟ ನಡೆಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಗಾಳಿಯ ತೀವ್ರತೆ ಭಾರೀ ಪ್ರಮಾಣದಲ್ಲಿ ಇರುವುದರಿಂದ ಬೋಟುಗಳಲ್ಲಿ ಕಾರ್ಯಾಚರಣೆ ನಡೆಸುವುದು ಅಪಾಯಕಾರಿಯೆನಿಸಿದೆ.
ಹುಡುಗನ ಬಗ್ಗೆ ಸುಳಿವು ಸಿಕ್ಕಲ್ಲಿ ತಿಳಿಸಲು ಸ್ಥಳೀಯ ನಿವಾಸಿಗರಿಗೆ ಸೂಚಿಸಲಾಗಿದೆ. ಸಣ್ಣ ದೋಣಿ ಮೂಲಕ ಗಂಗೊಳ್ಳಿಯಿಂದ ಕೋಡಿ, ಬೀಜಾಡಿಯವರೆಗೆ ಹುಡುಕಾಟ ನಡೆಸಲಾಗಿದೆ. ತ್ರಾಸಿಯಲ್ಲಿ ಸ್ಥಳೀಯ ಮೀನುಗಾರರು ಮೃತದೇಹವೊಂದನ್ನು ನೋಡಿದ್ದಾಗಿ ತಿಳಿಸಿದ್ದು, ಅಲ್ಲಿಗೆ ಬೋಟು ಮೂಲಕ ತೆರಳಿ ಹುಡುಕುವ ಪ್ರಯತ್ನ ನಡೆಸಿದರೂ, ಮತ್ತೆ ಆ ಮೃತದೇಹ ಸಿಕ್ಕಿಲ್ಲ. ರವಿವಾರ ಕುಂದಾಪುರದ ಅಗ್ನಿಶಾಮಕ ದಳದಿಂದ ಹುಡುಕಾಟದ ಪ್ರಯತ್ನ ನಡೆಯಿತು. ಸೋಮವಾರ ಕುಂದಾಪುರ ಪೊಲೀಸರ ತಂಡವು ಭಟ್ಕಳಕ್ಕೆ ತೆರಳಿ ಅಲ್ಲಿ ಹುಡುಕಾಟ ನಡೆಸಿತು.