Advertisement
ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಕುಂದಾಪುರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೂರು ನೀಡಿದ್ದು, ಸೊಸೈಟಿ ಪಡುಕೋಣೆ ಶಾಖೆಯಲ್ಲಿ ಶ್ರೀರಾಮ ಅವರು ಸಂಜೀವ, ಗುರುಪ್ರಸಾದ್, ಕಿರಣ್, ರಾಘವೇಂದ್ರ ಅವರ ಜಾಮೀನಿನ ಆಧಾರದಲ್ಲಿ 12 ಲಕ್ಷ ರೂ. ಸಾಲ ಪಡೆದಿದ್ದಾರೆ. ಸಾಲಕ್ಕೆ ಶ್ರೀರಾಮ ಅವರ ಹಕ್ಕಿನ ಆಸ್ತಿಯನ್ನು ಅಡವು ಮಾಡಿದ್ದರು.
ಸಾಲ ವಸೂಲಾತಿಯ ಜವಾಬ್ದಾರಿ ಯಿಂದ ತಪ್ಪಿಸಿಕೊಳ್ಳಲು ಶ್ರೀರಾಮ್ ಆರೋಪಿಗಳಾದ ರಾಮಕೃಷ್ಣ, ರತ್ನಾಕರ, ಜಗನ್ನಾಥ, ಗಿರೀಶ ಅವರೊಂದಿಗೆ ಶಾಮೀಲಾಗಿ ರೋಜರಿ ಸೊಸೈಟಿಯ ನಕಲಿ ಸೀಲ್ ತಯಾರಿಸಿ ಸಾಲ ಸಂಪೂರ್ಣ ಪಾವತಿಯಾಗಿದೆ ಎಂದು ತೋರಿಸಿ ನಕಲಿ ಚುಕ್ತಾ ರಶೀದಿ ಮಾಡಿದ್ದರು. ನೋಂದಣಿ ಮಾಡಿದ್ದರು
ಕುಂದಾಪುರ ಉಪ ನೋಂದಣಾಧಿಕಾರಿ ಕಚೆೇರಿಯಲ್ಲಿ ಸಾಲದ ರಶೀದಿ ನೋಂದಾಯಿಸಿ ಜಾಗವನ್ನು ಆರೋಪಿ ನಾಗರಾಜ ಅವರಿಗೆ ಕ್ರಯಪತ್ರ ಮಾಡಿ, ಕ್ರಯಪತ್ರವನ್ನು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿದ್ದರು.
Related Articles
Advertisement