ಕುಂದಾಪುರ: ಕೋಡಿ ಸಮುದ್ರ ಕಿನಾರೆಯಲ್ಲಿ ಶನಿವಾರ ಮಧ್ಯರಾತ್ರಿ ಮೊಟ್ಟೆಯಿಂದ ಹೊರಬಂದ ಕಡಲಾಮೆಯ ಮರಿಗಳು ಸುರಕ್ಷಿತವಾಗಿ ಕಡಲು ಸೇರಿದವು.
ಕೋಡಿ ಬೀಚ್‌ನಲ್ಲಿ ಅಪರೂಪದ ಆಲೀವ್ ರಿಡ್ಲೆ ಪ್ರಭೇದದ ಕಡಲಾಮೆಗಳು 10 ಕಡೆಗಳಲ್ಲಿ ಮೊಟ್ಟೆ ಇಟ್ಟಿದ್ದವು. 8ನೇ ಗೂಡಿ
ನಿಂದ ಸುಮಾರು 2 ಮರಿಗಳು ಹೊರ ಬಂದಿದ್ದು ಸಮುದ್ರ ಸೇರಿವೆ. ಎಫ್ಎಸ್‌ಎಲ್ ಇಂಡಿಯಾ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ರೀಫ್ ವಾಚ್ ಸಂಸ್ಥೆ, ಅರಣ್ಯ ಇಲಾಖೆ ಕಳೆದ 9 ದಿನಗಳಿಂದ ಹಗಲು ರಾತ್ರಿ ಪಾಳಿಯಲ್ಲಿ ಇವುಗಳ ಕಾವಲು ಕಾಯುತ್ತಿತ್ತು.
ಶನಿವಾರ ರಾತ್ರಿ ಗೂಡುಗಳಿಂದ ಮರಿ ಗಳು ಹೊರಬರುತ್ತಿರುವುದನ್ನು ಗಮನಿಸಿ ಡಿಸಿಎಫ್ ಆಶಿಶ್ ರೆಡ್ಡಿ, ಎಸಿಎಫ್ ಲೋಹಿತ್, ಆರ್‌ಎಫ್ಒ ಪ್ರಭಾಕರ ಕುಲಾಲ್, ಹಸ್ತಾ ಶೆಟ್ಟಿ, ರಂಜಿತ್ ಪೂಜಾರಿ, ಎಫ್ಎಸ್‌ಎಲ್ ಇಂಡಿಯಾದ ದಿನೇಶ್ ಸಾರಂಗ, ವೆಂಕಟೇಶ ಶೇರುಗಾರ್, ನಾಗರಾಜ ಶೆಟ್ಟಿ, ಲಕ್ಷ್ಮಣ ಪೂಜಾರಿ, ಉದಯ ಖಾರ್ವಿ, ಎಂಪ್ರಿ ಸಿಆರ್‌ಝೆಡ್ ಸಿಬಂದಿ ಸಚಿನ್ ಪೂಜಾರಿ, ರಘು ಬಂಗೇರ, ಭರತ್ ಖಾರ್ವಿ, ಸಂಪತ್, ಸಂತೋಷ್ ಮೆಂಡನ್, ಎಫ್ಎಸ್‌ಎಲ್‌ನ ಎಚ್. ಜನಾರ್ದನ್ ಅವರು ಆಮೆಗಳು ಸುರಕ್ಷಿತವಾಗಿ ಕಡಲು ಸೇರಲು ಅನುವು ಮಾಡಿಕೊಟ್ಟರು. ಮಧ್ಯ ರಾತ್ರಿಯ ವರೆಗೂ ಕಾರ್ಯಾಚರಣೆ ನಡೆಯಿತು.
ಕಡಲಾಮೆ ಮೊಟ್ಟೆಗಳನ್ನು ಸಂರಕ್ಷಿಸಿದ 4 ಗೂಡುಗಳಿದ್ದು ಅವುಗಳಿಂದ ಇನ್ನೂ ಮರಿಗಳು ಹೊರಬಂದಿಲ್ಲ. ಅವುಗಳ ರಕ್ಷಣೆಯನ್ನು ಸಾಮೂಹಿಕವಾಗಿ ನಡೆಸಲಾಗುತ್ತಿದೆ ಎಂದು ಎಫ್ಎಸ್‌ಎಲ್ ಇಂಡಿಯಾದ ದಿನೇಶ್ ಸಾರಂಗ ತಿಳಿಸಿದ್ದಾರೆ.