ಕುಂದಾಪುರ: ಕರ್ಕುಂಜೆ ಗ್ರಾಮದ ನೇರಳಕಟ್ಟೆ ಜಂಕ್ಷನ್‌ಬಳಿ ಬೈಕ್‌ನ್ನು ಓವರ್‌ಟೇಕ್ ಮಾಡುವ ಭರಾಟೆಯಲ್ಲಿ ಕಾರೊಂದು ವಿಕಲಚೇತನ ಸವಾರನ ವಾಹನಕ್ಕೆ ಢಿಕ್ಕಿಯಾಗಿದೆ.
ಪ್ರಭಾಕರ್ ಆಚಾರ್ (42) ಚೂರಿಕೋಡ್ಲಿ ಅವರು ಮೂರು ಚಕ್ರದ ಸ್ಕೂಟರ್‌ನಲ್ಲಿ ಪತ್ನಿ ಸುಲೋಚನಾ, ಪುತ್ರ ಪ್ರಜ್ವಲ್(14), ಪೂಜಾ (10) ಅವರನ್ನು ಕುಳ್ಳಿರಿಸಿಕೊಂಡು ಆಜ್ರಿ ಕಡೆಯಿಂದ ನೇರಳಕಟ್ಟೆ ಕಡೆಗೆ ಹೋಗುತ್ತಿದ್ದಾಗ ಅಪಘಾತವಾಗಿದೆ.
ಎಲ್ಲರೂ ಗಾಯಗೊಂಡಿದ್ದು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಗಂಭೀರ ಗಾಯಗೊಂಡ ಪ್ರಭಾಕರ್ ಆಚಾರ್, ಪ್ರಜ್ವಲ್ ಹಾಗೂ ಪೂಜಾ ಅವರು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅಲ್ಲಿಂದ ಮಂಗಳೂರು ವೆನ್‌ಲಾಕ್‌ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗೋವಾ ಕಡಲ ತೀರದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆ ನಿಲ್ಲಿಸಿ: ಮೈಕಲ್ ಲೋಬೊ