Advertisement
ಇಲ್ಲಿನ ದೇವಾಲಯಗಳು ಹಾಗೂ ಕಲಾಸಕ್ತರ ಮನೆಗಳಿಗೆ ಬಂದು ಹರಸುವ ಬಾಲಕರಿಂದ ನಡೆಯುವ ಹೂವಿನ ಕೋಲು ಎನ್ನುವ ಯಕ್ಷಗಾನ ಪರಂಪರೆಯ ಕಲಾಪ್ರಕಾರ ಉಳಿಸುವಲ್ಲಿ ಯಶಸ್ವಿ ಕಲಾವೃಂದ ತೆಕ್ಕಟ್ಟೆಯವರ ಕೊಡುಗೆಯೂ ಇದೆ.
Related Articles
Advertisement
ಚೆಂಡೆ ಇಲ್ಲ ಸಮವಸ್ತ್ರ ಧರಿಸಿರುವ ಬಾಲಕರು ತಲೆಗೆ ಬಿಳಿಯ ಟೋಪಿ ಧರಿಸುವುದು ಸಾಂಪ್ರದಾಯಿಕ ಕ್ರಮ. ಎದುರಲ್ಲಿ ಇಡುವ ಹೂವಿನ ಕೋಲುಗಳು ಆಕರ್ಷಕ.
ಹೂವಿನ ಕೋಲುಗಳನ್ನು ಹಿಡಿದುಕೊಂಡ ಬಾಲಕರು 2 ಪಾತ್ರಗಳ ಅರ್ಥಗಳನ್ನು ಹೇಳಿದರೆ, ಭಾಗವತರು ಪದ್ಯಗಳನ್ನು ಹೇಳುತ್ತಾರೆ. ಮದ್ದಳೆಗಾರರು ಹಿಮ್ಮೇಳದಲ್ಲಿ ಸಾಥ್ ನೀಡುತ್ತಾರೆ. ಯಕ್ಷಗಾನದಲ್ಲಿ ಬಳಕೆಯಿರುವ ಚೆಂಡೆಯನ್ನು ಹಿಂದಿನಿಂದಲೂ ಹೂವಿನಕೋಲಿನಲ್ಲಿ ಬಳಸುವ ಕ್ರಮ ಇಲ್ಲ. ಪೌರಾಣಿಕ ಯಕ್ಷಗಾನ ಪ್ರಸಂಗಳ ಅರ್ಥಗಳನ್ನು ಮಾತ್ರ ಹೇಳಲಾಗುತ್ತದೆ.
ಯಾರೆಲ್ಲ ಕುಂದಾಪುರದ ಕುಂದೇಶ್ವರ ದೇವಾಲಯದಲ್ಲಿ ನಡೆದ ಹೂವಿನ ಕೋಲು ಪ್ರದರ್ಶನದಲ್ಲಿ ಸುಧನ್ವ ಅರ್ಜುನ ಪ್ರಸಂಗವನ್ನು ಪ್ರಸ್ತುತಪಡಿಸಲಾಯಿತು. ಭಾಗವತಿಕೆಯಲ್ಲಿ ಪೂಜಾ ಆಚಾರ್, ಮದ್ದಳೆಯಲ್ಲಿ ದೇವದಾಸ ರಾವ್ ಕೂಡ್ಲಿ, ಅರ್ಥದಲ್ಲಿ ಪವನ್ ಆಚಾರ್ ಕುಂದಾಪುರ, ಕಿಶನ್ ಕುಂದಾಪುರ ಭಾಗವಹಿಸಿದ್ದರು. ಇವರಿಗೆ ದೇವಾ ಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಸದಸ್ಯ ಸತೀಶ್ ಶೆಟ್ಟಿ ಗೌರವಾರ್ಪಣೆ ಮಾಡಿದರು.
ತಂಡಗಳು ಕಾಳಿಂಗ ನಾವಡರು, ಅವರ ತಂದೆ ರಾಮಚಂದ್ರ ನಾವಡರೇ ಮೊದಲಾದವರು, ವೃತ್ತಿ ಮೇಳಗಳ ಹಲವು ಭಾಗವತರು ಹೂವಿನಕೋಲಿನ ತಂಡಗಳನ್ನು ಕಟ್ಟಿ ನವರಾತ್ರಿಯ 9 ದಿನಗಳ ತಿರುಗಾಟ ನಡೆಸುತ್ತಿದ್ದರು. ಮನೆ ಮನೆಗೆ ತೆರಳಿ ಪ್ರದರ್ಶನಗಳನ್ನು ನೀಡುತ್ತಿದ್ದರು. ಭಾಗವತರು ಪ್ರದರ್ಶನಕ್ಕೆ ಬೇಕಾಗಿ ಅರ್ಥವನ್ನು ಬರೆದು ಮಕ್ಕಳಿಗೆ ತರಬೇತಿ ನೀಡುತ್ತಿದ್ದರು. ಆ ಅರ್ಥವನ್ನು ಬಾಯಿಪಾಠಮಾಡಿಕೊಂಡ ಮಕ್ಕಳು ಪ್ರದರ್ಶನದ ವೇಳೆ ನಿರರ್ಗಳವಾಗಿ ಪ್ರಸ್ತುತ ಪಡಿಸುತ್ತಿದ್ದರು. ಬಾಲಕರು ಪ್ರದರ್ಶನದ ಮುನ್ನ ಸುಶ್ರಾವ್ಯವಾಗಿ ಹಾಡುವ ಹಾಡು ಹೂವಿನ ಕೋಲಿನ ತಂಡದ ವಿಶೇಷ. ಅಂತಹ ಬಾಲಕಲಾವಿದರೇ ಮುಂದಿನ ದಿನಗಳಲ್ಲಿ ಮಹಾನ್ ಕಲಾವಿದರಾದ ಉದಾಹರಣೆಗಳಿವೆ.
ಕಲಾಪ್ರಕಾರ ಉಳಿಯಲು: ಹೂವಿನ ಕೋಲು ಕಲಾಪ್ರಕಾರ ಮುಂದಿನ ದಿನಕ್ಕೂ ಉಳಿಯಲು ಕಲಾವಿದರ ತಂಡಗಳನ್ನೇ ಸಿದ್ಧಗೊಳಿಸುವ ಕೆಲಸ ಯಶಸ್ವಿ ಸಂಸ್ಥೆಯಿಂದ ನಡೆಯುತ್ತಿದೆ. ಈ ಬಾರಿ 5 ತಂಡಗಳನ್ನು ರಚಿಸಲಾಗಿದೆ. ದ.ಕ., ಉಡುಪಿ ಜಿಲ್ಲೆಯಲ್ಲಿ ಆಹ್ವಾನದ ಮೇರೆಗೆ ಪ್ರದರ್ಶನ ನೀಡಲಾಗುತ್ತಿದೆ. ನವರಾತ್ರಿ ಸಂದರ್ಭದಲ್ಲಷ್ಟೇ ಇದು ಆಚರಣೆಯಲ್ಲಿದೆ.- ವೆಂಕಟೇಶ ವೈದ್ಯ, ಯಶಸ್ವಿ ಕಲಾವೃಂದ, ತೆಕ್ಕಟ್ಟೆ