Advertisement

Kundapura ಗೂಡ್ಸ್‌ ವಾಹನ ಢಿಕ್ಕಿ: ವೃದ್ಧೆ ಸಾವು

12:10 AM Jan 10, 2024 | Team Udayavani |

ಕುಂದಾಪುರ: ಬೀಜಾಡಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್‌ ರಸ್ತೆ ಯಲ್ಲಿ ಗೂಡ್ಸ್‌ ವಾಹನ ಢಿಕ್ಕಿಯಾಗಿ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.

Advertisement

ಗೋಪಾಡಿ ನಿವಾಸಿ ಕಮಲಾ (81) ಅವರು ಸರ್ವಿಸ್‌ ರಸ್ತೆ ದಾಟುತ್ತಿದ್ದಾಗ ಮಹಮದ್‌ ಫಹೀದ್‌ ಅವರು ಗೂಡ್ಸ್‌ ವಾಹನ ಒಮ್ಮೆಲೆ ಹಿಂದಕ್ಕೆ ಚಲಾಯಿಸಿ ಢಿಕ್ಕಿ ಹೊಡೆದ ಪರಿಣಾಮ ಗೂಡ್ಸ್‌ ವಾಹನದ ಹಿಂದಿನ ಚಕ್ರ ಹೊಟ್ಟೆಯ ಮೇಲೆ ಹತ್ತಿದೆ.

ಚಿಕಿತ್ಸೆಗೆ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next