Advertisement

Kundapura; ಚಿನ್ನದ ಸರ ಸುಲಿಗೆ: ಇಬ್ಬರ ಬಂಧನ

12:25 AM Mar 12, 2024 | Team Udayavani |

ಕುಂದಾಪುರ: ದ್ವಿಚಕ್ರ ವಾಹನದಲ್ಲಿ ಬಂದು ನೀರು ಕೇಳಿ ಮಹಿಳೆಯ ಚಿನ್ನದ ಸರ ಅಪಹರಿಸಿದ ಇಬ್ಬರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Advertisement

ಮಾ. 5ರಂದು ಕರ್ಕುಂಜೆ ಗ್ರಾಮದ ನೇರಳಕಟ್ಟೆಯ ಗುಡ್ರಿಯಲ್ಲಿ ಅಪರಿ ಚಿತರು 75 ವರ್ಷ ಪ್ರಾಯದ ಬಾಬಿ ದಾಸ್‌ ಬಳಿ ನೀರು ಕೇಳುವ ನೆಪದಲ್ಲಿ ಮಾತನಾಡಿಸಿ 8 ಗ್ರಾಂ ತೂಕದ ಚಿನ್ನದ ಸರ ಎಳೆದೊಯ್ದಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಲುºರಗಿ ಅಫಜಲ್‌ಪುರ ಹಾಗರಗಿ ಮೂಲದ ಪ್ರಸ್ತುತ ಬೆಂಗ ಳೂರಿನ ನಿವಾಸಿ ವಿಜಯ ಕುಮಾರ್‌ (23), ಕುಂದಾಪುರ ನೇರಳಕಟ್ಟೆ ಹಿಲ್ಕೋ ಡು ಮೂಲದ ಮನೋಜ್‌ (27) ಬಂಧಿತರು.

ಮಾ. 11 ರಂದು ಬೆಳಗ್ಗೆ ನೇರಳ ಕಟ್ಟೆ ಬಳಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಸುಲಿಗೆ ಮಾಡಿದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 1,50,000 ರೂ. ಎಂದು ಅಂದಾಜಿಸಲಾಗಿದೆ.

ಕುಂದಾಪುರ ವೃ.ನಿ. ಜಯರಾಮ ಡಿ. ಗೌಡ ನೇತೃತ್ವದಲ್ಲಿ ಗ್ರಾಮಾಂತರ ಠಾಣೆ ಪಿಎಸ್‌ಐಗಳಾದ ಭೀಮಾಶಂಕರ್‌, ನೂತನ್‌ ಡಿ.ಈ. ಶಂಕರನಾರಾಯಣ ಠಾಣೆ ಪಿಎಸ್‌ಐ ಶಂಭುಲಿಂಗ ಮತ್ತು ಕುಂದಾಪುರ ಉಪವಿಭಾಗದ ಅಧಿಕಾರಿ ಹಾಗೂ ಸಿಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಕುಂದಾ ಪುರ ಉ.ವಿ. ಠಾಣೆಯ ಎಎಸ್‌ಐ ಸೀತಾರಾಮ ಮತ್ತಿತರರು ಸಹಕರಿಸಿದರು.

Advertisement

ಗಾಂಜಾ: ಇಬ್ಬರ ಬಂಧನ
ಕುಂದಾಪುರ: ವಡೇರಹೋಬಳಿ ಗ್ರಾಮದ ವಿನಾಯಕ ಜಂಕ್ಷನ್‌ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಅಬ್ದುಲ್‌ ರೆಹಮಾನ್‌ (24), ಜಾಫರ್‌ ಸಾದಿಕ್‌ (38) ಅವರನ್ನು ವಶಕ್ಕೆ ಪಡೆದು ಪರೀಕ್ಷಿಸಿದ ವೇಳೆ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಪ್ರಕರಣ ದಾಖಲಾಗಿದೆ.

ಹಲ್ಲೆ, ನಿಂದನೆ: ದೂರು
ಕುಂದಾಪುರ: ಕೋಟೇಶ್ವರದ ಕುಂಬ್ರಿ ಸರ್ಕಲ್‌ನಲ್ಲಿ ವಿದ್ಯುತ್‌ ದಾರಿ ದೀಪದ ಬಳಿ ಶ್ರೇಯಸ್‌, ಪ್ರತೀಕ್‌, ನವೀನ್‌, ಸುನೀಲ್‌, ಚೇತನ್‌ ತನ್ನ ಬೈಕ್‌ ತಡೆದು ನಿಲ್ಲಿಸಿ, ಹಲ್ಲೆಗೈದು, ನಿಂದಿಸಿರುವುದಾಗಿ ಹಳೆ ಅಳಿವೆಯ ಸಂದೀಪ್‌ ದೂರು ನೀಡಿದ್ದಾರೆ.

ಗಾಯಗೊಂಡ ಸಂದೀಪ್‌ ಅವರನ್ನು ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next