Advertisement

Kundapura:ಕಾಲು ಸಂಕ: ಪೂರ್ಣಗೊಂಡದ್ದು ಒಂದೇ; 21 ಬಾಕಿ

03:03 PM Feb 06, 2024 | Team Udayavani |

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶದ ಅಪಾಯಕಾರಿ ಸ್ಥಳಗಳಲ್ಲಿ ಹೊಸದಾದ ಸುಸಜ್ಜಿತ ಕಾಲು ಸಂಕಗಳನ್ನು ನಿರ್ಮಿಸಲು ರೂಪಿಸಿದ ಯೋಜನೆ ಹಳ್ಳ ಹಿಡಿದಿದೆ. 5 ಕೋ.ರೂ. ವೆಚ್ಚದಲ್ಲಿ 22 ಕಾಲು ಸಂಕಗಳ ನಿರ್ಮಾಣ ಯೋಜನೆ ಸಿದ್ಧಪಡಿಲಾಗಿದ್ದು, ಈ ಪೈಕಿ ಈವರೆಗೆ ಆಗಿದ್ದು ಕೇವಲ ಒಂದು ಕಾಲು ಸಂಕ ಮಾತ್ರ.

Advertisement

ಕಾಲ್ತೋಡು ಗ್ರಾಮದ ಬೋಳಂಬಳ್ಳಿ ಸಮೀಪದ ಬೀಜಮಕ್ಕಿ ಎಂಬಲ್ಲಿ 2022ರ ಆ. 8 ರಂದು ಶಾಲೆಯಿಂದ ಮನೆಗೆ ಬರುತ್ತಿದ್ದ ಪುಟ್ಟ ಹೆಣ್ಣು ಮಗುವೊಂದು ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ ದುರ್ಘ‌ಟನೆ ಸಂಭವಿಸಿತ್ತು. ಈ ಘಟನೆಯಿಂದ ಎಚ್ಚೆತ್ತುಕೊಂಡು, ಈ ರೀತಿ ಹೊಳೆ ದಾಟಲು ಅಪಾಯಕಾರಿಯಾಗಿರುವ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ಸುಸಜ್ಜಿತ ಕಾಲು ಸಂಕ ನಿರ್ಮಿಸಲು ಪಶ್ಚಿಮ ಘಟ್ಟದ ಹಾಮ್‌ಲೆಟ್‌ ಪ್ರದೇಶಗಳಲ್ಲಿ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ರೂಪಿಸಿತು.

5 ಕೋ.ರೂ. ಅನುದಾನ ಅದರಂತೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಆಗ ಶಾಸಕರಾಗಿದ್ದ ಬಿ.ಎಂ. ಸುಕುಮಾರ್‌ ಶೆಟ್ಟರ
ಪ್ರಯತ್ನದಿಂದ ಲೋಕೋಪಯೋಗಿ ಇಲಾಖೆಯಡಿ ಪ್ರಮುಖ ಜಿಲ್ಲಾ ರಸ್ತೆ- ಸೇತುವೆ  ಹೆಸರಲ್ಲಿ 5 ಕೋ. ರೂ. ವೆಚ್ಚದಲ್ಲಿ 7 ಪ್ಯಾಕೇಜ್‌ನಲ್ಲಿ ಒಟ್ಟು 22 ಕಾಲು ಸಂಕ ನಿರ್ಮಿಸುವ ಗುರಿ ಹೊಂದಲಾಗಿತ್ತು. ಈ ಪೈಕಿ ಪೂರ್ಣಗೊಂಡಿರುವುದು ಅದೇ ದುರ್ಘ‌ಟನೆ ಸಂಭವಿಸಿದ ಕಾಲೊ¤àಡಿನ ಬೀಜಮಕ್ಕಿ ಬಳಿ 20 ಲಕ್ಷ ರೂ. ವೆಚ್ಚದಲ್ಲಿ ಕಾಲು ಸಂಕ ನಿರ್ಮಾಣವಾಗಿದೆ. ರಾಜ್ಯ ಸರಕಾರ ಚುನಾವಣೆ ಅನಂತರ ಅನುದಾನವನ್ನು ಬಿಡುಗಡೆಗೊಳಿಸದೇ ಬಾಕಿ ಇಟ್ಟಿರುವುದರಿಂದ 6 ಪ್ಯಾಕೇಜ್‌ಗಳ 21 ಕಡೆಗಳ
ಕಾಮಗಾರಿ ಬಾಕಿಯಾಗಿದೆ.

ಪ್ರಸ್ತಾವನೆ ಸಲ್ಲಿಕೆ
ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದರಲ್ಲಿ 1 ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಇರುವ 21 ಕಡೆಗಳಲ್ಲಿ ಕಾಲು ಸಂಕ ನಿರ್ಮಾಣ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಸರಕಾರ ಸೂಚಿಸಿದೆ. ಮತ್ತೆಪ್ರಸ್ತಾವನೆ ಸಲ್ಲಿಸಲಾಗುವುದು. ಅದರಲ್ಲಿ ಕೆಲವೊಂದು ಕಡೆ ಅನುದಾನ ಹೆಚ್ಚಳದ ಬೇಡಿಕೆಯೂ ಇದೆ. ಅದನ್ನು ಸರಕಾರದ ಗಮನಕ್ಕೆ ತರಲಾಗುವುದು. ಮತ್ತೆ ಈ ಕಾಮಗಾರಿ ಆರಂಭಕ್ಕೆ ಪ್ರಯತ್ನಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ಎಲ್ಲೆಲ್ಲ ಕಾಲು ಸಂಕ ಬಾಕಿ?

Advertisement

ಕಾಲೊ¤àಡು ಗ್ರಾಮದ ಆಚಾರಡಿ, ಬೋಳಂಬಳ್ಳಿ ದೇಗುಲ ಬಳಿ, ಗೋಳಿಹೊಳೆಯ ಮಾವಿನಹೊಳೆ ಕುಂದಲಗುಡ್ಡೆ, ಕೊಲ್ಲೂರಿನ ಹಳ್ಳಿಬೇರು ಬಳಿ ಒಟ್ಟು 66 ಲಕ್ಷ ರೂ. ವೆಚ್ಚದಲ್ಲಿ 4, ನಾಡ ಗ್ರಾಮದಲ್ಲಿ 2, ಜಡ್ಕಲ್‌ ಗ್ರಾಮದ ಹೊಸಮನೆ ಬಳಿ, ತಗ್ಗರ್ಸೆ ಗ್ರಾಮದ ನೀರೋಡಿ, ತಲ್ಮಕ್ಕಿಯಲ್ಲಿ ಒಟ್ಟು 63 ಲಕ್ಷ ರೂ. ವೆಚ್ಚದಲ್ಲಿ 5, ಚಿತ್ತೂರಿನ ನೈಕಂಬಳ್ಳಿ, ಬಿಜೂರಿನ ಬವಳಾಡಿ, ಪಡುವರಿಯ ಬೆಸ್ಕೂರು, ಕಾಶಿಕೊಡ್ಲುವಿನಲ್ಲಿ ಒಟ್ಟು 55 ಲಕ್ಷ ರೂ. ವೆಚ್ಚದಲ್ಲಿ 3, ಆಜ್ರಿಯ ಬೆಳುವಾಣ, ಯಡಮೊಗೆಯ ಕುಂಡ್ಲುಮನೆ, ರಾಂಪಯ್ಯನಜೆಡ್ಡು, ಹಕ್ಲಾಡಿಯ ಸಂತೆಗದ್ದೆ, ಮಚ್ಚಟ್ಟುವಿನ ತೊಂಬಟ್ಟುವಿನ ಸೂರಿಬೈಲು ಒಟ್ಟು 70 ಲಕ್ಷ ರೂ. ವೆಚ್ಚದಲ್ಲಿ 5, ಕಂಬದಕೋಣೆಯ ಕಪ್ಪಾಡಿ, ಗಂಗೊಳ್ಳಿ ಲೈಟ್‌ಹೌಸ್‌ ಅಂಗನವಾಡಿ ಬಳಿ, ಯಳಜಿತ್‌ನ ಸಾಂತೇರಿ, 75 ಲಕ್ಷ ರೂ. ವೆಚ್ಚದಲ್ಲಿ
ಒಟ್ಟು 3, ಕಟ್‌ಬೆಲೂ¤ರು ಸುಳೆÕಯ ನಂದಿ ಮಾಸ್ಟರ್‌ ಮನೆ ಬಳಿ 1.51 ಕೋ.ರೂ. ವೆಚ್ಚದಲ್ಲಿ 1 ಕಾಲು ಸಂಕ ಕಾಮಗಾರಿ ಬಾಕಿಯಾಗಿದೆ.

ತುರ್ತಾಗಿ ಬಿಡುಗಡೆಗೊಳಿಸಿ

ಹಿಂದಿನ ಸರಕಾರದ ಅವಧಿಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಅಪಾಯಕಾರಿ ಸ್ಥಳಗಳಲ್ಲಿ ಕಾಲು ಸಂಕಗಳ ನಿರ್ಮಾಣಕ್ಕೆ 5 ಕೋ.ರೂ. ಅನುದಾನ ಮಂಜೂರುಗೊಳಿಸಲಾಗಿತ್ತು. ಆದರೆ ಈ ಸರಕಾರ ಬಾಕಿ ಇಟ್ಟಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಈ ಬಗ್ಗೆ ಉಡುಪಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯರ ಗಮನಕ್ಕೂ ತರಲಾಗಿದೆ. ಮೇ ತಿಂಗಳ ಮೊದಲು
ಪೂರ್ಣಗೊಳ್ಳಬೇಕಿದೆ. ಅಪಾಯಕಾರಿ ಸ್ಥಳಗಳಲ್ಲಿ ತುರ್ತಾಗಿ ಕಾಲು ಸಂಕ ಆಗಬೇಕಾಗಿದ್ದು, ಅದನ್ನು ಆದ್ಯತೆ ನೆಲೆಯಲ್ಲಿ ಬಿಡುಗಡೆಗೊಳಿಸಲಿ.
ಗುರುರಾಜ ಗಂಟಿಹೊಳೆ,
ಬೈಂದೂರು ಶಾಸಕರ

*ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next