Advertisement

ಫ್ಲೈಓವರ್‌ ಅಡಿ ಅಭಿವೃದ್ಧಿ ಕುರಿತು ಸಭೆ: ನಗರ ಪ್ರವೇಶಕ್ಕೆ ಅವಕಾಶ ನೀಡಲು ಚಿಂತನೆ

09:15 PM Feb 24, 2022 | Team Udayavani |

ಕುಂದಾಪುರ: ಫ್ಲೈಓವರ್‌ ಅಡಿಯಲ್ಲಿ ರಾಶಿಬಿದ್ದ ತ್ಯಾಜ್ಯ ರಾಶಿ ಇನ್ನೂ ಪೂರ್ಣ ಪ್ರಮಾಣದಲ್ಲಿ ತೆರವಾಗಿಲ್ಲ. ಇದನ್ನು ತೆರವುಗೊಳಿಸುವುದು ಸೇರಿದಂತೆ ಯಾವ ರೀತಿ ಅಭಿವೃದ್ಧಿ ನಡೆಸಬಹುದು ಎಂದು ಗುರುವಾರ ಸಹಾಯಕ ಕಮಿಷನರ್‌ ಅವರು ಸಭೆ ನಡೆಸಿದರು.

Advertisement

ಗಡುವು ಮೀರಿದೆ:

ಕಚೇರಿಯಲ್ಲಿ ಎಸಿ ಕೆ. ರಾಜು ಅವರು ಸಭೆ ನಡೆಸಿ, ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು ತ್ಯಾಜ್ಯ ರಾಶಿ ಪೂರ್ಣವಾಗಿ ತೆರವಾಗಿಲ್ಲ. ಸೆಪ್ಟೆಂಬರ್‌ನಲ್ಲಿ 4 ದಿನಗಳ ಗಡುವು ಪಡೆದ ಗುತ್ತಿಗೆದಾರ ಸಂಸ್ಥೆ ಇನ್ನೂ ಪೈಪ್‌ಗ್ಳನ್ನು ತೆಗೆದಿಲ್ಲ. ಅಡಿಭಾಗದಲ್ಲಿ ಈವರೆಗೆ ವಾಹನ ನಿಲ್ಲಿಸುತ್ತಿದ್ದಲ್ಲಿ ಈಗ ಕಾಂಕ್ರಿಟ್‌ ಕಟ್ಟೆ ನಿರ್ಮಿಸಿದೆ. ಈ ಮೂಲಕ ಯಾವುದೇ ವಾಹನಗಳು ಪ್ರವೇಶಿಸದಂತೆ ಮಾಡಿದೆ. ಎಂಜಿನಿಯರ್‌ ಅಸೋಸಿಯೇಶನ್‌ನವರು ಯಾವ ರೀತಿಯಲ್ಲಿ ಅಭಿವೃದ್ಧಿ ನಡೆಸಬಹುದು ಎಂದು ಸಲಹೆಗಳನ್ನು ನೀಡಿದ್ದಾರೆ. ಈ ಕುರಿತು ಇನ್ನಷ್ಟು ವಿಚಾರ ವಿಮರ್ಶೆ ಮಾಡಬೇಕಾದ ಅಗತ್ಯವಿದೆ ಎಂದರು.

ಹೆದ್ದಾರಿಯಿಂದ…

ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಫ್ಲೈಓವರ್‌ ಅಡಿಯಲ್ಲಿ ಅಭಿವೃದ್ಧಿ ಆಗಬೇಕು. ಸುಂದರ ಕುಂದಾಪುರ ನಿರ್ಮಾಣವಾಗಬೇಕು. ಇದಕ್ಕೆ ಎಲ್ಲ ಸಂಘ ಸಂಸ್ಥೆಗಳ ಸಹಕಾರ ಬೇಕು. ಹೆದ್ದಾರಿಯಿಂದ ನಗರಕ್ಕೆ ಪ್ರವೇಶದ ಕುರಿತು ಸಾಕಷ್ಟು ಬೇಡಿಕೆಗಳಿವೆ. ನಗರದ ವ್ಯಾಪಾರ ವಹಿವಾಟಿನ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಿದೆ. ನಗರಕ್ಕೆ ಯಾವ ದಾರಿಯಲ್ಲಿ ಹೆದ್ದಾರಿಯಿಂದ ಬರಬೇಕು ಎನ್ನುವ ಗೊಂದಲ ಮುಂದುವರಿದಿದೆ. ಬಹಳ ದೂರದವರೆಗೆ ಹೋಗಿ ಕುಂದಾಪುರ ದಾಟಿತು ಎಂದಾಗುತ್ತಿದೆ. ಅದಕ್ಕಾಗಿ ಹೆದ್ದಾರಿಯಿಂದ ನೆಹರೂ ಮೈದಾನ ಬಳಿ ಅವಕಾಶ ನೀಡುವುದಾದರೆ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುವುದು. ಚರಂಡಿಗೆ ಅಳವಡಿಸಿದ ಸ್ಲಾéಬ್‌ಗಳ ಎತ್ತರ ತಗ್ಗಿಸಿ ಸ್ವಲ್ಪ  ಸ್ಥಳಾವಕಾಶ ದೊರೆಯುವಂತೆ ಮಾಡಿದರೆ ವಾಹನ ಸರಾಗವಾಗಿ, ಸಂಚಾರ ದಟ್ಟಣೆ ಆಗದಂತೆ, ಗೊಂದಲ ಆಗದಂತೆ ಸರ್ವಿಸ್‌ ರಸ್ತೆಗೆ ಪ್ರವೇಶ ಆಗಬಹುದು ಎಂದರು.

Advertisement

ಮಾಹಿತಿ :

ಎಂಜಿನಿಯರ್‌ ಅಸೋಸಿಯೇಶನ್‌ನವರು ಯಾವ ಮಾದರಿಯಲ್ಲಿ ಅಭಿವೃದ್ಧಿ ನಡೆಸಬಹುದು ಎಂದು ಮಾಹಿತಿಗಳನ್ನು ಜಿಲ್ಲಾಧಿಕಾರಿಗೆ ಕಳುಹಿಸಿಕೊಟ್ಟಿದ್ದರು. ಜಿಲ್ಲಾಧಿಕಾರಿಯಿಂದ ಎಸಿಯವರಿಗೆ ಸೂಚನೆ ಬಂದಿದ್ದು ಅದರಂತೆ ಸಭೆ ನಡೆಸಲಾಗಿದೆ. ತಹಶೀಲ್ದಾರ್‌ ಕಿರಣ್‌ ಗೌರಯ್ಯ, ಪುರಸಭೆ ಅಧಿಕಾರಿ ಗಣೇಶ್‌ ಜನ್ನಾಡಿ ಮೊದಲಾದವರಿದ್ದರು. ಸಭೆಯ ಬಳಿಕ ಫ್ಲೈಓವರ್‌ ಅಡಿಯಲ್ಲಿ ವೀಕ್ಷಣೆ ಎಂದು ನಿಗದಿಯಾಗಿತ್ತಾದರೂ ಕೊನೆಯ ಕ್ಷಣದಲ್ಲಿ ರದ್ದಾಯಿತು. ಮುಂದಿನ ದಿನಗಳಲ್ಲಿ ಈ ಕುರಿತಾದ ಪರಿಶೀಲನೆಯೂ ನಡೆಯಲಿದೆ.

ಜಿಲ್ಲಾಧಿಕಾರಿಯಿಂದ ಸಹಾಯಕ ಕಮಿಷನರ್‌ ಅವರಿಗೆ ಬಂದ ಸೂಚನೆಯಂತೆ ಸಭೆ ನಡೆಸಲಾಗಿದೆ. ಇನ್ನೊಮ್ಮೆ ಗುತ್ತಿಗೆದಾರ ಸಂಸ್ಥೆ, ಹೆದ್ದಾರಿ ಇಲಾಖೆ ಯೋಜನಾಧಿಕಾರಿಗಳಿದ್ದು ಸಭೆ ನಡೆಸುವುದಾಗಿ ಸಹಾಯಕ ಆಯುಕ್ತರು ಸೂಚಿಸಿದ್ದಾರೆ. –ಗೋಪಾಲಕೃಷ್ಣ  ಶೆಟ್ಟಿ,ಮುಖ್ಯಾಧಿಕಾರಿ, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next