Advertisement
ಮಂಗಳೂರಿನಿಂದ ವಾರಕ್ಕೆ 3 ದಿನ ತಿರುಪತಿಗೆ ರೈಲು ಸಂಚಾರವಿದೆ. ಕುಂದಾಪುರ ಭಾಗದಿಂದ ತೆರಳುವವರು ಮಂಗಳೂರಿಗೆ ಬೇರೊಂದು ವಾಹನ ಅಥವಾ ರೈಲಿನಲ್ಲಿ ತೆರಳಿ ಅಲ್ಲಿಂದ ತಿರುಪತಿ ರೈಲನ್ನೇರಬೇಕು. ಆ ಸಮಸ್ಯೆ ನಿವಾರಿಸಲು ಕಾರವಾರ, ಕುಂದಾಪುರ ಭಾಗದಿಂದ ಹೆಚ್ಚುವರಿ ರೈಲನ್ನು ಬೆಂಗಳೂರು ಅಥವಾ ಕೇರಳ ಮಾರ್ಗವಾಗಿ ಆರಂಭಿಸಬಹುದು ಅಥವಾ ವಾಸ್ಕೊ-ತಿರುಪತಿ ರೈಲನ್ನು ಕರಾವಳಿಗೆ ವಿಸ್ತರಿಸಬಹುದು. ಕಳೆದ ವರ್ಷ ಮಂಗಳೂರು – ಅಹ್ಮದಾಬಾದ್ ರೈಲು ಮಂಜೂರಾಗಿದ್ದರೂ ಇನ್ನೂ ಸಂಚಾರ ಆರಂಭಿಸಿಲ್ಲ. ಅದೇ ರೈಲನ್ನು ಕುಂದಾಪುರ ಅಥವಾ ಕಾರವಾರದಿಂದ ಆರಂಭಿಸಿ, ಅಹ್ಮದಾಬಾದ್‌ನಿಂದ ವಾರಾಣಸಿಗೆ ವಿಸ್ತರಿಸಿದರೆ ಕರ್ನಾಟಕ ಕರಾವಳಿಯ ಯಾತ್ರಿಕರಿಗೆ ಪ್ರಯೋಜನವಾಗಲಿದೆ ಎನ್ನುವುದು ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿಯ ಅಭಿಪ್ರಾಯ.
– ಗಣೇಶ್ ಪುತ್ರನ್,
ಅಧ್ಯಕ್ಷ, ಕುಂದಾಪುರ ರೈಲು ಪ್ರಯಾಣಿಕರ ಸಮಿತಿ