Advertisement

ಕೊರವಡಿ ಕಡಲ ತೀರದಲ್ಲಿ ಅಪರಿಚಿತ ಶವ ಪತ್ತೆ

12:38 PM Aug 30, 2019 | Mithun PG |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ  ಕೊರವಡಿ ಕಡಲ ತೀರದ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು ಸಂಪೂರ್ಣ  ಕೊಳೆತ ಸ್ಥಿತಿಯಲ್ಲಿದೆ.

Advertisement

ಕಡಲ ತೀರದ ಮಾಸ್ತಿ ತಾಂಡೇಲರ ಮನೆಯ ಸಮೀಪದಲ್ಲಿ  ಶವ ಪತ್ತೆಯಾಗಿದ್ದು, ನಿನ್ನೆ ಗಂಗೊಳ್ಳಿ ನದಿಯಲ್ಲಿ ತೇಲುತ್ತಿತ್ತು ಎಂದು ಹೇಳಲಾಗಿದೆ. ಟೀ  ಶರ್ಟ್ ,ಪ್ಯಾಂಟ್ ಹಾಗೂ ಸೊಂಟದ ದಾರ ಶವದ ಮೇಲಿದ್ದು  ಸ್ಥಳಿಯ ವ್ಯಕ್ತಿಯೇ  ಎಂಬ ಅನುಮಾನ ಕಾಡುತ್ತಿದೆ.

ಸುಮಾರು 5.5 ಅಡಿ ಎತ್ತರವಿದ್ದು, ನಸು ಬಿಳಿ ಮೈ ಬಣ್ಣ, 3/4 ಆರ್ಮಿ ಚಡ್ಡಿ ಧರಿಸಿರುತ್ತಾನೆ. ಕಡು ನೀಲಿ ಬಣ್ಣದ ಅರ್ಧ ತೋಳಿನ ಟಿ ಶರ್ಟ್ ತೊಟ್ಟಿರುತ್ತಾನೆ. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ.

ಕುಂದಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next