Advertisement

ಕುಂದಾಪುರ : ಅಕ್ರಮ ಗಣಿಗಾರಿಕೆ ಅಡ್ಡೆಗೆ ದಾಳಿ : 4ಲಾರಿ, 8 ಮೆ.ಟನ್‌ ಮರಳು, ಕೆಂಪು ಕಲ್ಲು ವಶ

09:31 AM Sep 05, 2022 | Team Udayavani |

ಕುಂದಾಪುರ: ಅಕ್ರಮ ಗಣಿಗಾರಿಕೆ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ರವಿವಾರ ಬೆಳ್ಳಂಬೆಳಗ್ಗೆ ಕುಂದಾಪುರ ತಾಲೂಕಿನ ಎರಡು ಕಡೆಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಸಂಧ್ಯಾ ಅವರು ದಾಳಿ ನಡೆಸಿದ್ದು, 4 ಲಾರಿ ಸಹಿತ 8 ಮೆಟ್ರಿಕ್‌ ಟನ್‌ ಮರಳು ಮತ್ತು 14 ಮೆಟ್ರಿಕ್‌ ಟನ್‌ ಕೆಂಪು ಕಲ್ಲು ವಶಕ್ಕೆ ಪಡೆದಿದ್ದಾರೆ.

Advertisement

ಸಾರ್ವಜನಿಕರಿಂದ ಬಂದ ಮಾಹಿತಿಯ ಮೇರೆಗೆ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಸಂದೀಪ್‌ ಜಿ.ಯು. ಅವರ ಮಾರ್ಗದರ್ಶನದಲ್ಲಿ ಮುಂಜಾನೆ 5.30ಕ್ಕೆ ಹಕ್ಲಾಡಿ ಗ್ರಾಮದ ಬಟ್ಟೆಕುದ್ರು ಪರಿಸರದ ಚಕ್ರಾ ನದಿಯಲ್ಲಿ ಅನಧಿಕೃತವಾಗಿ ಮರಳುಗಾರಿಕೆ ನಡೆಸಿ ಸಾಗಾಣಿಕೆ ನಡೆಸುತ್ತಿದ್ದ ಸ್ಥಳಕ್ಕೆ ಭೂ ವಿಜ್ಞಾನಿ ಸಂಧ್ಯಾ ಅವರು ದಾಳಿ ನಡೆಸಿ 1 ಲಾರಿಯನ್ನು ವಶಕ್ಕೆ ಪಡೆದುಕೊಂಡರು.

ಇನ್ನೊಂದು ಪ್ರಕರಣದಲ್ಲಿ ಸಾರ್ವಜನಿಕರ ಮಾಹಿತಿ ಮೇರೆಗೆ ಆಲೂರು ಗ್ರಾಮದಲ್ಲಿ ಅನಧಿಕೃತ ಕೆಂಪುಕಲ್ಲು ಕೋರೆಗಳಿಂದ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ 3 ಲಾರಿ ಮತ್ತು 14 ಮೆಟ್ರಿಕ್‌ ಟನ್‌ ಕೆಂಪು ಕಲ್ಲುಗಳನ್ನು ಹೊಸಾಡು ಗ್ರಾಮದ ಬಂಟ್ವಾಡಿ ಪರಿಸರದಲ್ಲಿ ಬೆಳಗ್ಗೆ 8 ಗಂಟೆಗೆ ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಚಾಲಕ ಯೋಗೇಶ್ವರ್‌ ಶೆಟ್ಟಿಗಾರ್‌ ಸಹಕರಿಸಿ ದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಖನಿಜ ಸಹಿತ ವಶಪಡಿಸಿಕೊಂಡಿರುವ ನಾಲ್ಕು ವಾಹನಗಳನ್ನು ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಇರಿಸಲಾಗಿದೆ.

ಇದನ್ನೂ ಓದಿ : ಕೊಟ್ಟಿಗೆಹಾರ : ರಸ್ತೆ ಅಪಘಾತಕ್ಕೆ ಒಂದೇ ವಾರದಲ್ಲಿ 30 ಜಾನುವಾರುಗಳು ಬಲಿ

Advertisement
Advertisement

Udayavani is now on Telegram. Click here to join our channel and stay updated with the latest news.

Next