Advertisement

Kundapura: ಬನ್ಸ್‌ ರಾಘ ಕೊಲೆ ಪ್ರಕರಣ- ಇಬ್ಬರು ಆರೋಪಿಗಳಿಗೆ 3 ದಿನ ಪೊಲೀಸ್‌ ಕಸ್ಟಡಿ

03:10 PM Oct 06, 2023 | Team Udayavani |

ಕುಂದಾಪುರ: ಇಲ್ಲಿನ ಚಿಕ್ಕಮ್ಮನಸಾಲು ರಸ್ತೆಯಲ್ಲಿ ರವಿವಾರ ಸಂಜೆ ಚೂರಿ ಇರಿತದಿಂದ ಮೃತರಾಗಿದ್ದ ರಾಘವೇಂದ್ರ ಶೇರುಗಾರ್‌ ಅಲಿಯಾಸ್‌ ಬನ್ಸ್‌ ರಾಘ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಶುಕ್ರವಾರ (ಅಕ್ಟೋಬರ್‌ 06) ಕುಂದಾಪುರದ ನ್ಯಾಯಾಲಕ್ಕೆ ಹಾಜರುಪಡಿಸಿದ್ದಾರೆ.

Advertisement

ಇದನ್ನೂ ಓದಿ:National ಕ್ರೀಡಾ ಚಾಂಪಿಯನ್‍ಶಿಪ್ ; ಪಣಜಿ ಶಾಲೆಗಳಲ್ಲಿ ದೀಪಾವಳಿ ರಜೆ ಬದಲಾವಣೆ

ಶಿವಮೊಗ್ಗ ಮೂಲದ ಶಫೀವುಲ್ಲಾ (40ವರ್ಷ) ಮತ್ತು ಇಮ್ರಾನ್‌ (43ವರ್ಷ)ನನ್ನು ಪೊಲೀಸ್‌ ಕಸ್ಟಡಿಗೆ ನೀಡುವಂತೆ ಪೊಲೀಸರು 2ನೇ ಹೆಚ್ಚುವರಿ ಸಿವಿಲ್‌ ಮತ್ತು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಮೂರು ದಿನಗಳ ಕಾಲ ವಿಚಾರಣೆಗೆ ಪೊಲೀಸ್‌ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಆದೇಶ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ಏನಿದು ಪ್ರಕರಣ:

ಕುಂದಾಪುರದ ಸಂಗಮ್‌ ಬಳಿಯಿಂದ ಬರುತ್ತಿದ್ದ ವ್ಯಾಗನರ್‌ ಕಾರು ಹಾಗೂ ರಾಘ ಅವರ ಕಾರು ತುಸು ಸ್ಪರ್ಶವಾಗಿತ್ತು. ಈ ಸಂದರ್ಭದಲ್ಲಿ ಸಣ್ಣ ಮಾತಿನ ಚಕಮಕಿಯಲ್ಲಿ ಮುಗಿಯಬಹುದಾಗಿದ್ದ ಪ್ರಕರಣ ಹಿಂಬಾಲಿಸಿಕೊಂಡು ಬಂದು ಜಗಳ ಮಾಡುವಲ್ಲಿಗೆ ಬಂದು ತಲುಪಿ, ಪರಸ್ಪರ ಹಲ್ಲೆ ನಡೆದಿತ್ತು. ಜಗಳವನ್ನು ಸ್ಥಳೀಯರು ಬಿಡಿಸಿ ಒಂದು ಹಂತದಲ್ಲಿ ಪ್ರಕರಣ ಮುಗಿಯುವ ಹಂತ ತಲುಪಿತ್ತಾದರೂ ಮತ್ತೆ ಹೊಡೆದಾಟ ನಡೆದು ಚೂರಿಯಿಂದ ಇರಿಯುವ ಮೂಲಕ ಕೊಲೆಯಾಗುವ ಹಂತ ತಲುಪಿತ್ತು.

ಚೂರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ರಾಘು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬನ್ಸ್‌ ರಾಘು (42ವರ್ಷ) ಸೋಮವಾರ ಕೊನೆಯುಸಿರೆಳೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next