Advertisement
ಗಾಯಗೊಂಡ ಜೋಸ್ಸಿ ಡಿಮೆಲ್ಲೋ ಅವರನ್ನು ಕೋಟೇಶ್ವರದ ಖಾಸಗಿ ಆಸ್ಪತ್ರೆ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರ ಗೋವಿಂದ ವಿರುದ್ಧ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಕುಂಭಾಶಿ ಗ್ರಾಮದ ಜಾಗ ಹಾಗೂಅಲ್ಲಿನ ಮನೆಯನ್ನು ಮಾರಾಟ ಮಾಡುವುದಾಗಿ ನಂಬಿಸಿ, ಹಣಪಡೆದು, ಬಳಿಕ ಆ ಜಾಗದ ಸಾಲದಿಂದಾಗಿ ಏಲಂ ಆಗಿದೆಯೆಂದು ಹೇಳಿ ವಂಚಿಸಿರುವುದಾಗಿ ಗೋಪಾಡಿಯ ಅಣ್ಣಪ್ಪ ಅವರು ಪ್ರಮೀಳಾ ಕೆ. ಹಾಗೂ ಪತಿ ಸತೀಶ ವಿರುದ್ಧ ದೂರು ನೀಡಿದ್ದಾರೆ. ನಕಲಿ ಪರವಾನಿಗೆ
ಕುಂದಾಪುರ: ಕೋಟೇಶ್ವರ ಗ್ರಾಮದ ಮೀನು ಮಾರುಕಟ್ಟೆ ರಸ್ತೆಯ ಬಳಿಯ ಬಟ್ಟೆ ಅಂಗಡಿಗೆ ನಕಲಿ ಉದ್ಯಮ ಲೈಸೆನ್ಸ್ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ. ಬಟ್ಟೆ ಅಂಗಡಿಗೆ ಉದ್ಯಮ ಪರವಾನಿಗೆಯನ್ನು ಪಂಚಾಯತ್ನಿಂದ ನೀಡಿಲ್ಲ. ಆರೋಪಿ ಪ್ರಕಾಶ್ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರ ನಕಲಿ ಸಹಿ ಮಾಡಿ ಪರವಾನಿಗೆಯ ನಕಲಿ ದಾಖಲಾತಿ ಸೃಷ್ಟಿಸಿದ್ದಾಗಿ ಕೋಟೇಶ್ವರ ಗ್ರಾಮ ಪಂಚಾಯತ್ನ ಅಭಿವೃದ್ಧಿ ಅಧಿಕಾರಿ ದಿನೇಶ ದೂರು ನೀಡಿದ್ದಾರೆ.