ಕುಂದಾಪುರ: ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿಯ ವತಿಯಿಂದ ರವಿವಾರ ಕೊಚುವೇಲಿ ಗಂಗಾನಗರ ರೈಲು ನಿಲುಗಡೆ ಆರಂಭದ ಪ್ರಯುಕ್ತ ಇಲ್ಲಿನ ಮೂಡ್ಲಕಟ್ಟೆ ರೈಲು ನಿಲ್ದಾಣದಲ್ಲಿ ಸ್ವಾಗತ ಕೋರಲಾಯಿತು.
ಸುಮಾರು 8 ವರ್ಷಗಳ ಹಿಂದೆ ಬೆಂಗಳೂರು ರಾತ್ರಿ ರೈಲು ಕುಂದಾಪುರ ದಂತಹ ಪ್ರಮುಖ ನಿಲ್ದಾಣಕ್ಕೆ ನಿಲುಗಡೆ ಕೊಡದ ಕಾರಣ ಹುಟ್ಟಿಕೊಂಡ ಈ ಸಮಿತಿ ಈ ವರೆಗೆ ಸಾಕಷ್ಟು ಸತತ ಹೋರಾಟ, ಮನವಿ ಸಲ್ಲಿಸಿ ಹಲವಾರು ಪ್ರಮುಖ ರೈಲುಗಳು ಕುಂದಾಪುರದಲ್ಲಿ ನಿಲ್ಲುವಂತೆ ಮಾಡಿದೆ. 8 ವರ್ಷಗಳ ಹಿಂದೆ ಕೇವಲ 7-8 ರೈಲುಗಳ ನಿಲುಗಡೆಯಿದ್ದ ಕುಂದಾಪುರ ನಿಲ್ದಾಣ ಈಗ 17 ರೈಲುಗಳ ನಿಲ್ದಾಣವಾಗಿದೆ. ಆರಂಭಿಕ ಹೋರಾಟ ದಲ್ಲಿ ಬೆಂಗಳೂರು ರಾತ್ರಿ ರೈಲು, ಅನಂತರ ಮುಂಬಯಿ ಸಿಎಸ್‌ಟಿ, ಇಂಟರ್ಸಿಟಿ, ಡಿಎಂಯು ಮಂಗಳಾ, ಜಬಲ್ಪುರ, ಈಗ ಶ್ರೀಗಂಗಾನಗರ್, ಪುಣೆ ಸುಪರ್ ಫಾಸ್ಟ್ ಮತ್ತು ಪಿಆರ್‌ಎಸ್‌ಎಸ್ ಕೌಂಟರ್ ನಿಲ್ದಾಣಕ್ಕೆ ದಾರಿದೀಪ ಬಸ್ ವ್ಯವಸ್ಥೆ ಕೊಡುವಲ್ಲಿ ಸಮಿತಿ ಶ್ರಮ ವಹಿಸಿದೆ.
ಆರಂಭದಿಂದಲೂ ಸಮಿತಿಯ ಬೆನ್ನೆಲು ಬಾಗಿ ನಿಂತ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರನ್ನು ಅಭಿನಂದಿಸಲಾಯಿತು.
ಸಮಿತಿಯ ಗೌತಮ್ ಶೆಟ್ಟಿ, ಅಜಿತ್ ಶೆಟ್ಟಿ ಕಿರಾಡಿ ಈ ನಿಲುಗಡೆಗೆ ಸಹಕರಿಸಿದ್ದು ಅವರನ್ನು ನೆನಪಿಸಿಕೊಳ್ಳಲಾಯಿತು.
ಸಮಿತಿ ಅಧ್ಯಕ್ಷ ಸೋಮಶೇಖರ್ ಶೆಟ್ಟಿ, ಸಂಚಾಲಕ ವಿವೇಕ್ ನಾಯಕ್, ಸದಸ್ಯರಾದ ಎಚ್.ಎಸ್. ಹತ್ವಾರ್, ಪದ್ಮನಾಭ್ ಶೆಣೈ, ಗಣೇಶ್ ಪುತ್ರನ್, ಪ್ರವೀಣ್ ಟಿ., ರಾಘು ಶೇಟ್, ಉದಯ್, ಕೆ. ಆರ್. ನಾಯಕ್, ಎಂಐಟಿ ಕಾಲೇಜಿನ ಮುಖ್ಯಸ್ಥ ಸಿದ್ಧಾರ್ಥ ಶೆಟ್ಟಿ, ಉದಯ್ ಭಂಡಾರ್ಕರ್, ಅಚ್ಚುತ್, ಕಿಶನ್ ಕುಮಾರ್, ಚಂದ್ರಶೇಖರ್ ಶೆಟ್ಟಿ, ಚಂದ್ರಶೇಖರ ಶ್ರೀಯಾನ್, ಜಗನ್ನಾಥ ಶೆಟ್ಟಿ, ನಾಗರಾಜ್ ಆಚಾರ್, ನರೇಂದ್ರ ಸಂತೋಷ ಮೂಡ್ಲಕಟ್ಟೆ, ರಾಮದಾಸ್ ನಾಯಕ್, ಚಂದ್ರ ಶೇಖರ್ ತಲ್ಲೂರ್, ಶ್ರೀಧರ್, ಕುಮಾರ್ ಖಾರ್ವಿ, ವಿಲ್ ಫ್ರೆಡ್, ಮಹೇಶ್ ಶೆಣೈ, ರಾಜಸ್ಥಾನ್ ಸಮುದಾಯದವರ ಮುಖಂಡ ಮಫಾರಾಮ್, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಸದಸ್ಯ ಗಿರೀಶ್ ಮೊದಲಾದವರು ರೈಲು ನಿಲುಗಡೆಯನ್ನು ಸ್ವಾಗತಿಸಿದರು.