Advertisement

ಬೈಂದೂರು ತಾಲೂಕಿಗೆ ಗಂಗೊಳ್ಳಿಯನ್ನು ಸೇರ್ಪಡೆಗೊಳಿಸದಂತೆ ಪ್ರತಿಭಟನೆ

05:05 PM Apr 13, 2017 | |

ಕುಂದಾಪುರ:  ಗಂಗೊಳ್ಳಿ ಗ್ರಾಮ ವನ್ನು ನೂತನವಾಗಿ ರಚನೆಯಾಗಿರುವ ಬೈಂದೂರು ತಾ|ಗೆ ಸೇರ್ಪಡೆ ಗೊಳಿಸು ವುದನ್ನು ವಿರೋಧಿಸಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಗಂಗೊಳ್ಳಿ ಗಾ.ಪಂ. ಎದುರು ಬುಧವಾರ ನಡೆದ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿದರು.

Advertisement

ತಾ.ಪಂ. ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಜಮಾತುಲ್ಲ ಮುಸ್ಲಿಮಿನ್‌ ಅಧ್ಯಕ್ಷ ಜಿ. ಮಹಮ್ಮದ್‌ ರಫೀಕ್‌, ಹಿಂದೂ ಜಾಗರಣ ವೇದಿಕೆಯ ಉಡುಪಿ ಜಿಲ್ಲಾ ಸಹ ಸಂಚಾಲಕ ಟಿ. ವಾಸುದೇವ ದೇವಾಡಿಗ, ಗ್ರಾ.ಪಂ. ಮಾಜಿ ಸದಸ್ಯ ಉಮಾನಾಥ ದೇವಾಡಿಗ, ಗ್ರಾ.ಪಂ. ಸದಸ್ಯರಾದ ಮುಜಾಹಿದ್‌ ನಾಕುದಾ, ನ್ಯಾಯಾಲಯದ ನಿವೃತ್ತ ಶಿರಸ್ತೇದಾರ್‌ ಜಿ. ಭಾಸ್ಕರ ಕಲೈಕಾರ್‌, ಗಂಗೊಳ್ಳಿ ಚರ್ಚಿನ ಆಡಳಿತ ಮಂಡಳಿ ಸದಸ್ಯೆ ಪ್ರೀತಿ ಫೆರ್ನಾಂಡಿಸ್‌, ಗಂಗೊಳ್ಳಿ ರೋಟರಿ ಕ್ಲಬ್‌ ಅಧ್ಯಕ್ಷ ಎಂ.ಜಿ. ರಾಘವೇಂದ್ರ ಭಂಡಾರ್‌ಕಾರ್‌ ಮೊದಲಾದವರು ಹಾಜರಿದ್ದರು.

ಇದೇ ಸಂದರ್ಭ ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವಿಯನ್ನು ಗಂಗೊಳ್ಳಿ ಗ್ರಾ.ಪಂ. ಆಡಳಿತಾಧಿಕಾರಿ ಸೀತಾರಾಮ ಶೆಟ್ಟಿ ಮತ್ತು ಗ್ರಾಮ ಕರಣಿಕ ರಾಘವೇಂದ್ರ ದೇವಾಡಿಗ ಅವರಿಗೆ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಎಚ್‌.ಎಸ್‌.ಚಿಕ್ಕಯ್ಯ ಪೂಜಾರಿ ಸಲ್ಲಿಸಿದರು. ಪಿಡಿಒ ಬಿ. ಮಾಧವ, ಗಂಗೊಳ್ಳಿ ಗ್ರಾಪಂ ಸದಸ್ಯರು, ಗಂಗೊಳ್ಳಿ ಗ್ರಾಮದ ವಿವಿಧ ಸಂಘ ಸಂಸ್ಥೆಗಳ, ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.

ನಾಗರಿಕ ಹೋರಾಟ ಸಮಿತಿ ಸಂಚಾಲಕ ಬಿ. ರಾಘವೇಂದ್ರ ಪೈ ಸ್ವಾಗತಿಸಿ, ಪ್ರಾಸ್ತಾ ವಿಕ ಮಾತುಗಳನ್ನಾಡಿದರು. 
ಗ್ರಾ.ಪಂ. ಸದಸ್ಯ ಬಿ.ಲಕ್ಷ್ಮೀಕಾಂತ ಮಡಿವಾಳ ವಂದಿಸಿದರು.

ರಾಜ್ಯ ಸರಕಾರ ಬಜೆಟ್‌ನಲ್ಲಿ  ಘೋಷಿಸಿದ ನೂತನ ಬೈಂದೂರು ತಾಲೂಕಿಗೆ ಗಂಗೊಳ್ಳಿ ಗ್ರಾಮವನ್ನು ಸೇರ್ಪಡೆಯಾಗುವ ಬಗ್ಗೆ ಮಾಹಿತಿ ದೊರೆಯುತ್ತಿರುವುದು ಗಂಗೊಳ್ಳಿಯ ನಾಗರಿಕರ ಮೇಲೆ ಕೊಡಲಿ ಪೆಟ್ಟು ಬಿದ್ದಂತೆ ಆಗಿದೆ. ಪ್ರಮುಖವಾಗಿ ಇಲ್ಲಿನ ಜನರ ಮತ್ಸೋÂದ್ಯಮ, ಉನ್ನತ ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಮೇಲೆ ಪ್ರಬಲವಾದ ಆಘಾತವಾಗಿದೆ. ಆದ್ದರಿಂದ ನೂತನವಾಗಿ ರಚನೆಯಾಗಲಿರುವ ಬೈಂದೂರು ತಾಲೂಕಿಗೆ ಗಂಗೊಳ್ಳಿ ಗ್ರಾಮವನ್ನು ಯಾವುದೇ ಕಾರಣಕ್ಕೂ ಸೇರ್ಪಡೆಗೊಳಿಸಬಾರದು. 

Advertisement

ಗಂಗೊಳ್ಳಿಯ ಜನರಿಗೆ ಕುಂದಾಪುರದೊಂದಿಗೆ ಅನೇಕ ದಶಕಗಳ ಅವಿನಾಭಾವ ಸಂಬಂಧವಿದೆ. ಗಂಗೊಳ್ಳಿಯ ಜನರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಕುಂದಾಪುರ ವನ್ನೇ ಅವಲಂಬಿಸಿದ್ದಾರೆ. ಗಂಗೊಳ್ಳಿ-ಕುಂದಾಪುರ ನಡುವೆ ಸೇತುವೆ ನಿರ್ಮಾಣಗೊಂಡಲ್ಲಿ ಗಂಗೊಳ್ಳಿ ಜನರು ಕೇವಲ ಒಂದುವರೆ ಕಿಮೀ ದೂರ ಕ್ರಮಿಸಿದರೆ ಕುಂದಾಪುರ ತಲುಪಬಹುದು. ಗಂಗೊಳ್ಳಿ ಗ್ರಾಮವನ್ನು ಬೈಂದೂರು ತಾಲೂಕಿಗೆ ಸೇರ್ಪಡೆ ಗೊಳಿಸುವ ನಿರ್ಧಾರ ಕೈಗೊಂಡಲ್ಲಿ ಗ್ರಾಮಸ್ಥರೆಲ್ಲರೂ ಒಟ್ಟುಗೂಡಿ ಸಂಘಟಿತ ಹೋರಾಟ ನಡೆಸಲಾಗುವುದು.
-ಬಿ. ಸದಾನಂದ ಶೆಣೈ, ಮಾಜಿ ಮಂಡಲ ಪ್ರಧಾನ

Advertisement

Udayavani is now on Telegram. Click here to join our channel and stay updated with the latest news.

Next